ಬಿ.ಟಿ.ಎಮ್. ಲೇಔಟ್ ವಿಧಾನಸಭಾ ಕ್ಷೇತ್ರ

ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಸಂಖ್ಯೆ-೧೭೨) ಬೆಂಗಳೂರು ನಗರ ಜಿಲ್ಲೆಗೆ ಸೇರಿರುವ, ೨೮ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭಾಗವೂ ಹೌದು. ಬೊಮ್ಮನಹಳ್ಳಿ, ಜಯನಗರ, ಚಿಕ್ಕಪೇಟೆ ಮತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರಗಳು ಬಿಟಿಎಮ್ ಲೇಔಟ್ ಕ್ಷೇತ್ರದ ಸುತ್ತಲೂ ಇರುವ ಇತರ ಕ್ಷೇತ್ರಗಳು.

ಬೆಂಗಳೂರು ನಗರ ಜಿಲ್ಲೆಯ ನಕ್ಷೆ. ಬಿಟಿಎಮ್ ಲೇಔಟ್ ಕ್ಷೇತ್ರ ಕೆಂಪು ಬಣ್ಣದಲ್ಲಿದೆ.

ಕ್ಷೇತ್ರದ ವಿಶೇಷತೆ ಬದಲಾಯಿಸಿ

ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದ್ದು ೨೦೦೮ರಲ್ಲಿ. ಈ ಕ್ಷೇತ್ರದ ಹೆಸರಿನಲ್ಲಿ ೩ ಊರುಗಳ ಹೆಸರಿದೆ. ಅವು- ಬೈರಸಂಧ್ರ, ತಾವರೆಕೆರೆ ಮತ್ತು ಮಡಿವಾಳ. ೨೦೦೮ರಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆ ಆಗುವ ಮುನ್ನ ಈ ಕ್ಷೇತ್ರ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇತ್ತು. ಕ್ಷೇತ್ರದ ವಿಭಜನೆಯ ನಂತರ ತನ್ನ ವ್ಯಾಪ್ತಿಯಲ್ಲಿದ್ದ ಜಕ್ಕಸಂದ್ರ, ಇಜಿಪುರ, ಕೋರಮಂಗಲ ಸೇರಿದಂತೆ ಜಯನಗರ ಕ್ಷೇತ್ರದಲ್ಲಿದ್ದ ಲಕ್ಕಸಂದ್ರ ಸುದ್ದಗುಂಟೆಪಾಳ್ಯ ಮತ್ತು ಮಡಿವಾಳ ಪ್ರದೇಶಗಳು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಆಗಿ ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಆದರೆ ತನ್ನ ಹೆಸರಿನ ಮೊದಲಿಗೆ ಇದ್ದ ಬೈರಸಂದ್ರ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆ ಆಯಿತು[೧].

ಪ್ರಸ್ತುತ, ಬೃಹತ್ ಬೆಂಗಳೂರು ನಗರಪಾಲಿಕೆಯ ೮ ವಾರ್ಡುಗಳು-ಕಲ್ಲಸಂದ್ರ, ಆಡುಗೋಡಿ, ಈಜಿಪುರ, ಕೋರಮಂಗಲ, ಸುದ್ದಗುಂಟೆಪಾಳ್ಯ, ಮಡಿವಾಳ, ಜಕ್ಕಸಂದ್ರ ಮತ್ತು ಬಿಟಿಎಮ್ ಲೇಔಟ್- ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ[೧].

ಚುನಾವಣಾ ಇತಿಹಾಸ ಬದಲಾಯಿಸಿ

ಈ ಕ್ಷೇತ್ರಕ್ಕೆ ಮೊದಲ ಬಾರಿಗೆ ಚುನಾವಣೆ ನಡೆದದ್ದು ೨೦೦೮ರಲ್ಲಿ[೧]. ಅಂದಿನಿಂದ ಒಟ್ಟು ೪ ಬಾರಿ (೨೦೦೮, ೨೦೧೩, ೨೦೧೮, ೨೦೨೩) ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಮಲಿಂಗಾರೆಡ್ಡಿ ಅವರೇ ಗೆಲುವು ಸಾಧಿಸುತ್ತಿದ್ದಾರೆ[೨]. ೨೦೦೮ರ ಪ್ರಥಮ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಜಿ ಪ್ರಸಾದ್ ರೆಡ್ಡಿ ವಿರುದ್ಧ ರಾಮಲಿಂಗಾ ರೆಡ್ಡಿ ೧೮೫೭ ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಅಂದು ಪ್ರಸಾದ್ ರೆಡ್ಡಿ ೪೪,೯೪೯ ಮತಗಳನ್ನು ಪಡೆದಿದ್ದರೆ, ರಾಮಲಿಂಗಾರೆಡ್ಡಿ ೪೬,೮೦೫ ಮತಗಳನ್ನು ಪಡೆದಿದ್ದರು[೨].

ಇನ್ನು, ೨೦೧೩ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸುಧಾಕರ್ ಅವರ ವಿರುದ್ಧ ಜಯಗಳಿಸಿದರು. ಅಂದಿನ ಚುನಾವಣೆಯಲ್ಲಿ ಸುಧಾಕರ್ ೨೦,೬೬೪ ಮತಗಳನ್ನು ಪಡೆದರೆ, ರಾಮಲಿಂಗಾ ರೆಡ್ಡಿ ಅವರು ೬೯,೭೧೨ ಮತಗಳನ್ನು ಪಡೆದಿದ್ದರು[೩].

೨೦೧೮ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿ, ಬಿಜೆಪಿ ಪಕ್ಷದ ಲಲ್ಲೇಶ್ ರೆಡ್ಡಿ ೪೬,೬೦೭ ಮತಗಳನ್ನು ಪಡೆದರೆ , ರಾಮಲಿಂಗಾರೆಡ್ಡಿ ೬೭,೦೮೫ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು[೪].

ಮತದಾರರು ಬದಲಾಯಿಸಿ

ಅಂಕಿ ಅಂಶ ಬದಲಾಯಿಸಿ

ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ವಲಸಿಗರ ಮತಗಳು ನಿರ್ಣಾಯಕವಾಗಿವೆ ಎನ್ನಬಹುದು. ಉತ್ತರ ಭಾರತೀಯರು, ಮಲಯಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಒಟ್ಟು ಮತದಾರರ ಸಂಖ್ಯೆ ೨,೭೫,೦೨೮

  • ಪುರುಷ ಮತದಾರರು-೧,೪೩,೨೬೬
  • ಮಹಿಳಾ ಮತದಾರರು-೧,೩೧,೭೧೭
  • ತೃತೀಯ ಲಿಂಗಿಗಳು- ೪೫[೫]

ಜಾತಿವಾರು ಲೆಕ್ಕಾಚಾರ ಬದಲಾಯಿಸಿ

ರೆಡ್ಡಿ ಮತ್ತು ತಿಗಳ ಸಮುದಾಯದ ಮತಗಳು ನಿರ್ಣಾಯಕ ಎಣಿಸುವ ಈ ಕ್ಷೇತ್ರದಲ್ಲಿ ಒಕ್ಕಲಿಗರು ೭೦,೦೦೦ ಇದ್ದರೆ, ಕ್ರಿಶ್ಚಿಯನ್ ಮತ್ತು ಮುಸ್ಲಿಮರು ೫೫,೦೦೦ದಷ್ಟು ಇದ್ದಾರೆ.

ಉಲ್ಲೇಖಗಳು ಬದಲಾಯಿಸಿ

  1. ೧.೦ ೧.೧ ೧.೨ "ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ". eedina.com. ಈ ದಿನ. Retrieved 14 May 2023.
  2. ೨.೦ ೨.೧ "Karnataka Assembly Election Results in 2008". elections.in. 5 Dots Partners. Retrieved 14 May 2023.
  3. "B.T.M Layout". indiavotes.com. IndiaVotes. Archived from the original on 14 ಮೇ 2023. Retrieved 14 May 2023.
  4. "AC: B.T.M Layout 2018". indiavotes.com. indiavotes. Archived from the original on 14 ಮೇ 2023. Retrieved 14 May 2023.
  5. "172-B.T.M Layout Information". kgis.ksrsac.in. ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ. Retrieved 14 May 2023.