ಬಿ ವೆಂಕಟ ಸುಬ್ರಮಣ್ಯ, ಮುಂದೆ ಬಿ.ವಿ.ಪಂಡಿತರೆಂದು ಮನೆ-ಮನೆಗಳಲ್ಲಿ ಹೆಸರುಮಾಡಿ, ಮೈಸೂರಿನಿಂದ ೧೫ ಮೈಲಿ ದೂರದ ’ನಂಜನಗೂಡು ದಂತಧಾವನ ಚೂರ್ಣ’ದ ತಯಾರಕರಾದ ’ಸದ್ವೈದ್ಯಶಾಲೆ' ಯನ್ನು ಸ್ಥಾಪಿಸಿದ ಮುತ್ಸದ್ಧಿಗಳು. ಸುಮಾರು ೯೬ ವರ್ಷಗಳ ಹಿಂದೆ, ಹಲ್ಲುಪುಡಿಯ ಚಿಕ್ಕದಾದ ವ್ಯಾಪಾರವನ್ನು ಪ್ರಾರಂಭಿಸಿದರು. ಗುಲಾಬಿಬಣ್ಣದ ಹಲ್ಲುಪುಡಿ ಅರ್ಧ ಆಣೆಗೆ,ಸಣ್ಣ ಮಾಸಲುಬಣ್ಣದ ಕವರ್ ನಲ್ಲಿ, ಶೇಖರಿಟ್ಟು ಮಾರಾಟಮಾಡುತ್ತಿದ್ದರು.

ಪರಿಸ್ತಿತಿಯ ಒತ್ತಡ ಅವರನ್ನು ಒಬ್ಬ ಗೃಹೋದ್ಯಮಿಯಾಗಲು ನೆರವಾಯಿತು ಬದಲಾಯಿಸಿ

ತಾಯಿ ಕೆಂಚಮ್ಮ, ಮದುವೆಯಾದಾಗ ೧೫ ವರ್ಷ ವಯಸ್ಸು. ೫ ತಿಂಗಳ ಗರ್ಭಿಣಿಯಾಗಿದ್ದಾಗಲೆ ವಿಧವೆಯಾದರು. ಬಡತನದ ಜೀವನ, ಮಗುವನ್ನು ಸಾಕುವ ಗುರುತರ ಜವಾಬ್ದಾರಿ. ಕೆಂಚಮ್ಮನವರಿಗೆ, ಮನೆ-ಮದ್ದು ನೀಡುವ ಕಲೆ ಅವರ ಕುಟುಂಬದಿಂದ ಬಂದ ಬಳುವಳಿ. ಮೇಲಾಗಿ ಅವರ ಕೈಗುಣ ಚೆನ್ನಾಗಿತ್ತು. ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಅವರು ತಮ್ಮ ಮಗನನ್ನು ಮನೆಯ ಹತ್ತಿರದಲ್ಲಿದ್ದ ಆಯುರ್ವೇದದ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಮದ್ಯಾನ್ಹದ ಬಿಸಿಊಟ ಸಿಗುತ್ತಿತ್ತು. ಶಾಲೆಯ ಆಯುರ್ವೇದ ಪಂಡಿತರ ಮನೆಯಲ್ಲಿ ೩ ರೂ ಬಾಡಿಗೆಗೆ ವಾಸಕ್ಕೆ ಸ್ಥಳವೂ ದೊರೆಯಿತು.

ಮದುವೆ ಬದಲಾಯಿಸಿ

ತಾಯಿಯವರ ಆದೇಶದಂತೆ ಪಂಡಿತರು ಮದುವೆಯಾದರು. ಮುಂದೆ ಹೆಂಡತಿ ಮತ್ತು ತಾಯಿಯವರನ್ನು ಸಾಕುವ ಜವಾಬ್ದಾರಿ ಅವರದಾಯಿತು. ತಾಯಿಯವರ ಸಹಾಯದಿಂದ ಹಲ್ಲುಪುಡಿ ತಯಾರಿಸಿ ಮಾರಲು ಆರಂಭಿಸಿದರು. ತಮ್ಮ ಸೈಕಲ್ ನಲ್ಲಿ ೨೦ ಕಿಮೀ ದೂರದ ಮೈಸೂರು ನಗರದ ಚಾಮುಂಡಿಬೆಟ್ಟದ ತಪ್ಪಲಿಗೆ ಹೋಗಿ,ಅಲ್ಲಿ ಬೆಳೆದಿದ್ದ ಗಿಡಮೂಲಿಕೆಗಳನ್ನು ಕೊಯ್ದು ತಂದು, ಗುಲಾಬಿಬಣ್ಣದ ಪುಡಿಮಾಡಿಚೀಲದಲ್ಲಿ ತುಂಬಿಕೊಂಡು ’ಜಗನ್ ಮೋಹನ ರಸ್ತೆ’ಯಲ್ಲಿ ಮಾರುತ್ತಿದ್ದರಂತೆ. ವೈದಿಕಮನೆತನದಲ್ಲಿ ಬೆಳೆದ ವೈದ್ಯವೃತ್ತಿಯನ್ನು ಆರಿಸಿಕೊಂಡರು. ಮೊದಲ ಹೆಂಡತಿ ನಿಧನವಾದಾಗ, ’ಲಕ್ಶ್ಮೀದೇವಮ್ಮ’ನನ್ನು ವಿವಾಹವಾದರು. ಆಕೆಯ ಸಹಕಾರದಿಂದ ಅವರ ವ್ಯಾಪಾರ ಇಮ್ಮಡಿಸಿತು. ಆಗಿನಕಾಲದಲ್ಲಿ ಮನೆಮನೆಗಳಲ್ಲಿ ಪ್ರಸಿದ್ಧಿಪಡೆದ ’ಕಸ್ತೂರಿಮಾತ್ರೆ’, ಯ ತಯಾರಿಕೆ ಆರಂಭವಾಯಿತು. ೧೯೧೮ ರಲ್ಲಿ ’ಫ್ಲ್ಯೂ ಜ್ವರ’, ತೀವ್ರ ಸ್ವರೂಪದಲ್ಲಿದ್ದಾಗ ಮಾತ್ರೆಯ ಬೇಡಿಕೆ ಹೆಚ್ಚಿತು.೧೯೫೪ ರಲ್ಲಿ ಉದ್ಯೋಗಿಗಳ ಸಂಖ್ಯೆ ೨೧೦ ೭೫ ಲಕ್ಷಕ್ಕೇರಿತು. ಅಗರಬತ್ತಿ, ’ನೀಲ, ಜ್ಯೋತಿಷ್ ಮರ, [ಕೇಶತೈಲ], ’ಶುಂಠಿ ಬಾಣಂತಿ ಲೇಹ, ಮುಂತಾದ ಉತ್ಪನ್ನಗಳು ಬಿಸಿದೋಸೆಯಂತೆ ಜನಪ್ರಿಯವಾದವು. ಇಂತಹ ಅನೇಕ ಹೊಸ-ಉತ್ಪನ್ನಗಳನ್ನು ಸೃಶ್ಟಿಸಿ, ಮಾರಾಟಮಾಡಿ ಮುಂದುವರೆದ ಪಂಡಿತರ 'ಯಶೋಗಾಥೆ' ಯಿಂದ ಪ್ರೇರಣೆಪಡೆದವರು ಹಲವಾರು.

ವೇದಾಂತದ ಅಧ್ಯಯನ, ಅಧ್ಯಾತ್ಮದ ಕಡೆ ಒಲವು ಹೆಚ್ಚಾಯಿತು ಬದಲಾಯಿಸಿ

ತಮ್ಮ ಜೀವನ ಶೈಲಿಯನ್ನು ಬದಲಿಸಿದರು. ವೇದಾಂತದ ಅಧ್ಯಯನ, ಅಧ್ಯಾತ್ಮದ ಕಡೆ ಒಲವು ಹೆಚ್ಚಾಯಿತು. ಪ್ರವಚನಗಳ ಏರ್ಪಾಡು, ಸದ್ಭಕ್ತಿ, ಸದ್ವಿಚಾರ, ಸಂಕೀರ್ತನ, ಸಂಸಂಗ, ಸದ್ವಿನಿಯೋಗ, ದಾನಧರ್ಮ, ಅವರ ಜೀವನದ ಅವಿಭಾಜ್ಯ ಅಂಗಗಳಾದವು. ಕೃಷಿಯಕಡೆ ಅವರ ಮನ ವಾಲಿತು.ಒಂದು ಸುಂದರವಾದ ಗುಲಾಬಿ ತೋಟವನ್ನು ’ಗುಲ್ಖನ್,’ ಗೆ ತಮ್ಮ ತೋಟದ ಗುಲಾಬಿಯ ಎಸಳುಗಳನ್ನೇ ಬಳಸುತ್ತಿದ್ದರು.

ಧನ್ವಂತರಿ, ಆಯುರ್ವೇದಾಶ್ರಮ’ ಸ್ಥಾಪನೆ ಬದಲಾಯಿಸಿ

೧೯೮೨ ರಲ್ಲಿ ’ಧನ್ವಂತರಿ, ಆಯುರ್ವೇದಾಶ್ರಮ’ ಸ್ಥಾಪನೆಮಾಡಿ, ರೋಗಿಗಳಿಗೆ ಉಚಿತವಾಗಿ ಔಷಧಿಯನ್ನು ಕೊಡುತ್ತಿದ್ದರು.

ಆಗಿನಕಾಲದಲ್ಲಿ ಪುಟ್ಟ ಉದ್ಯಮಿಯಾಗಿದ್ದ ಪಂಡಿತರು, ಜನಹಿತ ಕಾರ್ಯದಲ್ಲಿ ದುಡಿದರು ಬದಲಾಯಿಸಿ

ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಟ್ಟರು. ಅವರಬಳಿ ದುಡಿಯುತ್ತಿದ್ದ ಉದ್ಯೋಗಿಗಳ ಯೋಗಕ್ಷೇಮದ ಬಗ್ಗೆ ಕಾಳಜಿ. ನಂಜನಗೂಡಿನಲ್ಲಿ ೨೦ ವರ್ಷ ಟೆನ್ನಿಸ್ ಕ್ಲಬ್ ನಡೆಸಿದರು. ಅವರೊಬ್ಬ ಒಳ್ಳೆಯ ಕಾಲ್ಚೆಂಡ್ ಆಟಗಾರರು. ೧೯೭೫ ರಲ್ಲಿ ಅವರು ನಿಧನರಾದರು.