ಬಾಲಸುಬ್ರಹ್ಮಣ‍್ಯ ಕಂಜರ್ಪಣೆ
ಬಾಲಸುಬ್ರಹ್ಮಣ್ಯ ಕಂಜರ್ಪಣೆ ಎಂಬ ಕಾವ್ಯನಾಮ ಹೊಂದಿದ ಶ್ರೀಯುತ ಕೆ.ಪಿ.ಬಾಲಸುಬ್ರಮಣ್ಯ ಇವರು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಂಜರ್ಪಣೆ ಎಂಬ ಹಳಿಯಲ್ಲಿ ೨೦ ಮೇ ೧೯೫೪ರಂದು ಜನಿಸಿದರು. ಕೃಷಿಕ ಮನೆತನದ ಹಿನ್ನೆಲೆ ಅವರದು. ಉತ್ತಮ ಬರಹಗಾರರು.
ವಿದ್ಯಾಭ್ಯಾಸ, ಜೀವನ
ಬದಲಾಯಿಸಿ- ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿಯನ್ನು ಪಡೆದರು. ಉಡುಪಿ ಲಾ ಕಾಲೇಜಿನಿಂದ ಕಾನೂನು ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಮಡಿಕೇರಿಯ ಸರಕಾರಿ ಹಿರಿಯ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಉಪನ್ಯಾಸಕರಾಗಿಯೂ ಅನುಭವ. ಪ್ರಸ್ತುತ ಕೊಡಗಿನ ಮಡಿಕೇರಿಯಲ್ಲಿ ನ್ಯಾಯವಾದಿಯಾಗಿ ವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.
- ಸ್ವಯಂಪ್ರಭೆ, ಒಡೆದ ಪ್ರತಿಮೆಗಳು, ಮುಂತಾದವು ಇವರ ಪ್ರಕಟಿತ ಕವನ ಸಂಕಲನಗಳು. ಅದೃಷ್ಟದ ಹುಡುಗಿ ಇವರ ಕಥಾ ಸಂಕಲನ. ಗೋಪಾಲಕೃಷ್ಣ ಅಡಿಗ, ಜಿ.ಎಸ್.ಆಮೂರಾ ಇವರ ಬದುಕು-ಬರೆಹವನ್ನು ಕುರಿತು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಿಸಿಲ ಹಂದರ-ವೈಚಾರಿಕ ಲೇಖನಗಳ ಸಂಗ್ರಹ. ತಕ್ಕಡಿಯ ಮುಳ್ಳು ಕೃತಿಯ ಕಾನೂನು ಮತ್ತು ನ್ಯಾಯ ಸಂಬಂಧಿ ಬರೆಹಗಳನ್ನು ಹೊಂದಿದೆ.
- ಗರೂಡಾವತಾರ ಕೃತಿಗೆ ೨೦೦೯ರ ಮುದ್ದಣ ಕಾವ್ಯ ಪುರಸ್ಕಾರ ಲಭಿಸಿದೆ. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಗಾಗಿ ವಿಲ್ ಡ್ಯೂರಂಟಿನ ದಿ ಸ್ಟೋರಿ ಆಫ್ ಸಿವಿಲೈಜೇಷನ್ ಕೃತಿಯ ಮೊದಲ ಸಂಪುಟದ ಎರಡು ಅಧ್ಯಾಯಗಳು ಹಾಗೂ ಕಾವೇರಿ ನ್ಯಾಯಾಧಿಕರಣ ತೀರ್ಪಿನ ಐದನೇ ಸಂಪುಟದ ಕನ್ನಡ ಅನುವಾದವನ್ನು ಮಾಡಿದ ಹಿರಿಮೆ ಇವರದು.
ಕೃತಿಗಳು
ಬದಲಾಯಿಸಿಕವನ ಸಂಕಲನಗಳು
ಬದಲಾಯಿಸಿ- ಸ್ವಯಂಪ್ರಭೆ,
- ಒಡೆದ ಪ್ರತಿಮೆಗಳು
ಕಥಾ ಸಂಕಲನ
ಬದಲಾಯಿಸಿ- ಅದೃಷ್ಟದ ಹುಡುಗಿ
ಬದುಕು-ಬರೆಹ
ಬದಲಾಯಿಸಿ- ಗೋಪಾಲಕೃಷ್ಣ ಅಡಿಗ,
- ಜಿ.ಎಸ್.ಆಮೂರಾ
ವೈಚಾರಿಕ ಲೇಖನಗಳ ಸಂಗ್ರಹ
ಬದಲಾಯಿಸಿ- ಬಿಸಿಲ ಹಂದರ
ಕಾನೂನು ಮತ್ತು ನ್ಯಾಯ ಸಂಬಂಧಿ ಬರೆಹ
ಬದಲಾಯಿಸಿ- ತಕ್ಕಡಿಯ ಮುಳ್ಳು
ಗೌರವ, ಪುರಸ್ಕಾರ
ಬದಲಾಯಿಸಿ- ಗರೂಡಾವತಾರ ಕೃತಿಗೆ ೨೦೦೯ರ ಮುದ್ದಣ ಕಾವ್ಯ ಪುರಸ್ಕಾರ ಲಭಿಸಿದೆ.