ಬಿಳಿವಾರ
ಒಂದು ಜಾತಿಯ ದ್ವಿದಳಧಾನ್ಯ
ಬಿಳಿವಾರ ಮರ (ಬಿಲ್ವಾರ) ಫ಼ೆಬೇಸಿಯೀ ಕುಟುಂಬದ ಸದಸ್ಯವಾಗಿದ್ದು, ವೇಗವಾಗಿ ಬೆಳೆಯುವ ಪರ್ಣಪಾತಿ ಮರವಾಗಿದೆ. ಎತ್ತರದಲ್ಲಿ ೧೫ ರಿಂದ್ ೨೫ ಮೀ. ಮುಟ್ಟುತ್ತದೆ, ಮತ್ತು ವ್ಯಾಸವು ೧೨೦-೧೫೦ ಸೆ.ಮಿ. ಮುಟ್ಟುತ್ತದೆ. ಇದು ಭಾರತದ ಅನೇಕ ಭಾಗಗಳಿಗೆ ಸ್ಥಳೀಯವಾಗಿದೆ ಮತ್ತು ಶ್ರೀಲಂಕಾ, ಬಾಂಗ್ಲಾದೇಶ, ಚೀನಾ ಇತ್ಯಾದಿ ದೇಶಗಳಲ್ಲಿ ಕಂಡುಬರುತ್ತದೆ.[೧] ಇದು ನೈಟ್ರೋಜನ್‍ನ್ನು ಸ್ಥೀರೀಕರಿಸುವ ಅಗ್ರ ಮರಗಳಲ್ಲಿ ಒಂದು.
ಬಿಳಿವಾರ ಮರವು ಆಕರ್ಷಕ ಕಂದು ಬಣ್ಣದಿಂದ ಹಿಡಿದು ಕಪ್ಪು ಬಣ್ಣದವರೆಗಿನ, ಹಲವುವೇಳೆ ಪಟ್ಟಿಯುಳ್ಳ, ಬಾಳಿಕೆ ಬರುವ ಮತ್ತು ದಟ್ಟವಾದ ಚೇಗನ್ನು ಹೊಂದಿರುತ್ತದೆ. ಇದನ್ನು ಕಡಿಮೆ ಸಮಸ್ಯೆಗಳೊಂದಿಗೆ ಸಂಸ್ಕರಿಸಬಹುದು, ಮತ್ತು ಇದನ್ನು ಉತ್ತಮವಾಗಿ ಬೇಕಾದ ರೂಪಕ್ಕೆ ತರಬಹುದು ಮತ್ತು ನಯಗೊಳಿಸಬಹುದು. ಹಾಗಾಗಿ ರಚನಾತ್ಮಕ ಕಟ್ಟಿಗೆ, ಪೀಠೋಪಕರಣಗಳು ಮತ್ತು ಕೃಷಿ ಉಪಕರಣಗಳಲ್ಲಿ ಅನ್ವಯಗಳನ್ನು ಹೊಂದಿದೆ.
ಉಲ್ಲೇಖಗಳು
ಬದಲಾಯಿಸಿ- ↑ "Albizia odoratissima (L.f.) Benth. by M.K. HOSSAIN and T.K. NATH, Institute of Forestry and Environmental Sciences, Chittagong University, Bangladesh