ಬಿ. ವಿ. ಕಕ್ಕಿಲಾಯ ಸ್ವಾತಂತ್ರ್ಯ ಹೋರಾಟಗಾರ, ಭಾರತೀಯ ರಾಜಕಾರಣಿಯಾಗಿದ್ದರು.[೧]

ಹಿನ್ನಲೆ ಬದಲಾಯಿಸಿ

ಕಕ್ಕಿಲಾಯ ಕಾಸರಗೋಡಿನಲ್ಲಿ 1919ರ ಏಪ್ರಿಲ್ 11ರಂದು ಜನಿಸಿದರು ತಂದೆ ವಿಷ್ಣು ಕಕ್ಕಿಲ್ಲಾಯ ಮತ್ತು ಗಂಗಮ್ಮ . ಕಾಸರಗೋಡಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ , 1937ರಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಿಂದ ರಸಾಯನಶಾಸ್ತ್ರದಲ್ಲಿ ಪದವಿ ಶಿಕ್ಷಣ ಪಡೆದರು.[೨]

ರಾಜಕೀಯ ಬದಲಾಯಿಸಿ

  • ಬ್ರಿಟಿಷರ ವಿರುದ್ಧ ವಿದ್ಯಾರ್ಥಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ಕಮ್ಯುನಿಸ್ಟ್ ಸಿದ್ಧಾಂತದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ ಸೇರಿದರು[೩]
  • 1942ರಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅವರನ್ನು ಬಂಧಿಸಲಾಗಿತ್ತು.
  • ಮದ್ರಾಸ್ ಅಸೆಂಬ್ಲಿಯಿಂದ ಸಿಪಿಐ ಪಕ್ಷ ಕಕ್ಕಿಲ್ಲಾ ಅವರನ್ನು ರಾಜ್ಯಸಭೆಗೆ ಸದಸ್ಯರಾಗಿ ಆಯ್ಕೆಮಾಡಿತ್ತು.
  • ಕರ್ನಾಟಕದ ಏಕೀಕರಣದ ಹೋರಾಟದಲ್ಲಿ ಕಕ್ಕಿಲಾಯ ಸಕ್ರಿಯರಾಗಿದ್ದರು
  • 1972ರಲ್ಲಿ ವಿಧಾನಸಭೆಗೆ ಬಂಟ್ವಾಳದಿಂದ ಆಯ್ಕೆ
  • 1978ರಲ್ಲಿ ವಿಧಾನಸಭೆಗೆ ವಿಟ್ಲದಿಂದ ಆಯ್ಕೆ
  • ಡಿ ದೇವರಾಜ್ ಅರಸ್ ಅಧಿಕಾರ ಅವಧಿಯಲ್ಲಿ ಭೂಸುಧಾರಣೆ ಕಾಯಿದೆ ಸಮಿತಿಯ ಸದಸ್ಯರಾಗಿದ್ದರು[೪]

ಬರವಣಿಗೆ ಬದಲಾಯಿಸಿ

  • ಅವರ ಆತ್ಮ ಚರಿತ್ರೆ ‘ಬರೆಯದ ದಿನಚರಿಯ ಮರೆಯದ ಪುಟಗಳು[೫]
  • ಕಾರ್ಲ್‌ಮಾರ್ಕ್ಸ್ ಬದುಕು ಬರಹ
  • ಕಮ್ಯುನಿಸಂ
  • ಇರವು ಮತ್ತು ಅರಿವು
  • ಬರೆಯದ ದಿನಚರಿಯ ಮರೆಯದ ಪುಟಗಳು
  • ಫ್ರೆಡರಿಕ್ ಏಂಜಲ್ಸ್

ಪ್ರಶಸ್ತಿ ಬದಲಾಯಿಸಿ

  • ಕರ್ನಾಟಕ ಸುವರ್ಣ ಏಕೀಕರಣ ಪ್ರಶಸ್ತಿ,
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
  • ನೀರ್ಪಾಜೆ ಭೀಮ ಭಟ್ ಪ್ರಶಸ್ತಿ,
  • ಕರ್ನಾಟಕ ತುಳು ಅಕಾಡೆಮಿ ಪ್ರಶಸ್ತಿ

ಉಲ್ಲೇಖಗಳು ಬದಲಾಯಿಸಿ

  1. "B.V. Kakkilaya passes away". The Hindu. www.thehindu.com. 5 June 2012. Retrieved 5 May 2020.
  2. "ಸ್ವಾತಂತ್ರ್ಯ ಹೋರಾಟಗಾರ ಬಿ.ವಿ.ಕಕ್ಕಿಲ್ಲಾಯ ಇನ್ನಿಲ್ಲ". vijaykarnataka.com. Retrieved 6 May 2020.
  3. "ದ.ಕ ಜಿಲ್ಲೆಯಲ್ಲಿ ಗೆಲುವಿನ ಉತ್ತರ ಕಂಡುಕೊಳ್ಳಲಾಗದ ಎಡಪಕ್ಷಗಳು". kannada.oneindia.com. Retrieved 6 May 2020.
  4. "Kakkilaya fought for beedi, cashew factory workers". www.deccanherald.com. Retrieved 5 May 2020.
  5. "ಸಮಾಜವಾದಿಯ ನಾಯಕನ ನೂರರ ನೆನಪು ಬಿ. ವಿ. ಕಕ್ಕಿಲ್ಲಾಯ ಜನ್ಮಶತಾಬ್ದ". www.udayavani.com. Retrieved 6 May 2020.