ಬಾಲಗ್ರಹ ತೈಲ
ಸಣ್ಣ ಮಕ್ಕಳನ್ನು ಕಾಡುವ ಬಾಲಗ್ರಹ ಪೀಡೆಯನ್ನು ತೊಲಗಿಸಲು. ತುಳುನಾಡಿನಾದ್ಯಂತ ಬಾಲಗ್ರಹ ತೈಲವನ್ನು ಬಳಸುವ ಕ್ರಮ ರೂಡಿಯಲ್ಲಿದೆ. ಇದಕ್ಕೆ. ಫಿಟ್ಸ್ ನ ಎಣ್ನೆ, ಕಣ್ಣಿನ ಎಣ್ಣೆ ಎಂದೂ ಹೇಳುತ್ತಾರೆ. ಇದನ್ನು ಹೆಚ್ಚಾಗಿ ಕಹಿಬೇವಿನ ಎಣ್ಣೆಯಲ್ಲಿ ತಯಾರಿಸುತ್ತಾರೆ. ಎಳ್ಳೆಣ್ಣೆಯಲ್ಲಿಯೂ ತಯಾರಿಸುವುದು ಇದೆ. ಆದರೆ ಬಳಕೆಯಲ್ಲಿರುವುದು ಕಹಿಬೇವಿನ ಎಣ್ಣಯಲ್ಲಿ ತಯಾರಿಸಿದ ಎಣ್ಣೆ. ಬಜೆ, ಪೀನಾರಿ, ಗರುಡಪಾತಾಳ, ಭೂತದಶಕ, ಪೀನಾರಿ, ಜಾಯಿಕಾಯಿ, ಈಶ್ವರಿಬೇರು, ಮುಂತಾದ ಹಲವಾರು ಗಿಡಮೂಲಿಕೆಗಳನ್ನು ಔಷದಿಯ ಅಂಗಡಿಯಿಂದ ತಂದು ಬಿಸಿಲಿನಲ್ಲಿ ಒಣಗಿಸಿ ಹುಡಿ ಮಾಡಿ ಅದನ್ನು ಎಣ್ಣೆಯೊಂದಿಗೆ ಕುದಿಸಬೇಕು . ಇದರೊಂದಿಗೆ, ಬೆಳ್ಳುಳ್ಳಿ, ಕರಿನೆಕ್ಕಿ, ಸದಾಪು, ಮುಂತಾದವುಗಳನ್ನು ಜಜ್ಜಿ ಹಾಕಬೇಕು. ಕುದಿಸುವಾಗ ವಿಶಿಷ್ಟ ಪರಿಮಳ ಬರುತ್ತದೆ. ಇದನ್ನು ನಾಲಗೆ ನೆಕ್ಕಿಸುತ್ತಾರೆ. ಸಂದು ಸಂದುಗಳಲ್ಲಿ ಹಚ್ಚುತ್ತಾರೆ. ಮಗು ಹಟ ಹಿಡಿಯುವುದು, ಫಿಟ್ಸ್ ಬರುವುದು, ಮುಂತಾದ ರೋಗಗಳಿಗೆ ಇದು ಉಪಯೋಗವೆಂದು ಹಲವಾರು ಇದನ್ನು ಉಪಯೋಗಿಸುತ್ತಾರೆ ಕಜ್ಜಿ, ಗಾಯಗಳಿಗೂ ಇದು ಉತ್ತಮ ಔಷದ.