ಬಾರ್ಟೊಲೊಮೆ ಎಸ್ಟೆಬಾನ್ ಮುರಿಲ್ಲೊ
ಬಾರ್ಟೋಲೊಮೆ ಎಸ್ಟೆಬಾನ್ ಮುರಿಲ್ಲೊ (ಡಿಸೆಂಬರ್ 1617 ರ ಕೊನೆಯಲ್ಲಿ , ಜನವರಿ 1, 1618 ಜನನ - ಏಪ್ರಿಲ್ 3, 1682 ) ಸ್ಪ್ಯಾನಿಷ್ ಬರೊಕ್ ವರ್ಣಚಿತ್ರಕಾರರಾಗಿದ್ದರು. ಧಾರ್ಮಿಕ ಕೃತಿಗಳು, ಸಮಕಾಲೀನ ಮಹಿಳೆಯರ ಮತ್ತು ಮಕ್ಕಳ ವರ್ಣಚಿತ್ರಗಳನ್ನು ಬಿಡಿಸಿದ್ದಾರೆ. ಅವರ ಚಿತ್ರಗಳು ಉತ್ಸಾಹಭರಿತ, ಹೂವಿನ ಹುಡುಗಿಯರ ನೈಜವಾದ ಭಾವಚಿತ್ರಗಳು, ರಸ್ತೆ, ಅರ್ಚಗಳು, ಮತ್ತು ಭಿಕ್ಷುಕರು, ಆ ಕಾಲದ ದೈನಂದಿನ ಜೀವನದ ದಾಖಲೆಗಳನ್ನು ಬಿಡಿಸಿದ್ದಾರೆ .[೧]
Bartolomé Esteban Murillo | |
---|---|
ಜನನ | ಡಿಸೆಂಬರ್ 1617 ರ ಕೊನೆಯಲ್ಲಿ; ಜನವರಿ 1, 1618 ರಲ್ಲಿ ಬ್ಯಾಪ್ಟೈಜ್ ಮಾಡಲಾಯಿತು Seville, Spain |
ಮರಣ | ಏಪ್ರಿಲ್ 3,1682 (64ನೆ ವಯಸ್ಸಿನಲ್ಲಿ) ಸೆವಿಲ್ಲೆ, ಸ್ಪೇನ್ |
ರಾಷ್ಟ್ರೀಯತೆ | ಸ್ಪ್ಯಾನಿಷ್ |
ಸಾಹಿತ್ಯ ಚಳುವಳಿ | ಬರೋಕ್ |
ಬಾಲ್ಯ
ಬದಲಾಯಿಸಿಮುರಿಲ್ಲೋ ಗ್ಯಾಸ್ಪರ್ ಎಸ್ಟೆಬಾನ್ ಮತ್ತು ಮಾರಿಯಾ ಪೆರೆಜ್ ರ ಮಗನಾಗಿ ಜನಿಸಿದರು. ಅವರು ಸೆವಿಲ್ಲೆ ಅಥವಾ ಪಿಲಾಸ್ನಲ್ಲಿ ಸಣ್ಣದಾದ ಅಂಡಲೂಸಿಯನ್ ಪಟ್ಟಣದಲ್ಲಿ ಜನಿಸಿರಬಹುದು ಎಂದು ಹೇಳಲಾಗಿದೆ. ಅವರ ತಂದೆ ಕ್ಷೌರಿಕ ಮತ್ತು ಶಸ್ತ್ರಚಿಕಿತ್ಸಕರಾಗಿದ್ದರು.1627 ಮತ್ತು 1628 ರಲ್ಲಿ ಅವರ ಹೆತ್ತವರು ಮೃತಪಟ್ಟ ನಂತರ,ಅವರು ತಮ್ಮ ಸಹೋದರಿಯ ಗಂಡನ ಆಶ್ರಯದಲ್ಲಿದ್ದರು. ಮುರಿಲ್ಲೋ ತನ್ನ ತಂದೆಯ ಉಪನಾಮವನ್ನು ಅಪರೂಪವಾಗಿ ಬಳಸಿದರು,ಮತ್ತು ಅವನ ತಾಯಿಯ ಅಜ್ಜ, ಎಲ್ವಿರಾ ಮುರಿಲ್ಲೊನಿಂದ ಅವನ ಉಪನಾಮವನ್ನು ತೆಗೆದುಕೊಂಡರು.[೨]
ಲೆಗಸಿ
ಬದಲಾಯಿಸಿಮುರಿಲ್ಲೊ ಅನೇಕ ವಿದ್ಯಾರ್ಥಿಗಳನ್ನು ಮತ್ತು ಅನುಯಾಯಿಯನ್ನು ಹೊಂದಿದ್ದರು. ಅವರ ವರ್ಣಚಿತ್ರಗಳ ಸಮೃದ್ಧ ಅನುಕರಣೆ ಸ್ಪೇನ್ ಮತ್ತು ಯುರೋಪ್ನಾದ್ಯಂತ ಖ್ಯಾತಿ ತಂದುಕೊಟ್ಟಿತು, ಮತ್ತು 19 ನೇಯ ಶತಮಾನಕ್ಕೂ ಮುಂಚಿತವಾಗಿ ಅವರ ಕೆಲಸವು ಇತರ ಸ್ಪ್ಯಾನಿಷ್ ಕಲಾವಿದರಿಗಿಂತ ಹೆಚ್ಚು ಜನಪ್ರಿಯವಾಗಿತ್ತು. ಅವರ ಶೈಲಿಯ ಪ್ರಭಾವಕ್ಕೊಳಗಾದ ಕಲಾವಿದರಲ್ಲಿ ಗೇನ್ಸ್ಬರೋ ಮತ್ತು ಗ್ರೀಝ್ ಸೇರಿದ್ದರು.
ಉಲ್ಲೇಖಗಳು
ಬದಲಾಯಿಸಿ- ↑ Marqués, Manuela B. Mena. "Murillo, Bartolomé Esteban." Grove Art Online. Oxford Art Online. Oxford University Press.
- ↑ A., O'Neill (1833). A Dictionary of Spanish Painters. London: C. O'Neill. p. 246.
ಸಾಹಿತ್ಯ
ಬದಲಾಯಿಸಿ- Palomino, Antonio (1988). El museo pictórico y escala óptica III. El parnaso español pintoresco laureado. Madrid : Aguilar S.A. de Ediciones. ISBN 84-03-88005-7.