ಬೀಗವು ಭೌತಿಕ ವಸ್ತುವಿನಿಂದ (ಉದಾಹರಣೆಗೆ ಬೀಗದಕೈ, ಕೀಕಾರ್ಡ್, ಬೆರಳಿನ ಗುರುತು, ಆರ್‌ಎಫ಼್ಐಡಿ ಕಾರ್ಡ್, ಭದ್ರತಾ ಟೋಕನ್, ನಾಣ್ಯ ಇತ್ಯಾದಿ), ರಹಸ್ಯ ಮಾತಿಯನ್ನು ಪೂರೈಕೆ ಮಾಡುವುದರಿಂದ (ಉದಾಹರಣೆಗೆ ಸಂಖ್ಯಾ ಕ್ರಮಪಲ್ಲಟನೆ ಅಥವಾ ಸಂಕೇತಪದ), ಅಥವಾ ಮೊದಲೆರಡರ ಸಂಯೋಜನೆಯಿಂದ ತೆರೆದುಕೊಳ್ಳುವ ಒಂದು ಯಾಂತ್ರಿಕ ಅಥವಾ ವಿದ್ಯುನ್ಮಾನ ಭದ್ರಪಡಿಸುವ ಸಾಧನ. ಬೀಗದಕೈಯು ಬೀಗವನ್ನು ನಿಯಂತ್ರಿಸಲು (ಅದನ್ನು ತೆಗೆಯುವುದು ಅಥವಾ ಹಾಕುವುದು) ಬಳಸಲಾದ ಸಾಧನ. ಬೀಗಗಳನ್ನು ತಯಾರಿಸಲು ಬಳಸಲಾದ ವಸ್ತುಗಳಲ್ಲಿ ಹಿತ್ತಾಳೆ, ಲೇಪಿತ ಹಿತ್ತಾಳೆ, ನಿಕೆಲ್ ಬೆಳ್ಳಿ, ಮತ್ತು ಉಕ್ಕು ಸೇರಿವೆ. ೧೮ನೇ ಶತಮಾನದ ಕೊನೆಯ ವರ್ಷಗಳಲ್ಲಿ ಕೈಗಾರಿಕಾ ಕ್ರಾಂತಿಯ ಆರಂಭ ಮತ್ತು ಜೊತೆಗೆ ನಡೆದ ನಿಖರತಾ ಶಿಲ್ಪಶಾಸ್ತ್ರ ಮತ್ತು ಘಟಕ ಮಾನಕೀಕರಣದ ಅಭಿವೃದ್ಧಿಯೊಂದಿಗೆ, ಹೆಚ್ಚೆಚ್ಚು ಸಂಕೀರ್ಣತೆ ಮತ್ತು ಜಟಿಲತೆ ಕೂಡಿದ ಬೀಗ ಮತ್ತು ಬೀಗದ ಕೈಗಳನ್ನು ಉತ್ಪಾದಿಸಲಾಯಿತು. ಈಗಲೂ ಬಳಕೆಯಲ್ಲಿರುವ, ಬೀಗದಲ್ಲಿ ಅಗುಳಿಯು ಚಲಿಸದಂತೆ ತಡೆಯಲು ಸನ್ನೆಕೋಲುಗಳ ಸಮೂಹವನ್ನು ಬಳಸುವ ಸನ್ನೆಕೋಲು ಬೀಳು ಬೀಗವನ್ನು ರಾಬರ್ಟ್ ಬ್ಯಾರನ್ ೧೭೭೮ರಲ್ಲಿ ಪೂರ್ಣಗೊಳಿಸಿದನು.[]

೧೨ನೇ ಶತಮಾನದ ಬೀಗ

ಉಲ್ಲೇಖಗಳು

ಬದಲಾಯಿಸಿ
  1. Pulford, Graham W. (2007). High-Security Mechanical Locks : An Encyclopedic Reference. Elsevier. p. 317. ISBN 0-7506-8437-2.


"https://kn.wikipedia.org/w/index.php?title=ಬೀಗ&oldid=888835" ಇಂದ ಪಡೆಯಲ್ಪಟ್ಟಿದೆ