ಬಾಬ್ರಿ ಮಸೀದಿ

ಮಸೀದಿ

ಅಯೋಧ್ಯ ಯಲ್ಲಿ ಬಾಬರನು ಬಾಬ್ರಿ ಮಸ್ಜಿದ್ ಅನ್ನು ನಿರ್ಮಿಸುವ ನಂಬಿಕೆ ಹೊಂದಿದ್ದನು. ಆ ಸ್ಥಳದಲ್ಲಿಯೇ ದೇವಸ್ಥಾನ ಇದ್ದಿದ್ದು ಹಿಂದೂ ಮತ್ತು ಮುಸ್ಲಿಮರ ಮನಸ್ತಾಪಕ್ಕೆ ಕಾರಣವಾಗಿದೆ. ವರದಿಗಳು ಹೇಳುವಂತೆ , ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. [ಉಲ್ಲೇಖದ ಅಗತ್ಯವಿದೆ]ಮಸೀದಯನ್ನು ೧೮೫೦ ರ ಮಧ್ಯದ ಸುಮಾರಿಗೆ ಮುಚ್ಚಲಾಗಿದೆ.(ಹಿಂದೂಗಳ ಪ್ರಾರ್ಥನೆ ಈ ದಿನದವರೆಗೂ ಮುಂದುವರಿದಿದೆ.)ಕೋಮು ಗಲಭೆಗೆ ಹಾಗು ಅಲ್ಲಹಾಬಾದ್ ಹೈಕೋರ್ಟ್ ನ ತೀರ್ಮಾನ ತಡೆಯಾಗಿ ಉಳಿದಿರುವುದರಿಂದ, ಮಸೀದಿಯನ್ನು ಅಯೋಧ್ಯೆಯಲ್ಲಿ ೬ ನೇ ಡಿಸೆಂಬರ್ ೧೯೯೨ ರಂದು ಕರ ಸೇವಕರು ಭಾರತದ ಎಲ್ಲಾ ಕಡೆಯಿಂದ ಬಂದು ಅವ್ಯವಸ್ಥೆಗೊಳಿಸಿ ನಾಶ ಮಾಡಿರುತ್ತಾರೆ. ಇದೇ ಅಯೋಧ್ಯೆಯಲ್ಲಿ ಐತಿಹಾಸಿಕ ಬಾಬ್ರಿ ಮಸೀದಿ ಇತ್ತು. ಈ ಬಾಬ್ರಿ ಮಸೀದಿಗೆ ಹಲವಾರು ವಿಶೇಷ ಹೆಸರುಗಳಿಂದ ಕರೆಯುತ್ತಾರೆ. ಮಸ್ಜೀದ್-ಇ-ಜನ್ಮಸ್ತಾನ್, ಜಾಮಿ ಮಸೀದಿ ಮತ್ತು ಸೀತಾ ರಸೋಯಿ ಮಸ್ಜೀದ್ ಎಂದು ಹೆಸರುಗಳಿಂದಲೂ ಕರೆಯಲಾಗುತ್ತದೆ. ಆದರೆ, ಪ್ರಸಿದ್ಧಿಗೆ ಬಂದಿದ್ದು ಮಾತ್ರ ಬಾಬ್ರಿ ಮಸೀದಿಯೆಂದು.

ಉತ್ತರಪ್ರದೇಶದಲ್ಲಿ ಬಾಬ್ರಿ ಮಸೀದಿ ಸ್ಥಳ ತೋರಿಸುವ ನಕ್ಷೆ.
ಬಾಬ್ರಿ ಮಸೀದಿ
ಬಾಬ್ರಿ ಮಸೀದಿ

ಬಾಬ್ರಿ ಮಸೀದಿಯ ಒಂದು ನೋಟ

ನಿರ್ದೇಶಾಂಕಗಳು: 26°47′44″N 82°11′40″E / 26.7956°N 82.1945°E / 26.7956; 82.1945
ಸ್ಥಳ ಅಯೋಧ್ಯ , ಭಾರತ
ಸ್ಥಾಪನೆ Constructed - 1527
Destroyed - 1992
ವಾಸ್ತುಶಿಲ್ಪಿದ ಮಾಹಿತಿ
ಶೈಲಿ ತೊಘಲಕ್

ಅಲಹಾಬಾದ್ ಹೈಕೋರ್ಟಿನ ಐತಿಹಾಸಿಕ ತೀರ್ಪು

ಬದಲಾಯಿಸಿ

೩೦.೦೯.೨೦೧೦ರಂದು ಲಖನೌ ಅಲಹಾಬಾದ್ ಹೈಕೋರ್ಟಿ ಐತಿಹಾಸಿಕ ತೀರ್ಪನ್ನುನೀಡಿದೆ, ಅತ್ಯಂತ ಕುತೂಹಲ ಮತ್ತು ಕಾತರದಿಂದ ನಿರೀಕ್ಷಿಸಲಾಗುತ್ತಿದ್ದ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಕುರಿತ ಅಲಹಾಬಾದ್ ಹೈಕೋರ್ಟಿನ ತೀರ್ಪು ಹೊರಬಿದ್ದಿದೆ. ವಿವಾದಿತ ೨.೭ ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ ಹಂಚಿ ಸಾಮಾಜಿಕ ನ್ಯಾಯ ಮೆರೆದಿದೆ.ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಮತ್ತು ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಐತಿಹಾಸಿಕ ತೀರ್ಪನ್ನು ಲಖನೌ ಪೀಠದ ೨೧ನೇ ಕೋಣೆಯಿಂದ ನೀಡಿದೆ.[]

ಬಾಬರಿ ಮಸೀದಿ ಧ್ವಂಸ ಪ್ರಕರಣ

ಬದಲಾಯಿಸಿ
  • 20-4-2017
  • ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು 1990ರ ದಶಕಗಳಲ್ಲಿ ದೇಶದಾ­ದ್ಯಂತ ಬಡಿದೆಬ್ಬಿಸಲಾದ ಹಿಂದುತ್ವದ ಅಲೆಯು ಬಾಬರಿ ಮಸೀದಿ ಧ್ವಂಸಕ್ಕೆ ದಾರಿ ಮಾಡಿತ್ತು. ಹಿಂದೂ ರಾಷ್ಟ್ರೀಯತೆ ಸ್ಥಾಪನೆಯ ಪ್ರಬಲ ಪ್ರತಿಪಾದನೆಯನ್ನು ದೇಶದಾದ್ಯಂತ ಮತ್ತೊಮ್ಮೆ ಬಡಿದೆಬ್ಬಿಸಿದ ಬೆಳವಣಿಗೆ ಬಾಬರಿ ಮಸೀದಿ ಧ್ವಂಸ. ಸಂಘ ಪರಿವಾರ ಬಣ್ಣಿಸಿದ ಈ ‘ಹಿಂದೂ ಜಾಗೃತಿ ಯಜ್ಞ’ದ ಪ್ರಮುಖ ಋತ್ವಿಕ ಲಾಲ್ ಕೃಷ್ಣ ಅಡ್ವಾಣಿಯವರೇ ಆಗಿದ್ದರು. ಪೌರಾಣಿಕ ಯುದ್ಧಗಳಲ್ಲಿ ಬಳಕೆಯಾಗುವುದೆಂದು ಬಣ್ಣಿಸಲಾಗುವ ರಥವೊಂದನ್ನು ಏರಿ ದೇಶದಾದ್ಯಂತ ಯಾತ್ರೆ ನಡೆಸಿದ್ದರು ಅಡ್ವಾಣಿ. ಈ ದಿನಗಳಲ್ಲಿ ತಮಗೆ ಅಂಟಿಕೊಂಡಿದ್ದ ಕಟ್ಟರ್ ಹಿಂದೂವಾದಿಯ ವರ್ಚಸ್ಸನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿ ಅವರು ಯಶಸ್ಸು ಕಾಣಲಿಲ್ಲ. ಪಾಕಿಸ್ತಾನದ ಸ್ಥಾಪಕ ಜಿನ್ನಾ ಒಬ್ಬ ಜಾತ್ಯತೀತ ವ್ಯಕ್ತಿಯಾಗಿದ್ದರು ಎಂಬ ಅವರ ಹೇಳಿಕೆ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿ ಅವರ ರಾಜಕಾರಣಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಒಡಿಶಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುರಳಿ ಮನೋಹರ ಜೋಷಿಯವರನ್ನು ವೇದಿಕೆಗೆ ಕರೆದಿದ್ದರು ಮೋದಿಯವರು. ಅವರ ಈ ಚರ್ಯೆ ಜೋಷಿಯವರಿಗೆ ರಾಷ್ಟ್ರಪತಿ ಹುದ್ದೆ ಸಿಕ್ಕೀತು ಎಂಬ ಅಸ್ಪಷ್ಟ ನಿರೀಕ್ಷೆಗಳನ್ನು ಹುಟ್ಟಿಹಾಕಿತ್ತು.
  • ಎಂಬತ್ತೊಂಬತ್ತು ವರ್ಷ ವಯಸ್ಸಿನ ಎಲ್.ಕೆ.ಅಡ್ವಾಣಿ ಮತ್ತು ಎಂಬತ್ತೆರಡರ ಡಾ. ಮುರಳಿ ಮನೋಹರ ಜೋಷಿ ಇಬ್ಬರೂ ರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿರಿಸಿದ್ದವರು. ಹೊಸ ರಾಷ್ಟ್ರಪತಿ ಚುನಾವಣೆ ಪ್ರಕ್ರಿಯೆ ಕೆಲವೇ ತಿಂಗಳುಗಳಲ್ಲಿ ಆರಂಭ ಆಗಲಿರುವ ಈ ಹಂತದಲ್ಲಿ ಇಬ್ಬರೂ ನಾಯಕರ ನಿರೀಕ್ಷೆಯ ಮೇಲೆ ಸುಪ್ರೀಂ ಕೋರ್ಟ್ ಆದೇಶ ತಣ್ಣೀರು ಸುರಿದಿದೆ.

ಸುಪ್ರೀಂ ಕೋರ್ಟ್ ಆದೇಶ

ಬದಲಾಯಿಸಿ
  • ೧೯-೪-೨೦೧೭
  • ಸುಪ್ರೀಂ ಕೋರ್ಟ್ ಬುಧವಾರ ನೀಡಿರುವ ಆದೇಶ, ಈ ಇಬ್ಬರೂ ಹಿರಿಯರ ನಿರೀಕ್ಷೆಯ ಮೇಲೆ ಚಪ್ಪಡಿ ಎಳೆದಿದೆ. ಚುನಾವಣೆಗಳಲ್ಲಿ ಈಗಲೂ ಕೋಮು ಧ್ರುವೀಕರಣವನ್ನು ಕೂಡ ನೆಚ್ಚುವ ಬಿಜೆಪಿಯು ಇಂದಿನ ಬೆಳವಣಿಗೆಯನ್ನು 2019ರ ಲೋಕಸಭಾ ಚುನಾವಣೆಗಳ ಹೊತ್ತಿನಲ್ಲಿ ಬಳಕೆ ಮಾಡಿಕೊಳ್ಳುವ ಸನ್ನಾಹ ಹೊಂದಿದೆ ಎಂದು ರಾಜಕೀಯ ಪಂಡಿತರ ಒಂದು ವರ್ಗ ವ್ಯಾಖ್ಯಾನಿಸಿದೆ. ಹದಿಮೂರು ನಾಯಕರ ಮೇಲಿನ ಆರೋಪಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಎರಡು ವರ್ಷಗಳ ಗಡುವು ವಿಧಿಸಿದೆ. ಆನಂತರ ಬಾಬರಿ ಮಸೀದಿ- ರಾಮಮಂದಿರ ವಿವಾದ ಮತ್ತೆ ಭುಗಿಲೆದ್ದರೆ ಅದರ ಲಾಭ ಬಿಜೆಪಿಗೇ ಎಂಬ ಲೆಕ್ಕಾಚಾರವನ್ನು ಈ ಪಂಡಿತರು ಗುರುತಿಸುತ್ತಾರೆ.

ರಾಮಮಂದಿರ ರಾಜಕಾರಣ

ಬದಲಾಯಿಸಿ
  • ಆದರೆ ರಾಮಮಂದಿರ ನಿರ್ಮಾಣದ ರಾಜಕಾರಣ ತನ್ನ ರಾಜಕೀಯ ಉಪಯುಕ್ತತೆಯನ್ನು ಕಳೆದುಕೊಂಡಿದೆ, ಅದು ಅವಧಿ ತೀರಿರುವ ಹಳೆಯ ಸರಕು ಎಂಬುದು ಹಲವು ರೂಪಗಳಲ್ಲಿ ಹಲವು ರಂಗುಗಳಲ್ಲಿ ಈಗಾಗಲೇ ವ್ಯಕ್ತವಾಗಿರುವ ಭಾವನೆ. ಅಶೋಕ ಚಟರ್ಜಿ ಕರಸೇವೆಯಲ್ಲಿ ಪಾಲ್ಗೊಂಡ ಆಯೋಧ್ಯೆಯ ಒಬ್ಬ ವ್ಯಾಪಾರಿ. ಸಂಘ ಪರಿವಾರದ ಮುಖವಾಣಿ ‘ಪಾಂಚಜನ್ಯ’ದ ಬಾತ್ಮೀದಾರ. ಈತನ ಪ್ರಕಾರ, ರಾಮಮಂದಿರ ಆಂದೋಲನ ‘ಹಿಂದುತ್ವ ಯೋಜನೆ’ಯ ತನ್ನ ಉದ್ದೇಶವನ್ನು ಈಗಾಗಲೇ ಸಾಧಿಸಿಬಿಟ್ಟಿದೆ. ಈ ಸಾಧನೆಯ ಫಲವೇ 282 ಸೀಟು ಗೆದ್ದು ಪ್ರಧಾನಿಯಾಗಿ ಮೋದಿಯವರ ಅಧಿಕಾರಗ್ರಹಣ.[]

ಅಯೋಧ್ಯೆ ಪ್ರಕರಣ

ಬದಲಾಯಿಸಿ
  • 17 May, 2017
  • ವಿವಾದಿತ ಜಾಗದಲ್ಲಿ ಉತ್ಖನನ ನಡೆಸಲು ಅಲಹಾಬಾದ್ ಹೈಕೋರ್ಟ್‌ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಆದೇಶಿಸಿತು. ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ)ವಿಸ್ತೃತವಾಗಿ ತನಿಖೆ ನಡೆಸಿ, ‘ಒಟ್ಟಾರೆಯಾಗಿ ಗಮನಿಸಿದರೆ, ವಿವಾದಿತ ಕಟ್ಟಡದ ಅಡಿಯಲ್ಲಿದ್ದ ಬೃಹತ್ ಕಟ್ಟಡದ ಪುರಾತತ್ವ ಸಾಕ್ಷ್ಯಗಳನ್ನು ಪರಿಗಣಿಸಿದರೆ, ಹತ್ತನೆಯ ಶತಮಾನದಿಂದ ಆರಂಭಿಸಿ ವಿವಾದಿತ ಕಟ್ಟಡ ನಿರ್ಮಾಣವಾಗುವವರೆಗಿನ ರಾಚನಿಕ ಹಂತಗಳ ನಿರಂತರತೆಯನ್ನು ಗಮನಿಸಿದರೆ, ಶಿಲೆ, ಅಲಂಕೃತ ಇಟ್ಟಿಗೆಗಳು ಹಾಗೂ ವಿರೂಪಗೊಂಡ ಗಂಡು-ಹೆಣ್ಣಿನ ಮೂರ್ತಿಯನ್ನು ಪರಿಗಣಿಸಿದರೆ, ಇವು ಉತ್ತರ ಭಾರತದ ದೇವಸ್ಥಾನಗಳಲ್ಲಿ ಕಂಡುಬರುವ ಗುಣಲಕ್ಷಣಗಳಿರುವ ಅವಶೇಷಗಳನ್ನು ಸೂಚಿಸುತ್ತವೆ’ ಎಂದು ವರದಿ ನೀಡಿತು.
  • ಸರ್ಕಾರ, ಸುಪ್ರೀಂ ಕೋರ್ಟ್‌ಗೆ ನೀಡಿದ್ದ ಮಹತ್ವದ ವಾಗ್ದಾನ, ವಿವಾದಿತ ಕಟ್ಟಡದ ಅಡಿಯಲ್ಲಿ ದೇವಸ್ಥಾನ ಇತ್ತು ಎಂಬ ಬಗ್ಗೆ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಸಿದ ದೊಡ್ಡ ಪ್ರಮಾಣದ ಪುರಾತತ್ವ ಹಾಗೂ ವೈಜ್ಞಾನಿಕ ಆಧಾರಗಳು ಮತ್ತು ಆ ನ್ಯಾಯಾಲಯದ ಮೂವರು ನ್ಯಾಯಮೂರ್ತಿಗಳ ಅಭಿಪ್ರಾಯಗಳು ಕಣ್ಣೆದುರು ಇರುವ ಸತ್ಯಗಳು. ಇವುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
  • ಮುಂದಾಗಬಹುದಾದ ಇತ್ಯರ್ಥದ ವೇಳೆ ಇವೆಲ್ಲವೂ ಕೇಂದ್ರ ಸ್ಥಾನದಲ್ಲಿ ನಿಲ್ಲುತ್ತವೆ. ಆದರೆ, ಇದನ್ನು ಮಾತುಕತೆ ಮೂಲಕ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ನ್ಯಾಯಮೂರ್ತಿ ಖೇಹರ್ ಹೇಳಿದ್ದಾರೆ.[]

ಅಯೋಧ್ಯೆ ವಿವಾದ ಅಂತಿಮತೀರ್ಪು

ಬದಲಾಯಿಸಿ
  • 134 ವರ್ಷಗಳಲ್ಲಿ ನಾನಾ ಹಂತದ ನ್ಯಾಯಾಲಯಗಳಳ್ಲಿ ವಿಚಾರಣೆಗೆ ಗುರಿಯಾಗಿದ್ದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದದ ಕುರಿತು ಐವರು ಜಸ್ಟೀಸ್ ಗಳು ತೀರ್ಪನ್ನು ದಿ. 9, ನವೆಂಬರ್ 2019 ಘೋಷಿಸದರು. ರಾಮಜನ್ಮಭೂಮಿ, ಬಾಬ್ರಿ ಮಸೀದಿ ಭೂ ವಿವಾದದ ಕುರಿತಂತೆ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪಿನ್ನು ನೀಡಿತು.
  • ಅದರಲ್ಲಿ ನಿರ್ಮೋಹಿ ಅಖಾಡದ ಅರ್ಜಿ ವಜಾ. ಶಿಯಾ ವಕ್ಫ್ ಬೋರ್ಡ್ ಅರ್ಜಿ ಕೂಡಾ ವಜಾ ಮಾಡಿತು. ರಾಮಲಲ್ಲಾ ಸಂಸ್ಥೆ ಮುಖ್ಯ ಅರ್ಜಿದಾರ ಎಂದು ಮಾನ್ಯತೆ ನೀಡಿತು. ನಿರ್ಮೋಹಿ ಅಖಾಡಕ್ಕೆ ಅಲ್ಲಿ ಪೂಜಾ ಅಧಿಕಾರವಿಲ್ಲ ಎಂದು ಹೇಳಿತು. ಕಂದಾಯ ದಾಖಲೆ ಪ್ರಕಾರ ಈ ವಿವಾದಿತ ಭೂಮಿ ಸರ್ಕಾರಿ ಜಾಗವಾಗಿತ್ತು. ಉತ್ಖನನದಲ್ಲಿ ಕಂಡಂತೆ ಮಸೀದಿ ಅಡಿಪಾಯದ ಕೆಳಗೆ ವಿಶಾಲ ರಚನೆ ಇತ್ತು. ಆದರೆ ಇದು ಇಸ್ಲಾಂ ರಚನೆಯಾಗಿರಲಿಲ್ಲ. ಆದರೆ ಮಂದಿರ ಒಡೆದು ಮಸೀದಿ ಕಟ್ಟಲಾಗಿದೆ ಎನ್ನುವುದಕ್ಕೆ ಆಧಾರ ಖಚಿತತೆ ಇಲ್ಲ. ಉತ್ಖನನದ ವೇಳೆ ಸಿಕ್ಕ ಕುರುಹುಗಳು ಇಸ್ಲಾಂ ಧಾರ್ಮಿಕ ಅಥವಾ ಶಿಲ್ಪ ರಚನೆಯಾಗಿರಲಿಲ್ಲ. ರಾಮನು ಅಯೋಧ್ಯೆಯಲ್ಲೇ ಹುಟ್ಟಿದ ಎಂಬ ನಂಬುಗೆಯ ಬಗ್ಗೆ ವಿವಾದವಿಲ್ಲ. ಆದರೆ ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ್ಯವಿಲ್ಲ. ಕಾನೂನಿನ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ. ಮಸೀದಿ ಕೆಳಗೆ ಇದ್ದ ರಚನೆ ಹಿಂದು ರಚನೆಯೇ ಸರಿ ಎಂದು ನಂಬಲು ಆಧಾರವಿಲ್ಲ.
  • ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಂ ಇಬ್ಬರೂ ಪೂಜೆ ಸಲ್ಲಿಸುತ್ತಿದ್ದರು. ಮಸೀದಿಯ ಮುಖ್ಯ ಗುಂಬಝ್ ಕೆಳ ಭಾಗದಲ್ಲಿ ಗರ್ಭ ಗುಡಿ ಇತ್ತೆಂದು ನಂಬಲಾಗುತ್ತಿದೆ. ಮುಸ್ಲಿಮರಿಗೆ ಒಳಭಾಗದಲ್ಲಿ ಪ್ರಾರ್ಥನೆಗೆ ಅವಕಾಶ ಇರದಿದ್ದರು, ಪ್ರಾರ್ಥನೆ ಮಾಡುತ್ತಿದ್ದರು. ಮಸೀದಿಯ ಒಳಭಾಗದಲ್ಲಿಯೂ ವಿವಾದ ಇದೆ. ಆದರೆ ಮಸೀದಿಗೆ ಹಾನಿ ಮಾಡಿದ್ದು ಕಾನೂನಿನ ಉಲ್ಲಂಘನೆ. ವಿವಾದಿತ ಸ್ಥಳವನ್ನು ಮೂರು ವಿಭಾಗ ಮಾಡಿರುವುದು ಸರಿ ಎಂದು ಯಾರೂ ಒಪ್ಪುತ್ತಿಲ್ಲ.[]

ಅಯೋಧ್ಯೆ ತೀರ್ಪಿನ ಮುಖ್ಯಾಂಶಗಳು

ಬದಲಾಯಿಸಿ
  • ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರಚಿಸಲು ಮತ್ತು ವಿವಾದಿತಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವನ್ನು ಸುಪ್ರೀಂ ಕೋರ್ಟ ವಿಧಿಸಿದೆ. ರಾಮಮಂದಿರ ನಿರ್ಮಾಣ ಹೊಣೆಯನ್ನು ಸರ್ಕಾರಕ್ಕೂ, ಅದ ನಿರ್ವಹಣೆ ಹೊಣೆಯನ್ನು ಟ್ರಸ್ಟ್‌ಗೂ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. []
  • ಅಯೋಧ್ಯೆ ಬಗ್ಗೆ ಒಟ್ಟು ಆರು ಸರ್ವೇಕ್ಷಣೆಗಳನ್ನು ಕೈಗೊಳ್ಳಲಾಗಿದ್ದು, ಇವುಗಳಲ್ಲಿ ಐದು ಪೂರ್ಣಗೊಂಡಿದ್ದು, ಒಂದನ್ನು ಅರ್ಧದಲ್ಲೇ ಕೈಬಿಡಲಾಗಿತ್ತು. ವಿವಾದಿತ ರಾಮಜನ್ಮಭೂಮಿ–ಬಾಬರಿ ಮಸೀದಿ ಇರುವ ಸ್ಥಳದ ಬಗ್ಗೆಯೂ ಈ ಸರ್ವೇಕ್ಷಣೆಗಳ ವರದಿಯಲ್ಲಿ ಉಲ್ಲೇಖವಿದೆ. ಅಲಹಾಬಾದ್‌ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಮೂರು ಸರ್ವೇಕ್ಷಣೆಗಳ ಪ್ರಮುಖಾಂಶಗಳನ್ನು ಉಲ್ಲೇಖಿಸಿದೆ. []

ಅಯೋಧ್ಯೆಯ ರಾಮಮಂದಿರದ ವಿವಾದದ ತೀರ್ಪು

ಬದಲಾಯಿಸಿ

134 ವರ್ಷಗಳಲ್ಲಿ ನಾನಾ ಹಂತದ ನ್ಯಾಯಾಲಯಗಳಳ್ಲಿ ವಿಚಾರಣೆಗೆ ಗುರಿಯಾಗಿದ್ದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದದ ಕುರಿತು ದಿ. 9, ನವೆಂಬರ್ 2019 ರಂದು ರಾಮಜನ್ಮಭೂಮಿ, ಬಾಬ್ರಿ ಮಸೀದಿ ಭೂ ವಿವಾದದ ಕುರಿತಂತೆ ಭಾರತದ ಸುಪ್ರೀಮ್ ಕೋರ್ಟಿನ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪಿನ್ನು ನೀಡಿತು. ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರಚಿಸಲು ಮತ್ತು ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವನ್ನು ಸುಪ್ರೀಂ ಕೋರ್ಟ ವಿಧಿಸಿದೆ. ರಾಮಮಂದಿರ ನಿರ್ಮಾಣ ಹೊಣೆಯನ್ನು ಸರ್ಕಾರಕ್ಕೂ, ಅದರ ನಿರ್ವಹಣೆ ಹೊಣೆಯನ್ನು ಟ್ರಸ್ಟ್‌ಗೂ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. [][]

ಮುಖ್ಯಾಂಶಗಳು

ಬದಲಾಯಿಸಿ
  • 1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ನಂತರದಲ್ಲಿ ಒಟ್ಟು 67 ಎಕರೆಯಲ್ಲಿ 64.3 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಉಳಿದ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿತ್ತು.
ತೀರ್ಪಿನ ಮುಖ್ಯಾಂಶಗಳು:
  • ಅಯೋಧ್ಯೆಯ ವಿವಾದಿತ ಭೂಮಿ 2.7 ಎಕರೆ ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ ನೀಡುವುದು.
  • ಕೇಂದ್ರ ಸರ್ಕಾರ ವಶದಲ್ಲಿದ್ದ 64.3 ಎಕರೆ ಭೂಮಿಯಲ್ಲಿ ಸುನ್ನಿ ವಕ್ಫ್ ಬೋರ್ಡಿಗೆ 5 ಎಕರೆ ನೀಡುವುದು.
  • ವಿವಾದಿತ ರಾಮಮಂದಿರ ನಿರ್ಮಾಣ ಮಾಡಲು ರಾಮಜನ್ಮಭೂಮಿ ನ್ಯಾಸ್ ಅಲ್ಲದೆ ಸರ್ಕಾರ ಪ್ರತ್ಯೇಕ ಟ್ರಸ್ಟ್ ರಚನೆ ಮಾಡಬೇಕು. ಮಸೀದಿಗೆ ಪರ್ಯಾಯ ಭೂಮಿಯನ್ನು 3 ರಿಂದ 4 ತಿಂಗಳುಗಳಲ್ಲಿ ಸರ್ಕಾರವು ನೀಡಬೇಕು.[]

ಬಾಬರಿ ಮಸೀದಿ ಧ್ವಂಸ ಪ್ರಕರಣ- ತೀರ್ಪು

ಬದಲಾಯಿಸಿ
  • 1992ರ ಡಿಸೆಂಬರ್‌ 6ರಂದು ಸಾವಿರಾರು ಕರಸೇವಕರು ಮಸೀದಿಯನ್ನು ಧ್ವಂಸ ಮಾಡಿದ್ದರು. ಘಟನೆ ನಡೆದ 28 ವರ್ಷಗಳ ನಂತರ ಪ್ರಕರಣದ ತೀರ್ಪನ್ನು 30 ಸೆಪ್ಟೆಂಬರ್ 2020 ರಂದು ಸಿಬಿಐ ವಿಶೇಷ ನ್ಯಾಯಾಧೀಶ ಎಸ್‌.ಕೆ. ಯಾದವ್ ಅವರು 2,300 ಪುಟಗಳ ತೀರ್ಪನ್ನು ನೀಡಿದರು. ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಎಲ್‌.ಕೆ. ಅಡ್ವಾಣಿ, ಮುರಳಿಮನೋಹರ ಜೋಶಿ, ಉಮಾಭಾರತಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಆರೋಪಿಗಳನ್ನು ಲಖನೌನ ಸಿಬಿಐ ವಿಶೇಷ ನ್ಯಾಯಾಲಯವು ಬುಧವಾರ ಖುಲಾಸೆ ಮಾಡಿದೆ. ಮಸೀದಿಯನ್ನು ಧ್ವಂಸ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂಬುದನ್ನು ಸಾಬೀತು ಮಾಡುವ ಸಾಕ್ಷ್ಯಗಳು ಇಲ್ಲದ ಕಾರಣ, ಆರೋಪಿಗಳನ್ನು 30 ಸೆಪ್ಟೆಂಬರ್ 2020 ರಂದು ಖುಲಾಸೆ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ‘ಧ್ವಂಸವು ಪೂರ್ವನಿಯೋಜಿತವಾದದ್ದು ಎಂಬುದನ್ನು ಸಾಬೀತುಮಾಡುವ ಸಾಕ್ಷ್ಯ ಲಭ್ಯವಿಲ್ಲ. ಅಲ್ಲಿ ಸೇರಿದ್ದ ಸಾವಿರಾರು ಕರಸೇವಕರಲ್ಲಿ ಇದ್ದ ಕೆಲವು ಸಮಾಜಘಾತುಕ ಶಕ್ತಿಗಳು ಮಸೀದಿಯನ್ನು ಧ್ವಂಸಮಾಡಿವೆ. ಕೃತ್ಯವು ಸ್ವಯಂಪ್ರೇರಣೆಯಿಂದ ನಡೆದದ್ದು. ಮಸೀದಿಯನ್ನು ಧ್ವಂಸ ಮಾಡಲು ಆರೋಪಿಗಳು ಯಾವುದೇ ಸಂಚು ರೂಪಿಸಿರಲಿಲ್ಲ. ಬದಲಿಗೆ, ಧ್ವಂಸ ಕೃತ್ಯವನ್ನು ತಡೆಯಲು ಆರೋಪಿಗಳು ಯತ್ನಿಸಿದ್ದರು’ ಎಂದು ನ್ಯಾಯಾಲಯವು ಹೇಳಿದೆ. [೧೦]

ಹೊರ ಸಂಪರ್ಕ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ
  1. http://www.gulfkannadiga.com/news-31589.html
  2. ಅಡ್ವಾಣಿ, ಜೋಷಿ ಆಸೆಗೆ ತಣ್ಣೀರು ಸುರಿದ ಆದೇಶ;ಡಿ.ಉಮಾಪತಿ;20 Apr, 2017
  3. "ಎ.ಸೂರ್ಯ ಪ್ರಕಾಶ್;ಅಯೋಧ್ಯೆ ಪ್ರಕರಣ: ಸರ್ಕಾರದ ವಾಗ್ದಾನ ಏನಾಯಿತು?;17 May, 2017". Archived from the original on 2017-05-17. Retrieved 2017-05-18.
  4. 134 ವರ್ಷಗಳ ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪಿನ ಹೈಲೈಟ್ಸ್; Nov 9, 2019
  5. ಅಯೋಧ್ಯೆ ತೀರ್ಪಿನ ಮುಖ್ಯಾಂಶಗಳು09 ನವೆಂಬರ್ 2019
  6. ಅಯೋಧ್ಯೆಯಲ್ಲಿತ್ತು ದೈವದಂಪತಿ ಶಿಲ್ಪ, ದೇಗುಲದ ವಿನ್ಯಾಸ: ಪುರಾತತ್ವ ಇಲಾಖೆ ವರದಿ;ಪ್ರಜಾವಾಣಿ ;d: 10 ನವೆಂಬರ್ 2019
  7. 134 ವರ್ಷಗಳ ಅಯೋಧ್ಯೆ ಭೂವಿವಾದದ ಐತಿಹಾಸಿಕ ತೀರ್ಪಿನ ಹೈಲೈಟ್ಸ್; Nov 9, 2019
  8. ಅಯೋಧ್ಯೆ ತೀರ್ಪಿನ ಮುಖ್ಯಾಂಶಗಳು09 ನವೆಂಬರ್ 2019
  9. ಸುಪ್ರೀಂ ತೀರ್ಪು: ಅಯೋಧ್ಯಾ;November 9, 2019
  10. ಮಸೀದಿ ಕೆಡವಿದ್ದು ಸಮಾಜಘಾತುಕರು: ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು;ಪ್ರಜಾವಾಣಿ ವಾರ್ತೆ Updated: 30 ಸೆಪ್ಟೆಂಬರ್ 2020