ಬಾಲಕ ಯೇಸುವಿನ ಚರ್ಚ್
ಬೆಂಗಳೂರಿನ ವಿವೇಕನಗರದಲ್ಲಿರುವ ಬಾಲಯೇಸುವಿನ ದೇವಾಲಯವು ತನ್ನ ಪವಾಡಶಕ್ತಿಯ ಕಾರಣದಿಂದ ಕ್ರೈಸ್ತ ಕ್ರೈಸ್ತೇತರರೆನ್ನದೆ ಎಲ್ಲರನ್ನೂ ಕೈಬೀಸಿ ಕರೆಯುತ್ತ ಈ ಪ್ರದೇಶದ ಒಂದು ಸುಂದರ ಸುಸಜ್ಜಿತ ಧಾರ್ಮಿಕ ನೆಲೆಯಾಗಿದೆ. ಅರ್ಧ ವರ್ತುಳಾಕಾರದಲ್ಲಿ ಕಟ್ಟಲಾದ ಈ ಬೃಹತ್ ಕಟ್ಟಡದೊಳಗೆ ಪೂಜಾ ಪೀಠದ ಹಿಂಬದಿಯ ಗೋಡೆಯಲ್ಲಿ ಕ್ರಿಸ್ತಜನನದ ಬೃಹತ್ ಪಟವನ್ನು ಚಿತ್ರಿಸಲಾಗಿದೆ. ಏಕಕಾಲಕ್ಕೆ ಹತ್ತುಸಾವಿರ ಮಂದಿ ಪೂಜೆಯಲ್ಲಿ ಭಾಗವಹಿಸುವಂತೆ ಈ ಚರ್ಚನ್ನು ರೂಪಿಸಲಾಗಿದೆ. ಗುಡಿಯ ಕೆಳಗಿನ ನೆಲಮಾಳಿಗೆಯಲ್ಲಿ ಕಾರುಗಳು ನಿಲ್ಲುವಂತೆ ವ್ಯವಸ್ಥೆ ಮಾಡಲಾಗಿದೆ.