ಬಾಮ್ ಜೀಸಸ್ ಬಸಿಲಿಕಾ

ಬಾಮ್ ಜೀಸಸ್ ಬಸಿಲಿಕಾ (ಬಾಮ್ ಜೀಸಸ್ ಎಂದರೆ ಒಳ್ಳೆಯ (ಅಥವಾ ಪವಿತ್ರ) ಜೀಸಸ್) ಭಾರತದ ಗೋವಾ ರಾಜ್ಯದಲ್ಲಿ ಸ್ಥಿತವಾಗಿರುವ ರೋಮನ್ ಕ್ಯಾಥಲಿಕ್ ಬಸಿಲಿಕಾ ಆಗಿದೆ ಮತ್ತು ಗೋವಾದ ಚರ್ಚ್‌ಗಳು ಮತ್ತು ಕಾನ್ವೆಂಟ್‌ಗಳ ಯುನೆಸ್ಕೊ ವಿಶ್ವ ಪರಂಪರೆಯ ತಾಣದ ಭಾಗವಾಗಿದೆ.[೧][೨] ಈ ಬಸಿಲಿಕಾ ಪೋರ್ಚುಗೀಸ್ ಭಾರತದ ಹಿಂದಿನ ರಾಜಧಾನಿಯಾದ ಹಳೆ ಗೋವಾದಲ್ಲಿ ಸ್ಥಿತವಾಗಿದೆ. ಇದು ಸಂತ ಫ಼್ರಾನ್ಸಿಸ್ ಸಾವೇರಿಯ ಮೃತ ಅವಶೇಷಗಳನ್ನು ಹೊಂದಿದೆ.[೩]

ಈ ಜೆಸುಯಿಟ್ ಚರ್ಚ್ ಭಾರತದ ಮೊದಲ ಗೌಣ ಬಸಿಲಿಕಾ ಆಗಿದ್ದು ಬರೋಕ್ ವಾಸ್ತುಶಿಲ್ಪ ಮತ್ತು ಭಾರತದಲ್ಲಿನ ಪೋರ್ಚುಗೀಸ್ ವಸಾಹತುಶಾಹಿ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ಇದು ವಿಶ್ವದಲ್ಲಿನ ಪೋರ್ಚುಗೀಸ್ ಮೂಲದ ಏಳು ಅದ್ಭುತಗಳಲ್ಲಿ ಒಂದಾಗಿದೆ.

ಈ ಚರ್ಚ್‌ನ ನಿರ್ಮಾಣ ಕಾರ್ಯ ೧೫೯೪ ರಲ್ಲಿ ಆರಂಭವಾಯಿತು. ಈ ಚರ್ಚ್‌ನ್ನು ಮೇ ೧೬೦೫ ರಲ್ಲಿ ಧಾರ್ಮಿಕ ಉದ್ದೇಶಕ್ಕಾಗಿ ಸಮರ್ಪಿಸಲಾಯಿತು. ಈ ವಿಶ್ವ ಪರಂಪರೆಯ ಸ್ಮಾರಕವು ಕ್ರೈಸ್ತ ಧರ್ಮದ ಇತಿಹಾಸದಲ್ಲಿ ಮೈಲಿಗಲ್ಲಾಗಿ ಹೊರಹೊಮ್ಮಿದೆ.

ಉಲ್ಲೇಖಗಳು ಬದಲಾಯಿಸಿ

  1. "One wall inside Red Fort to turn white". The Times of India. 20 May 2011. Archived from the original on 16 ಫೆಬ್ರವರಿ 2013. Retrieved 4 December 2013.
  2. "Bom Jesus Basilica sitting on a fire bomb: Church official". The Times of India. 11 May 2011. Retrieved 2 September 2018.
  3. "Church slams govt over Iffi dates, threat to Old Goa". The Times of India. 12 November 2011. Archived from the original on 16 ಫೆಬ್ರವರಿ 2013. Retrieved 4 December 2013.