ಬಿಳಿಕಲ್ ರಂಗಸ್ವಾಮಿ ಬೆಟ್ಟ
ಬಿಳಿಕಲ್ ರಂಗನಾಥ ಸ್ವಾಮಿ ಬೆಟ್ಟವು ಭಾರತದ ಕರ್ನಾಟಕ ಕನಕಪುರ ಪಟ್ಟಣದ ಸಮೀಪವಿರುವ ಬೆಟ್ಟವಾಗಿದೆ. [೧] ಇದು ಬೆಂಗಳೂರು ನಗರದ ದಕ್ಷಿಣಕ್ಕೆ ೭೦ಕಿಲೋ ಮೀಟರ್ ಹಾಗೂ ಕನಕಪುರ ತಾಲೂಕಿನಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿದೆ. ಬೆಟ್ಟದ ಮೇಲೆ ರಂಗನಾಥ ಸ್ವಾಮಿಯ ದೇವಸ್ಥಾನವಿದೆ. ಪಕ್ಕದಲ್ಲಿ ಬೃಹತ್ ಗ್ರಾನೈಟ್ ಬಂಡೆಯ ಸಾಲುಗಳಿವೆ. ಈ ದೇವಾಲಯವು ದೊಡ್ಡದಾದ ಗ್ರಾನೈಟ್ ಬಂಡೆಯ ಕೆಳಗೆ ಇದೆ. ಈ ಬೆಟ್ಟವನ್ನು ಬಿಳಿಕಲ್ ಬೆಟ್ಟ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಏಕೆಂದರೆ ಬೆಟ್ಟದ ಸಮೀಪವಿರುವ ಬಿಳಿಕಲ್ಲುಗಳು ಬಹಳ ದೂರದಿಂದಲೇ ಕಾಣಿಸುತ್ತದೆ. ಈ ಶಿಖರವು ೩೭೮೦ ಅಡಿ (೧೧೫೨ ಮೀ) ಎತ್ತರದಲ್ಲಿದೆ.
ಜೀವವೈವಿಧ್ಯ
ಬದಲಾಯಿಸಿಬಿಳಿಕಲ್ ರಂಗಸ್ವಾಮಿ ಬೆಟ್ಟವು ಅರಣ್ಯ ಮೀಸಲು ಪ್ರದೇಶಕ್ಕೆ ಸೇರಿದ್ದು ಹಾಗೂ ಪೊದೆಸಸ್ಯ/ಕುರುಚಲು ಗಿಡಗಳಿಂದ ಕೂಡಿದೆ. ಈ ಕಾಡುಗಳಲ್ಲಿ ಆನೆಗಳು ಮತ್ತು ಇತರೆ ವನ್ಯಜೀವಿ ಪ್ರಾಣಿಗಳನ್ನು ಕಾಣಬಹುದು. ಸಮೃದ್ಧ ಸಸ್ಯವರ್ಗ ಎತ್ತರವಾದ ಬೆಟ್ಟಗಳ ವಿಶಿಷ್ಟವಾಗಿದೆ. ವಿಶೇಷವಾಗಿ ಮಳೆಗಾಲದ ನಂತರ ಇಲ್ಲಿನ ಸಸ್ಯವರ್ಗವು ಸಾಕಷ್ಟು ದಟ್ಟವಾಗಿರುತ್ತದೆ. ಈ ಕಾಡುಗಳು ಸ್ಥಳೀಯವಾಗಿರುವ ವನ್ಯಜೀವಿಗಳಿಗೆ ಮತ್ತು ಪಕ್ಕದ ಕಾಡುಗಳಿಂದ ಬರುವ ಆನೆಗಳಿಗೆ ಆಶ್ರಯ ನೀಡುತ್ತದೆ. ಬೆಟ್ಟದ ಮೇಲ್ಬಾಗದಿಂದ ನಿಂತು ನೋಡಿದಾಗ ಸುತ್ತಮುತ್ತಲಿನ ಬೆಟ್ಟಗಳಿಂದ ಕೂಡಿರುವ ಕನಕಪುರವನ್ನು ನೋಡಬಹುದು. ಈ ಸ್ಥಳದ ದೇವರ ಮಹಿಮೆಯನ್ನು ಸಾರುವ ಸಲುವಾಗಿ ಈ ಬೆಟ್ಟದ ಮೇಲ್ಭಾಗದಲ್ಲಿ ವರ್ಷಕ್ಕೊಮ್ಮೆ ಜನವರಿ ೧೪ ರಂದು ರಂಗನಾಥ ಸ್ವಾಮಿಯ ಉತ್ಸವನ್ನು ನಡೆಸಲಾಗುತ್ತದೆ.ಬೆಟ್ಟಕ್ಕೆ ಚಾರಣ ಹೋಗಬಯಸುವವರು ಕನಕಪುರದ ಮಾರ್ಗವಾಗಿ ಪ್ರವೇಶಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಓಡಾಡುತ್ತದೆ. ಹಾಗಾಗಿ ಸಂಚರಿಸುವಾಗ ಎಚ್ಚರಿಕೆಯಿಂದ ಇರಬೇಕು.
ಗ್ಯಾಲರಿ
ಬದಲಾಯಿಸಿ-
ಮೇಲಿನಿಂದ ಒಂದು ನೋಟ
-
ಮೇಲಿನಿಂದ ಒಂದು ನೋಟ
-
ಮೇಲಿನಿಂದ ಒಂದು ನೋಟ
-
ಮೇಲಿನಿಂದ ಒಂದು ನೋಟ
-
ಮೇಲಿನಿಂದ ಒಂದು ನೋಟ
-
ಹಳೆಯ ದೇವಸ್ಥಾನ ನವೀಕರಣದಲ್ಲಿದೆ.
-
ಮೇಲಿನಿಂದ ಒಂದು ನೋಟ
-
ಮೇಲಿನಿಂದ ಒಂದು ನೋಟ
ಉಲ್ಲೇಖಗಳು
ಬದಲಾಯಿಸಿ