ಬಾಳೆದಿಂಡು ಉಪ್ಪಿನಕಾಯಿ
ಬಾಳೆ ಕಾಂಡದ ಆರೋಗ್ಯ ಪ್ರಯೋಜನಗಳು: ಬಾಳೆ ಕಾಂಡವು[೧] ಸಮೃದ್ಧ ಪೋಷಕಾಂಶಗಳು ಮತ್ತು ಫೈಬರ್‌ನಿಂದ ತುಂಬಿರುತ್ತದೆ. ಮೂತ್ರಪಿಂಡದ ಕಲ್ಲುಗಳಿಗೆ ಇದು ಉತ್ತಮ ಪರಿಹಾರವಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದ ಬಾಳೆ ಕಾಂಡದ ರಸವು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ (ಬಾಳೆ ಕಾಂಡದ ತುಂಡುಗಳನ್ನು ಮಿಶ್ರಣ ಮಾಡಿ, ಜರಡಿ ಮತ್ತು ಚಿಟಿಕೆ ಉಪ್ಪು ಮತ್ತು ಜೀರಿಗೆ ಪುಡಿ ಸೇರಿಸಿ). ಬಾಳೆ ಕಾಂಡವನ್ನು ತಿಂಗಳಿಗೊಮ್ಮೆಯಾದರೂ ನಮ್ಮ ಆಹಾರದಲ್ಲಿ ಸೇರಿಸುವುದು ಒಳ್ಳೆಯದು ಏಕೆಂದರೆ ಇದು ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಸಾಸಿವೆ , ಪಲ್ಯ, ಬೇಲ್ಪುರಿ, ಸಲಾಡ್ ಇತ್ಯಾದಿ ಬಾಳೆ ಕಾಂಡದಿಂದ ಮಾಡಬಹುದಾದ ಹಲವಾರು ಖಾದ್ಯಗಳಿವೆ. ಆದರೆ ಬಾಳೆ ಕಾಂಡವನ್ನು ಬಳಸಿ ನೀವು ಯಾವುದೇ ಖಾದ್ಯವನ್ನು ಮಾಡಬಹುದು.
ಬೇಕಾಗುವ ಸಾಮಗ್ರಿಗಳು:
ಬದಲಾಯಿಸಿ- ಬಾಳೆ ದಿಂಡು
- ಲಿಂಬೆ
- ಉಪ್ಪು
- ಮೆತ್ತೆ
- ಕಾಳು ಮೆಣಸು
- ಮೆಣಸು
- ಜೀರಿಗೆ
- ಎಣ್ಣೆ
- ಸಾಸಿವೆ
- ಅರಶಿನ
ಉಪ್ಪಿನಕಾಯಿ ಮಾಡುವ ವಿಧಾನಗಳು
ಬದಲಾಯಿಸಿಬಾಳೆ ದಿಂಡನ್ನು ಸಣ್ಣ ಸಣ್ಣ ಹೋಲುಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ನಿಂಬೆ ರಸ, ಉಪ್ಪು ಹಾಕಿ ಇಡಬೇಕು. ನಂತರ ಸ್ವಲ್ಪ ಮೆತ್ತೆ, ಕಾಳು ಮೆಣಸು, ಜೀರಿಗೆ, ಮೆಣಸು ಎಲ್ಲವನ್ನು ಪುಡಿ ಮಾಡಿ. ಆ ಪುಡಿಯನ್ನು ಬಾಳೆ ದಿಂಡಿನ ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಡಬೇಕು. ನಂತರ ಒಗ್ಗರಣೆಗೆ, ಎಣ್ಣೆ, ಸಾಸಿವೆ, ಹಾಕಿ ಕೊನೆಗೆ ಅರಶಿನ ಹುಡಿ ಹಾಕಿ ಮಿಕ್ಸ್ ಮಾಡಬೇಕು.
ಉಲ್ಲೇಖ
ಬದಲಾಯಿಸಿ