ಬಾಣಲಿಂಗ
ಮಧ್ಯ ಪ್ರದೇಶದಲ್ಲಿ ನರ್ಮದಾ ನದಿಯ ತಳದಲ್ಲಿ ಸಿಗುವ ಬಾಣಲಿಂಗ ಪ್ರಕೃತಿಯಲ್ಲಿ ಸಿಗುವ ಒಂದು ಕಲ್ಲು ಮತ್ತು ಹಿಂದೂಗಳಲ್ಲಿ ಧರ್ಮಗ್ರಂಥಗಳು ಅಥವಾ ಸಾಂಸ್ಕೃತಿಕ ಸಂಪ್ರದಾಯಗಳನ್ನು ಆಧರಿಸಿ ಪೂಜೆಯ ಪ್ರತಿಮಾರೂಪದ ಸಂಕೇತವಾಗಿದೆ, ವಿಶೇಷವಾಗಿ ಶೈವರು ಮತ್ತು ಸ್ಮಾರ್ತ ಬ್ರಾಹ್ಮಣರಲ್ಲಿ. ಈ ಕಲ್ಲುಗಳು ಪ್ರಾಚೀನವಾಗಿವೆ ಮತ್ತು ದೈವಿಕತೆಯನ್ನು ಸೂಚಿಸುತ್ತವೆ. ಈ ಕಲ್ಲು ಒಂದು ನುಣುಪಾದ ಅಂಡಾಭ ಕಲ್ಲಾಗಿದೆ.