ಬಿ.ಎಸ್.‌ರಾಜಯ್ಯಂಗಾರ್. (ಜನನ: ೧೯೦೧ - ಮರಣ: ಜುಲೈ ೪,೧೯೭೮) ಅದ್ಭುತವಾಗಿ ಹಾಡಿ, ಜನಮನದಲ್ಲಿ ನೆಲೆಗೊಳಿಸಿದ,'ಆಡಿಸಿದಳೆಶೋದಾ,ಜಗದೋದ್ಧಾರನಾ;' [೧] ಎಂಬ ಕೀರ್ತನೆ, ಕರ್ನಾಟಕ ಸಂಗೀತ ಪ್ರಿಯರ ಮನದಲ್ಲಿ ಇಂದಿಗೂ ಹಸಿರಾಗಿದೆ.

ಬಾಲ್ಯಸಂಪಾದಿಸಿ

ರಾಜಯ್ಯಂಗಾರ್ ಕರ್ನಾಟಕದ ಬಾಣಾವರ ಎಂಬ ಊರಿನಲ್ಲಿ ಜನಿಸಿದರು.ತಮ್ಮ ೧೩ನೇ ವಯಸ್ಸಿಗೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಸೋದರಮಾವ ಶಾಮಾಚಾರ್ ಆಶ್ರಯದಲ್ಲಿ ಬೆಳೆದರು.

ಸಂಗೀತಸಂಪಾದಿಸಿ

ಇವರ ಕಂಠವನ್ನು ಮೆಚ್ಚಿಕೊಂಡ ವರದಾಚಾರ್ ಇವರನ್ನು ತಮ್ಮ 'ರತ್ನಾವಳಿ ಥಿಯೇಟ್ರಿಕಲ್ ಕಂಪೆನಿ'ಗೆ ಸೇರಿಸಿಕೊಂಡರು.ಅಲ್ಲಿಯೇ ಶ್ರೀನಿವಾಸ ಅಯ್ಯಂಗಾರರಿಂದ ಸಂಗೀತ ಕಲಿತರು. ೧೯೩೦ರಲ್ಲಿ ಚೆನ್ನೈನ 'ಎಗ್ಮೋರ್ ಸಂಗೀತ ಸಭಾ'ದಲ್ಲಿ ನಡೆಸಿದ ಕಛೇರಿ ಇವರಿಗೆ ಪ್ರಖ್ಯಾತಿ ತಂದುಕೊಟ್ಟಿತು.ನಂತರ ೧೯೩೨ರಲ್ಲಿ 'ಓಡಿಯನ್ ಜರ್ಮನ್ ಕಂಪೆನಿ' ಅವರ ಜಗದೋದ್ಧಾರನಾ,ಕಂಡು ಕಂಡು ನೀ ಎನ್ನ,ಕ್ಷೀರ ಸಾಗರ ಶಯನ,ಬ್ರೋಚೇವರೆವರುರಾ...ಮುಂತಾದ ಕೀರ್ತನೆಗಳ ಧ್ವನಿಸುರುಳಿ ಹೊರತಂದಿತು.ಈ ಮೂಲಕ ರಾಜಯ್ಯಂಗಾರರು ದೇಶಾದ್ಯಂತ ಜನಪ್ರಿಯರಾದರು.ಇವರ ಕಛೇರಿಗಳಿಗೆ ದೇಶ-ವಿದೇಶಗಳಲ್ಲಿ ಜನರು ಕಿಕ್ಕಿರಿದು ತುಂಬಿರುತ್ತಿದ್ದರು. [೨]

ಬೆಳ್ಳಿತೆರೆಯ ನಂಟುಸಂಪಾದಿಸಿ

ಇವರ ಆಪ್ತಮಿತ್ರರಾದ ಆರ್.ನಾಗೇಂದ್ರರಾಯರು ಬಲವಂತವಾಗಿ ಇವರನ್ನು ಕನ್ನಡ ಚಿತ್ರರಂಗಕ್ಕೆ ಎಳೆತಂದರು. ಹರಿಶ್ಚಂದ್ರ ಚಿತ್ರದಲ್ಲಿ ನಾರದನ ಪಾತ್ರ ನಿರ್ವಹಣೆಯೊಂದಿಗೆ,ಅವರು ಹಾಡಿದ 'ದೇವ ದೇವನೆ ಶರಣು'ಎಂಬ ಕೀರ್ತನೆ ಜನಪ್ರಿಯವಾಯಿತು.ಆರ್.ನಾಗೇಂದ್ರರಾಯರ ಇನ್ನೊಂದು ಚಿತ್ರ ಜಾತಕಫಲದಲ್ಲಿ ಕೂಡಾ ನಟಿಸಿದರು. ತೆಲುಗಿನ ಜಲಂಧರ,ತಮಿಳಿನ ನಾಟ್ಯರಾಣಿ,ಹಿಂದಿಯ ತುಳಸಿದಾಸ್ -ಅವರು ನಟಿಸಿದ ಚಿತ್ರಗಳಲ್ಲಿ ಕೆಲವು.೧೯೫೧ರಲ್ಲಿ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗಲೇ ಸಿನಿಮಾ ತ್ಯಜಿಸಿ, ಸಂಗೀತ ಕ್ಷೇತ್ರದಲ್ಲೇ ಮುಂದುವರೆಯಲು ನಿರ್ಧರಿಸಿದರು.೧೯೫೪ರಲ್ಲಿ ಮೈಸೂರು ಆಕಾಶವಾಣಿಯಲ್ಲಿ ನೀಡಿದ 'ರಾಗಂ-ತಾನಂ-ಪಲ್ಲವಿ'ಎಂಬ ವಿಶಿಷ್ಟ ಕಛೇರಿ ಜನಪ್ರಿಯವಾಗಿದೆ.

ಪ್ರಶಸ್ತಿ,ಗೌರವಗಳುಸಂಪಾದಿಸಿ

  • ೧೯೭೩ - ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ

ಉಲ್ಲೇಖಗಳುಸಂಪಾದಿಸಿ

  1. 'Archive of Indian music', 'ಆಡಿಸಿದಳೆಶೋದಾ,ಜಗದೋದ್ಧಾರನಾ;' ಕೀರ್ತನೆ,
  2. The Shaping of an Ideal Carnatic Musician Through Sādhana, By Pantula Rama