ಬಾರ್ ಕೋಡ್ ಎನ್ನುವುದು ಉಪಕರಣಗಳ ಮೂಲಕ ಓದಬಹುದಾದಂತ, ಮಾಹಿತಿಯನ್ನು ಸೂಚಿಸುವಂತಹ ಆಪ್ಟಿಕಲ್ ಚಿತ್ರಣ ವ್ಯವಸ್ಥೆ[೧]. ಸಾಮಾನ್ಯವಾಗಿ ಇದು ಯಾವ ವಸ್ತುವಿನ ಮೇಲೆ ಇರುತ್ತದೋ ಆ ವಸ್ತುವಿನ ಬಗ್ಗೆ ವಿವರಗಳನ್ನು ಒಳಗೊಂಡಿರುತ್ತದೆ. ಸಾಂಪ್ರದಾಯಿಕ ಬಾರ್ ಕೋಡ್ ಗಳು ಹಲವಾರು ಲಂಬವಾದ ಗೆರೆಗಳನ್ನು ಹೊಂದಿರುತ್ತದೆ. ಆ ಗೆರೆಗಳ ದಪ್ಪ ಹಾಗೂ ಅವುಗಳ ನಡುವಿನ ಜಾಗಗಳ ವ್ಯತ್ಯಾಸದ ಮೂಲಕ ಮಾಹಿತಿಯನ್ನು ಸೂಚಿಸುತ್ತವೆ. ಈ ರೀತಿಯ ಬಾರ್‍ಕೋಡುಗಳು ಒಂದು ಆಯಾಮದ ಬಾರ್ ಕೋಡುಗಳೆಂದು ಗುರುತಿಸಲ್ಪಡುತ್ತವೆ. ತದನಂತರ ಎರಡು ಆಯಾಮದ ಬಾರ್ ಕೋಡುಗಳು ಅಭಿವೃದ್ಧಿಯಾದವು. ಅವು ಆಯತಾಕಾರ, ಚುಕ್ಕಿ, ಬಹುಭುಜಾಕೃತಿ ಮುಂತಾದ ಜ್ಯಾಮಿತೀಯ ವಿನ್ಯಾಸಗಳನ್ನು ಹೊಂದಿರುತ್ತವೆ. ಅವುಗಳನ್ನು ಮ್ಯಾಟ್ರಿಕ್ಸ್ ಕೋಡ್‍ಗಳೆಂದು ಕೂಡ ಕರೆಯಲಾಗುತ್ತದೆ. ಮೊದಲು ಇವುಗಳಲ್ಲಿರುವ ಮಾಹಿತಿಯನ್ನು ಓದಲು ಬಾರ್ಕೋ‌ಡ್ ರೀಡರ್ ಉಪಕರಣ ಬಳಕೆಯಾಗುತ್ತಿತ್ತು. ಈಗಿನ ದಿನಗಳಲ್ಲಿ ಚಿತ್ರಗಳನ್ನು ಓದಲು ಸಾಧ್ಯವಿರುವಂತಹ ಸ್ಮಾರ್ಟ್ ಫೋನ್ ಮುಂತಾದ ಉಪಕರಣಗಳಲ್ಲಿ ತಂತ್ರಾಂಶದ ನೆರವಿನಿಂದ ಬಾರ್‍ಕೋಡ್‍ಗಳಲ್ಲಿನ ಮಾಹಿತಿಯನ್ನು ಓದಬಹುದಾಗಿದೆ.

A UPC-A barcode symbol


ಉಲ್ಲೇಖಗಳುಸಂಪಾದಿಸಿ

ಇವನ್ನೂ ನೋಡಿಸಂಪಾದಿಸಿ

ಕ್ಯುಆರ್ ಕೋಡ್