ಬಾನು ಮುಷ್ತಾಕ್ ಇವರು ೦೩-೦೪-೧೯೪೮ರಲ್ಲಿ ಹಾಸನದಲ್ಲಿ ಜನಿಸಿದರು. ಬಿ.ಎಸ್.ಸಿ., ಎಲ್.ಎಲ್.ಬಿ. ಪದವೀಧರೆಯಾಗಿದ್ದಾರೆ. ಎಸ್.ಎ.ರೆಹಮಾನ್ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ. ಸದ್ಯ ಹಾಸನದಲ್ಲಿ ನ್ಯಾಯವಾದಿಯಾಗಿದ್ದಾರೆ.ಇವರು ಕನ್ನಡದ ನವ್ಯೋತ್ತರ ಲೇಖಕಿ. ಲಂಕೇಶ್ ಪತ್ರಿಕೆ ಮೂಲಕ ಬರವಣಿಗೆ ಆರಂಭಿಸಿದರು.


ಕೃತಿಗಳು

ಬದಲಾಯಿಸಿ

ಕಥಾ ಸಂಕಲನ

ಬದಲಾಯಿಸಿ
  • ಹೆಜ್ಜೆ ಮೂಡಿದ ಹಾದಿ
  • ಬೆಂಕಿ ಮಳೆ
  • ಎದೆಯ ಹಣತೆ
  • ಸಫೀರಾ
  • ಬಡವರ ಮಗಳು ಹೆಣ್ಣಲ್ಲ

ಕಾದಂಬರಿ

ಬದಲಾಯಿಸಿ
  • ಕುಬ್ರ

ಲೇಖನ ಸಂಕಲನ

ಬದಲಾಯಿಸಿ
  • ಇಬ್ಬನಿಯ ಕಾವು

ಕವನ ಸಂಕಲನ

ಬದಲಾಯಿಸಿ
  • ಒದ್ದೆ ಕಣ್ಣಿನ ಬಾಗಿನ

ಕಾನೂನು ಕೃತಿಗಳು

ಬದಲಾಯಿಸಿ

ಕೌಟುಂಬಿಕ ದೌರ್ಜನ್ಯ ಕಾಯಿದೆ

ಸಾರ್ವಜನಿಕ ಸೇವೆಯ ವಿವರಗಳು

ಬದಲಾಯಿಸಿ
  • ಹಾಸನ ನಗರ ಸಭೆಗೆ 1983ರಿಂದ ಎರಡು ಅವಧಿಗೆ ನಗರಸಭಾ ಸದಸ್ಯೆಯಾಗಿ ಆಯ್ಕೆಯಾಗಿದ್ದರು.
  • ಹಾಸನದ ಜಿಲ್ಲಾ ಶ್ರೀ ಚಾಮ ರಾಜೇಂದ್ರ ಆಸ್ಪತ್ರೆಯಲ್ಲಿ ಸಂದರ್ಶಕರ ಮಂಡಳಿಯ ಅಧ್ಯಕ್ಷೆಯಾಗಿದ್ದರು.
  • ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆಯಾಗಿದ್ದರು.
  • ಹಾಸನ ನಗರ ಗ್ರಂಥಾಲಯ ಸಮಿತಿಯ ಸದಸ್ಯೆಯಾಗಿದ್ದರು
  • ಆಕಾಶವಾಣಿ ಬೆಂಗಳೂರು ಕೇಂದ್ರದ ಸಲಹಾ ಮಂಡಳಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದು.
  • ಹಾಸನದ ಜಿಲ್ಲಾ ಸಮತಾ ವೇದಿಕೆಯ ಅಧ್ಯಕ್ಷೆಯಾಗಿ 1993ರಲ್ಲಿ ಮತ್ತು ಮಹಿಳಾ ವಿಕಾಸ ವೇದಿಕೆ ಅಧ್ಯಕ್ಷೆಯಾಗಿ ಸೇವೆಸಲ್ಲಿಸಿದ್ದಾರೆ.

ಬಾಹ್ಯ ಸಂಪರ್ಕ

ಬದಲಾಯಿಸಿ

ನಾರಾಯಣಪ್ರಸಾದ್ ಅವರ ಬಾಗ್ []

ಉಲ್ಲೇಖ

ಬದಲಾಯಿಸಿ
  1. http://napskannada.blogspot.in/search/label/Banu%20Mustak