ಬಾಬಿ ಜಿಂದಾಲ್
( ೧೦, ಜೂನ್, ೧೯೭೧- )
ಬಾಬಿ ಪೀಯೂಶ್ ಜಿಂದಾಲ್, ಅಮೆರಿಕದ ಲ್ಯೂಸಿಯಾನ ರಾಜ್ಯದ, ಬ್ಯಾಟನ್ ರೌಗ್ ನಲ್ಲಿ ಜನ್ಮವೆತ್ತಿದ ಭಾರತೀಯಮೂಲದ ವ್ಯಕ್ತಿ. ಜಿಂದಾಲ್,' ತಮ್ಮ ಅಪೂರ್ವ ಶ್ರಮ,ಬುದ್ಧಿವಂತಿಕೆ, ಹಾಗೂ ದಕ್ಷತೆಗಳಿಂದ ಅಮೆರಿಕದ ಮತದಾರರ ಮನ-ವೊಲಿಸಿ, ಲ್ಯೂಸಿಯಾನದಂತಹ ದೊಡ್ಡರಾಜ್ಯದ, ಗವರ್ನರ್ ಆಗುವ ಮೂಲಕ, ಒಂದು ಇತಿಹಾಸವನ್ನು ಸೃಷ್ಟಿಸಿದ್ದಾರೆ. ೧೯೯೧ ರಲ್ಲಿ ಬ್ರೌನ್ ವಿಶ್ವವಿದ್ಯಾಲಯದ, ಸಾಮಾಜಿಕ ನೀತಿ ವಿಷಯಗಳಲ್ಲಿ ಪದವಿ. ಆಕ್ಸ್ ಫರ್ಡ್ ನ್ಯೂ ಕಾಲೇಜ್‌ನಲ್ಲಿ, ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ತದನಂತರ, ಮೆಕೆನ್ ಝಿ ಎಂಬ, ಖಾಸಗಿ ಕಂಪೆನಿಯಲ್ಲಿ ನೌಕರಿ. ಇಂದಿನವರೆವಿಗೂ, ಪಂಜಾಬಿನ ತಮ್ಮ ಜನ್ಮಸ್ಥಳವನ್ನು ಕಾಣದ ಬಾಬಿಯವರನ್ನು, ಅಲ್ಲಿನ ಜನಸ್ತೋಮ ಕಾಣಲು ತವಕಿಸುತ್ತಿದೆ. ತಾಯ್ನಾಡು, ಹಾಗೂ ಅಮೆರಿಕದಲ್ಲಿ, ಅತ್ಯಂತ ಜನಪ್ರಿಯರಾಗಿರುವ ವ್ಯಕ್ತಿ-ಬಾಬಿಜಿಂದಾಲ್[೧]
ಭಾರತೀಯ ಮೂಲದ ಪ್ರಪ್ರಥಮ ಅಮೆರಿಕನ್ ಗವರ್ನರ್
ಬದಲಾಯಿಸಿ'ರಿಪಬ್ಲಿಕನ್ ಪಕ್ಷದ ಪ್ರತಿನಿಧಿ', ಭಾರತೀಯಮೂಲದ ಪೀಯೂಶ್ ಬಾಬಿ ಜಿಂದಾಲ್ ರವರು, ಅಮೆರಿಕಾದ, 'ಲ್ಯೂಸಿಯಾನ ರಾಜ್ಯದ ಗವರ್ನರ್' ಆಗಿ, ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಚುನಾವಣೆಯಲ್ಲಿ ೩೬ ವರ್ಷದ, ಹುಡುಗನಂತೆ ಕಾಣುವ, ಬಾಬಿಜಿಂದಾಲ್ ರವರು, ೧೧ ಜನ ಪ್ರತಿಷ್ಠಿತ ಪ್ರತಿಸ್ಪರ್ಧಿಗಳನ್ನು ಪರಾಜಯಗೊಳಿಸುವುದರ ಮೂಲಕ ಲ್ಯೂಸಿಯಾನದ ಗವರ್ನರ್ ಆದ, ಭಾರತದ ಮೂಲದ ಪ್ರಪ್ರಥಮವ್ಯಕ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಪಂಜಾಬ್ ನ ಪೀಯೂಶ್ ಬಾಬಿ ಜಿಂದಾಲ್,
ಬದಲಾಯಿಸಿನಿಯತಕಾಲಿಕೆಯೊಂದರ ಸಮೀಕ್ಷೆಯ ಪ್ರಕಾರ, ಈ ಶತಮಾನದ ೧೦ ಮಂದಿ ಅಸಾಧಾರಣ ಅಮೆರಿಕಾದ ಯುವಕರ ಪೈಕಿ, ಬಾಬಿ ಜಿಂದಾಲ್, ಕೂಡ ಒಬ್ಬರು. ಈ ದಾಖಲೆ, ಭಾರತೀಯರಿಗೆ ಹೆಮ್ಮೆ ತರುವಂತಹ ಸಂಗತಿ. ಇದರಿಂದ, ೨೦೦೮ ರ ಜನವರಿ, ತಿಂಗಳಲ್ಲಿ ಗವರ್ನರ್ ಆಗಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧರಾಗಿದ್ದಾರೆ. ಅಲ್ಲಿ ನೆರೆದಿದ್ದ ಅಪಾರ ಅಭಿಮಾನಿಗಳನ್ನುದ್ದೇಶಿಸಿ ಮಾತಾಡಿದ ಅವರು," ನಮ್ಮ ಮಾತೃಭೂಮಿಯಾದ ಲ್ಯೂಸಿಯಾನವನ್ನು ಅತ್ಯಂತ ಪ್ರಭಾವಿ ಸಂಪನ್ಮೂಲಗಳ ರಾಜ್ಯವನ್ನಾಗಿ ಮಾಡಬೇಕಾಗಿದೆ. ಅದಕ್ಕಾಗಿ, ನಾವೆಲ್ಲ ಒಂದುಗೂಡಿ ದುಡಿಯೋಣ," ಎಂದರು. ಅಮೆರಿಕದ ೧೩೦ ವರ್ಷಗಳ ಇತಿಹಾಸದಲ್ಲಿ, ಪುನರ್ಘಟನೆಯಾದನಂತರ, ರಾಜ್ಯವೊಂದರ ಮುಖ್ಯರಾಜಧಾನಿಯಲ್ಲಿ ಆಯ್ಕೆಯಾದ ಮೊದಲ ಬಿಳಿಯೇತರ ವ್ಯಕ್ತಿ. ಇವರು ಅತಿ ಕಿರಿಯ ವಯಸ್ಸಿನಲ್ಲಿ, ಗವರ್ನರ್ ಪದವಿಯನ್ನು ಅಲಂಕರಿಸಲಿರುವ ವ್ಯಕ್ತಿ ಕೂಡ. ಆದ್ದರಿಂದ ಸದ್ಯದಲ್ಲಿಯೇ ಒಂದು ಐತಿಹಾಸಿಕ ಘಟನೆಯೊಂದಕ್ಕೆ ಕಾರಣವಾಗಲಿದ್ದಾರೆ.
' ಕ್ಯಾಥೊಲಿಕ್ ಆಗಿ ಮತಾಂತರ ಹೊಂದಿದರು
ಬದಲಾಯಿಸಿಪೀಯೂಶ್ ಬಾಬಿ ಜಿಂದಾಲ್, ಕಿರಿವಯಸ್ಸಿನಲ್ಲೇ, ಕ್ಯಾಥೊಲಿಕ್ ಆಗಿ ಪರಿವರ್ತನೆ ಹೊಂದಿದರು. ಬಾಬಿ ಜಿಂದಾಲ್. ೧೯೯೧ ರಲ್ಲಿ ಬ್ರೌನ್ ವಿಶ್ವವಿದ್ಯಾಲಯ, ಪ್ರಾವಿಡೆನ್ಸ್, ರೋಡ್ಸ್ ಐಲ್ಯಾಂಡ್ ನಿಂದ ವಿದ್ಯಾಭ್ಯಾಸ ಮುಗಿಸಿ, ವಾಶಿಂಟನ್ ನ, ಮೆಕೆಂಸಿ ಕಂಪೆನಿ ಯಲ್ಲಿ ದುಡಿಯುತ್ತಿದ್ದರು. ಚುನಾವಣೆಯಲ್ಲಿ ಮತ ಚಲಾಯಿಸಿದ ಪೈಕಿ, ೬,೨೫,೦೩೬, ಶೇ% ೫೩ ಕ್ಕಿಂತ ಹೆಚ್ಚು, ಮತಪಡೆಯುವುದರ ಮೂಲಕ, ಭಾರಿ ಅಂತರದಿಂದ, ಆಯ್ಕೆಯಾದರಲ್ಲದೆ, ನವೆಂಬರ್, ೧೭, ರಂದು ನಿಗದಿಯಾಗಿದ್ದ ಅಂತಿಮ ಹಂತದ ಚುನಾವಣೆಗಳು (ಯಾವ ಅಭ್ಯರ್ಥಿಯೂ ಶೇ % ೫೦ ರಷ್ಟು, ಮತ ಪಡೆಯಲು ವಿಫಲವಾದಲ್ಲಿ ಮಾತ್ರ ಈ ಚುನಾವಣೆ ನಡೆಯುತ್ತದೆ. ಅಗತ್ಯವೇ ಇಲ್ಲದಂತೆ ಮಾಡಿದರು.) ಜಿಂದಾಲ್ ರ ಸಮೀಪದ ಪ್ರತಿದ್ವಂದಿಯಾದ ವಾಲ್ಟರ್ ಬೊಸ್ಸೋ (ಶೇ % ೧೮), ಉದ್ಯಮಿ ಜಾರ್ಜಸ್, ೧೪ %, ಮತ್ತು ಪೋಸ್ತರ್ ಕ್ಯಾಂಪ್ ಬೆಲ್ % ೧೩, ಮತದಾರರ ಒಲವು ಗಳಿಸಲು ವಿಫಲರಾದರು. ಉಳಿದ ೮ ಅಭ್ಯರ್ಥಿಗಳ ಮತಗಳು ನಗಣ್ಯ. ೪ ವರ್ಷಗಳ ಹಿಂದೆ, ಸ್ಪರ್ಧಿಸಿದ್ದ, ಜಿಂದಾಲ್, ಕ್ಯಾಥೆಲಿನ್ ಬ್ಲಾಂಕೊ, ವಿರುದ್ಧ ಪರಾಜಿತರಾಗಿದ್ದರು. ಲ್ಯೂಸಿಯಾನದಲ್ಲಿ ೨ ವರ್ಷಗಳ ಹಿಂದೆ ಬೀಸಿದ್ದ ಚಂಡಮಾರುತದ ದಾಳಿಯಲ್ಲಿ, ಇಡಿ ಕಾಟ್ರೀನಾ-ರಾಜ್ಯ ತಲ್ಲಣಿಸಿತ್ತು. ಅದರೆ, ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಮಾಡದೆ, ಸಾವಿರಾರು ಜನ ಮರಣವನ್ನಪ್ಪಿದರು. ಇದರ ಬಗ್ಗೆ ಟೀಕೆಗಳು ಬಹಳ ದೊಡ್ಡಪ್ರಮಾಣದಲ್ಲಿ ಪ್ರೆಸ್ಸ್ ನಲ್ಲಿ ಬಂದವು. ಆದ್ದರಿಂದ ಕ್ಯಾಥೆಲಿನ್ ಬ್ಲಾಂಕೊಅವರು, ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ನಿಲ್ಲಲಿಲ್ಲ.
ಬಾಬಿಯವರ ಮುಂದಿರುವ ಸವಾಲುಗಳು
ಬದಲಾಯಿಸಿಈಗ, ಬಾಬಿಯವರ ಮುಂದಿರುವ ಸವಾಲುಗಳು, ಆಡಳಿತದಲ್ಲಿ ಬಿಗಿ, ದಕ್ಷತೆಗಳನ್ನು, ತಂದು, ಭ್ರಷ್ಟಾಚಾರ ನಿರ್ಮೂಲನೆ, ಗಳಂತಹ ಭರವಸೆಯನ್ನು ಅಲ್ಲಿನ ನೊಂದ ಪರಿವಾರಗಳಿಗೆ ಕೊಡುವುದು ಮುಖ್ಯ. "ನಾವೆಲ್ಲಾ ಒಟ್ಟಾಗಿ ಸೇರಿ, ನಮ್ಮ ಪ್ರೀತಿಯ ತಾಯ್ನಾಡಾದ ಲ್ಯೂಸಿಯನ ರಾಜ್ಯಾಭಿವೃದ್ಧಿಗೆ ಶ್ರಮಿಸೋಣ ". ಈ ಹಿಂದೆ ಎರಡು ಬಾರಿ, ಅಮೆರಿಕ ಕಾಂಗ್ರೆಸ್ ನ ಸದಸ್ಯರಾಗಿ ಆಯ್ಕೆಯಾಗಿದ್ದರು. ತಮ್ಮ ೨೪ ನೆಯ ವಯಸ್ಸಿನಲ್ಲಿಯೇ ಲ್ಯೂಸಿಯಾನ ಸ್ಟೇಟ್ ನ ಆರೋಗ್ಯಕಾರ್ಯದರ್ಶಿಯಾಗಿ, ಯಶಸ್ವಿ ಕಾರ್ಯನಿರ್ವಹಿಸಿದ್ದರು.
ಪರಿವಾರ
ಬದಲಾಯಿಸಿತಂದೆ, ಚಂದೀಘಡದಿಂದ ೨೦೦ ಕಿ. ಮೀ ದೂರದ ಮಲೇರ್ ಕೊಟ್ಲಾ, ಪಟ್ಟಣದ, ಕಾನ್ಪುರ, ಎಂಬ ಪುಟ್ಟ ಗ್ರಾಮವಾಸಿ. ರಾಜ್ ಚಂದ್ ಜಿಂದಾಲ್ ೧೯೬೦ ರಲ್ಲಿ ಪಂಜಾಬ್ ನಿಂದ ಅಮೆರಿಕದ ಲ್ಯೂಸಿಯಾನ ಸ್ಟೇಟ್ ವಿಶ್ವವಿದ್ಯಾಲಯಕ್ಕೆ, ನ್ಯೂಕ್ಲಿಯರ್ ಫಿಸಿಕ್ಸ್ ವಿಷಯದಲ್ಲಿ ಪದವಿಪಡೆಯಲು ಆಗಮಿಸಿದ್ದರು. ತಂದೆ, ಅಮರ್ ಜಿಂದಾಲ್- ಹೆಚ್ಚು ಓದಿದವರಲ್ಲ. ಮಡದಿ, ಸುಪ್ರಿಯಜಿಂದಾಲ್, ಕ್ರಿಶ್ಚಿಯನ್ ಆಗಿ ಪರಿವರ್ತಿತಳು. ಮಕ್ಕಳು : ಸಿಲಿಯ, ಶಾನ್, ಹಾಗೂ, ಸ್ಲೇಡ್. ಪೀಯೂಶ್ ಬಾಬಿ ಜಿಂದಾಲ್ , ತಮ್ಮ ೪ ನೆಯ ವಯಸ್ಸಿನಲ್ಲಿಯೇ, ಬ್ರಾಂಡಿ ಬಂಚ್ ಎಂಬ ಟೆಲಿವಿಷನ್ ಸೀರಿಯಲ್ ನೋಡುತ್ತಿದ್ದರು. ಅದರಲ್ಲಿ ಬರುವ ಪಾತ್ರ , ಬಾಬಿ, ಅವರಿಗೆ ಬಹಳ ಪ್ರಿಯವಾಯಿತಂತೆ. ಅದಕ್ಕಾಗಿ ತಮ್ಮ ತಂದೆ-ತಾಯಿಗಳಿಗೆ ನನ್ನನ್ನು, ಬಾಬಿ, ಯೆಂದು ಕೂಗಿ- ಕರೆಯಿರಿ, ಎಂದು ಕೇಳಿಕೊಂಡಿದ್ದರಂತೆ.
'ಚುನಾವಣೆಯಲ್ಲಿ ಗೆದ್ದರು'
ಬದಲಾಯಿಸಿಸನ್. ೧೮೦೩ ರಲ್ಲಿ ಥಾಮಸ್ ಜೆಫರ್ಸನ್, ೧೫ ಮಿಲಿಯನ್ ಅಮೆರಿಕನ್ ಡಾಲರ್ ಹಣಕೊಟ್ಟು, ನೆಪೋಲಿಯನ್ ನಿಂದ ಲ್ಯೂಸಿಯಾನ ರಾಜ್ಯ ವನ್ನು ಖರೀದಿಸಿದ್ದರು. ಈ ಚಾರಿತ್ರಿಕ ಸ್ಥಳ, ಭೌಗೋಳಿಕವಾಗಿಯೂ, ಸಾಮಾಜಿಕವಾಗಿಯೂ ಭಿನ್ನವಾಗಿರುವುದೇ ಇದರ ಅನನ್ಯತೆ. ಫ್ರೆಂಚ್ ಭಾಷೆಯನ್ನು ಮಾತಾಡುವವರ ಸಂಖ್ಯೆ ಹೆಚ್ಚು. ಬಹುಮುಖಿ ಸಂಸ್ಕೃತಿ, ಮತ್ತು ಭಾಷೆಗಳ ನೆಲೆವೀಡು. ಒಂದು ಕಾಲದಲ್ಲಿ, ಈ ಪ್ರದೇಶ ಫ್ರಾನ್ಸ್ ನ ಒಂದು ಭಾಗವಾಗಿತ್ತು. ಲೂಯಿಗಳ ನಾಡೆಂದು ಪ್ರಸಿದ್ಧಿ. ಇಲ್ಲಿ ಪ್ರಯೋಗದಲ್ಲಿರುವ ನುಡಿಗಟ್ಟನ್ನು ಗಮನಿಸೋಣ. ಕಾಜದ್, ಫ್ರೆಂಚ್, ಲ್ಯೂಸಿಯಾನ ಕ್ರಿಯೊಲ್ ಫ್ರೆಂಚ್, ಆಫ್ರಿಕನ್ ಅಮೆರಿಕನ್, ಪ್ರಾಂಕೊ ಅಮೆರಿಕನ್, ಕೆನೆಡಿಯನ್ ಇತ್ಯಾದಿ ಭಾಷೆಗಳು. ಸ್ವಲ್ಪ ಗಹನವಾಗಿ ಯೋಚಿಸಿದರೆ, ಈ ಅಗಾಧ ಸಾಂಸ್ಕೃತಿಕ ವೈವಿಧ್ಯತೆಗಳೇ ಜಿಂದಾಲ್ ರ ಗೆಲುವಿಗೆ ಕಾರಣವಾಗಿರಬಹುದು, ಎಂಬುದು, ಹಲವರ ಅಭಿಪ್ರಾಯ. ಲ್ಯೂಸಿಯಾನರಾಜ್ಯ, ಫ್ರೆಂಚ್ ಪ್ರಾಬಲ್ಯದ ಜೊತೆಗೆ, ವರ್ಣಭೇದ, ಮತ್ತು, ಅಮೆರಿಕದ ಪೂರ್ವಾಗ್ರಹಪೀಡಿತ ನೀತಿಗೆ ಬಲಿಪಶುವಾಗಿತ್ತೆಂಬ, ಕುಖ್ಯಾತಿಗೆ ಪಾತ್ರವಾಗಿತ್ತು. ಚಂಡಮಾರುತದ ದಾಳಿ, ಜಲಾವೃತವಾದ ಕಾಟ್ರೀನ ಪ್ರದೇಶಗಳ, ನಾಗರಿಕರ ದಾರುಣ ಜೀವನದ ಹೃದಯ-ಕಲಕುವ ದೃಶ್ಯಗಳು ವಿಶ್ವದಲ್ಲೆಲ್ಲಾ ಮನೆಮಾತಾದವು. ಅಲ್ಲಿನ ಹಿಂದಿನ ಅಧಿಕಾರಿಗಳ ಸಮಯ ಪ್ರಜ್ಞಾ ಶೂನ್ಯತೆ, ಮತ್ತು ಅರಾಜಕತೆಗಳು ಅಧೀರರನ್ನಾಗಿಸಿದ್ದವು. ಆದರೆ, ಬಾಬಿಯವರ ಮನವೊಲಿಸುವ ಭರವಸೆಯ, ಹಾಗೂ ದೇಶಾಭಿಮಾನದ ನುಡಿಗಳು, ಒಳ್ಳೆಯ ಗಮನಾರ್ಹ ಪರಿಣಾಮವನ್ನು ಬೀರಿದವು.
ಉಲ್ಲೇಖಗಳು
ಬದಲಾಯಿಸಿ- ↑ "'ಬಾಬಿ ಜಿಂದಾಲ್, ಬಯೋ'". Archived from the original on 2015-05-12. Retrieved 2014-12-16.