ಬಿ.ತಿಪ್ಪೇರುದ್ರಪ್ಪ
ಬಿ. ತಿಪ್ಪೇರುದ್ರಪ್ಪ' ಕನ್ನಡದ ಸಮ ಕಾಲೀನ ವೈಚಾರಿಕ ಹಾಸ್ಯ ಸಾಹಿತ್ಯ ಕ್ಷೇತ್ರದ ಸಾಹಿತಿ. ದಿನಾಂಕ ೨೦-೧೦-೧೯೪೨ರಲ್ಲಿ ಚಿತ್ರದುರ್ಗದ ಸಮೀಪದ ಗುಡ್ಡದರಂಗವ್ವನಹಳ್ಳಿಯಲ್ಲಿ ಜನಿಸಿದ ಶ್ರೀಯುತರು, ಚಿತ್ರದುರ್ಗದಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ನಿವೃತ್ತ ರಾಜನೀತಿ ಶಾಸ್ತ್ರದ ಉಪನ್ಯಾಸಕರು, ಪ್ರವೃತ್ತಿಯಲ್ಲಿ ಸಾಹಿತಿ .
ಕೃತಿಗಳು
ಬದಲಾಯಿಸಿಪಠ್ಯ : ರಾಜ್ಯ ಶಾಸ್ತ್ರ ಪರಿಚಯ ( ದ್ವಿತೀಯ ಪಿಯುಸಿ ಪಠ್ಯಪುಸ್ತಕ),
ಹಾಸ್ಯ ಕೃತಿಗಳು :ಮುವ್ವತ್ತು ವಿಡಂಬನೆಗಳು ,ನಿಂಬಣ್ಣನ ಎಲೆಕ್ಷನ್ ಡ್ಯೂಟಿ, ಸಾಲಾಯ ತಸ್ಮೈನಮಃ ,ಹಾಸ್ಯ ರಸಾಯನ ,ವಿ ವಾಂಟ್ ಡೇಟಿಂಗ್ ಪವರ್,ಇಂಗ್ಲೀಷ್ ಇಂಜಕ್ಷನ್ ( ವಿನೋದ ಸಾಹಿತ್ಯ ಪ್ರಶಸ್ತಿ ವಿಜೇತ ಕೃತಿ),
ಮಕ್ಕಳ ಸಾಹಿತ್ಯ :ಹಕ್ಕಿಗಳು (ಪದ್ಯಗಳು),ಪುಟ್ಟನ ಕಾನ್ವೆಂಟ್ (ಪದ್ಯಗಳು),ಕಾಡಿನಲ್ಲಿ ಕ್ರಿಕೆಟ್ ( ಕತೆಗಳು ),ಕಾಡಿನಲ್ಲಿ ಕ್ರಿಕೆಟ್ ( ಪದ್ಯಗಳು),ಕಿಟ್ಟ ಮತ್ತು ಗಿಳಿ (ಪದ್ಯಗಳು ),
ನಾಟಕಗಳು :ಬಡವ ಬದುಕ್ದ , ತಲೆಗೊಂದು ಮುಂಡಾಸು ; ಮನೆಗೋಂದು ಸಂಡಾಸು, ಕಾಡಿನಲ್ಲಿ ಕ್ರಿಕೆಟ್( ಮಕ್ಕಳ ನಾಟಕ)
ಸಂಪಾದನೆ
ಬದಲಾಯಿಸಿವಿನೋದ ೯೯ ( ಕರ್ನಾಟಕ ಸಾಹಿತ್ಯ ಅಕ್ಯಾಡಮಿಗಾಗಿ), ಸುನಾಮಿಯ ಸುಳಿಯಲ್ಲಿ , ರಾಷ್ಟ್ರೀಯ ಉದ್ಯೋಗ ಖಾತ್ರಿ ಅಧಿನಿಯಮ ( ೨೦೦೫) ಮಾಹಿತಿ ರೂಪದ ಕೃತಿ,
ಅವರ ಮಕ್ಕಳ ಕವನ ಸಂಕಲನಕ್ಕೆ ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ಮಹದೇವಪ್ಪ ಲೋಕಪ್ಪ ಕರಲಟ್ಟಿ ಸಾಹಿತ್ಯ ಪ್ರತಿಷ್ಟಾನದವರು ಕೊಡುವ ಪ್ರಶಸ್ತಿ ಲಭಿಸಿದೆ .
ಕಳೆದ ೨೨ ವರ್ಷಗಳಿಂದ ಪ್ರಜಾವಾಣಿ , ಸುಧಾ, ಮಯೂರ ಬಳಗಕ್ಕೆ ಸತತ ಲೇಖನಗಳು ,ಪುಂಡಲೀಕ್ ಸೇಟ್ ಪತ್ರಿಕೆಗೆ ,ಮೂರು ವರ್ಷಗಳ ಅಂಕಣ ಬರಹ .
ತಿಪ್ಪೇರುದ್ರಪ್ಪನವರು ರಚಿಸಿ ಅಭಿನಯಿಸಿದ ನಾಟಕಗಳು, ಚಿನ್ನದಸರ, ಮಲೆನಾಡ ಮಡಿಲಲ್ಲಿ, ಕೋಟು, ಸೂರ್ಯೋದಯ,
ಶ್ರೀಯುತರು ಪ್ರಜಾವಾಣಿ ದೀಪಾವಳಿ ಸಂಚಿಕೆಯ ಮಕ್ಕಳ ಕವನಗಳ ತೀರ್ಪುಗಾರರಾಗಿದ್ದರು.ಮಧ್ಯಪ್ರದೇಶದ ಭೂಪಾಲ್ ನಲ್ಲಿ ೧೯೯೩ರಲ್ಲಿ ನಡೆದ ಕನ್ನಡ,ಹಿಂದಿ ಮಕ್ಕಳ ಸಾಹಿತ್ಯ ರಚನಾ ಸಿಬಿರದ ಡೆಲಿಗೇಟ್ ಆಗಿದ್ದರು.