ಬಾಯ್ಸ್ ರೇಡಿಯೊ ಮೈಕ್ರೊಮೀಟರ್

ಬಾಯ್ಸ್ ರೇಡಿಯೊ ಮೈಕ್ರೊಮೀಟರ್ ಉಷ್ಣಯುಗ್ಮ ಮತ್ತು ವಿದ್ಯುತ್‌ಪ್ರವಾಹ ಮಾಪಕ ಇವೆರಡರ ಕಾರ್ಯಗಳನ್ನೂ ಮಾಡಬಲ್ಲ ಉಪಕರಣ.[೧][೨] ಆಂಟಿಮನಿ-ಬಿಸ್ಮತ್ ಲೋಹಗಳ ಉಷ್ಣಯುಗ್ಮ; ಲೋಹದ್ವಯದ ಒಂದು ಜೊತೆ ತುದಿಗಳನ್ನು ತಾಮ್ರದ ತಗಡಿಗೆ ಬೆಸೆದು ರೂಪಿಸಿದ ಒಂದು ಸಂಧಿ; ತಾಮ್ರದ ತಗಡಿಗೆ ಹಣತೆ ಕಪ್ಪಿನ ಲೇಪನ; ಕ್ವಾರ್ಟ್ಸ್ ತಂತುವಿನ ನೆರವಿನಿಂದ ಕಾಂತಧ್ರುವಗಳ ನಡುವೆ ತೂಗಾಡುತ್ತಿರುವ ತಾಮ್ರತಂತಿಯ ಹಗುರ ಸುರುಳಿ ಮತ್ತು ಇದಕ್ಕೆ ಲೋಹದ್ವಯದ ಮತ್ತೆರಡು ತುದಿಗಳ ಜೋಡಣೆ; ಸುರುಳಿಯ ಮೇಲ್ಭಾಗದಲ್ಲಿ ಸ್ಥಾಪಿತವಾದ ಚಿಕ್ಕ ಕನ್ನಡಿ; ಕನ್ನಡಿ ಪ್ರತಿಫಲಿಸುವ ಬೆಳಕಿನ ಕಿರಣದಲ್ಲಿ ಆಗುವ ವಿಚಲನೆಯನ್ನು ಅಳೆಯಲು ನೆರವು ನೀಡುವ ಅಳತೆಪಟ್ಟಿ–ಇದು ಉಪಕರಣದ ರಚನೆ. ತಾಮ್ರದ ತಗಡಿನ ಮೇಲೆ ವಿಕಿರಣ ಬಿದ್ದಾಗ ತಾಪ ಹೆಚ್ಚಿ ಸುರುಳಿಯಲ್ಲಿ ಔಷ್ಣಿಕ ವಿದ್ಯುತ್ ಪ್ರವಹಿಸುತ್ತದೆ. ವಿದ್ಯುತ್ ಪ್ರವಾಹದ ಪ್ರಮಾಣಕ್ಕೆ ಅನುಪಾತೀಯವಾಗಿ ಸುರುಳಿ ತಿರುಗುತ್ತದೆ. ಈ ತಿರುಗುವಿಕೆಗೆ ಅನುಗುಣವಾಗಿ ಸುರುಳಿಯಲ್ಲಿಯ ಕನ್ನಡಿ ಪ್ರತಿಫಲಿಸುವ ಬೆಳಕಿನ ಕಿರಣ ವಿಚಲಿಸುತ್ತದೆ. ಈ ವಿಚಲನೆಯನ್ನು ಅಳೆದು ವಿಕಿರಣ ತೀವ್ರತೆಯನ್ನು ಲೆಕ್ಕಿಸಬಹುದು.

ಬಾಯ್ಸ್ ರೇಡಿಯೊ ಮೈಕ್ರೊಮೀಟರ್

ಉಲ್ಲೇಖಗಳು ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: