ಬಾಜಿಗರ್ ಸಮುದಾಯವು ಕನಾ‍ಟಕದಲ್ಲಿ ಅಲೆಮಾರಿ ಸಮುದಾಯವಾಗಿದ್ದು, ಕನಾ‍ಟಕ ಸರ್ಕಾರದ ಹಿಂದುಳಿದ ವರ್ಗಳ ಪ್ರವರ್ಗ-ರಲ್ಲಿದೆ. ಇವರು ದೈಹಿಕ ಕಸರತ್ತು ಪ್ರದರ್ಶನ ಮಾಡುವ, ಎಮ್ಮೆ ಬೋಳಿಸುವ, ಕಲಾಯಿ ಕೆಲಸ ಮಾಡುವ ಕೆಲಸ ಮಾಡುತ್ತಾರೆ. ಕರ್ನಾಟಕದಲ್ಲಿ ೧೮-೨೦ ಜಿಲ್ಲೆಗಳಲ್ಲಿ ಇವರು ವಾಸಮಾಡುತ್ತಾರೆ.

ಪೀಠಿಕೆ

ಬದಲಾಯಿಸಿ

ಕರ್ನಾಟಕದ ಅಲೆಮಾರಿ ಬುಡಕಟ್ಟುಗಳಲ್ಲಿ ಬಾಜಿಗರ್ ಸಮುದಾಯವು ಅತ್ಯಂತ ಹಿಂದುಳಿದಿದೆ. ಇವರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ. ಕರ್ನಾಟಕದ ಮೀಸಲಾತಿ ಪಟ್ಟಿಯ ಹಿಂದುಳಿದ ವರ್ಗಗಳ ಪ್ರವರ್ಗ-1ರ ಕ್ರ. ಸಂಖ್ಯೆ 62ರಲ್ಲಿದೆ. ಪ್ರಸ್ತುತ ಹಿಂದುಳಿದ ವರ್ಗಗಳ ಅಲೆಮಾರಿ ಬುಡಕಟ್ಟುಗಳ ಪಟ್ಟಿಯಲ್ಲಿ ಕ್ರ.ಸಂಖ್ಯೆ 09ರಲ್ಲಿದೆ. ಇವರು ತಮ್ಮನ್ನು ಫೈಲ್ವಾನರೆಂದು ಕರೆದುಕೊಂಡರೆ, ಕೆಲವು ಕಡೆ ಜನ ಇವರನ್ನು ಕಲಾಯಿಗಾರರೆಂದು, ಜಾತಿಗಾರರೆಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಈ ಸಮುದಾಯವು ಅತ್ಯಂತ ಚಿಕ್ಕ ಸಮುದಾಯವಾಗಿದೆ.

'ಬಾಜಿ' ಎಂಬ ಪದದಿಂದ ಈ ಸಮುದಾಯಕ್ಕೆ ಬಾಜಿಗರ್ ಎಂದು ಹೆಸರು ಬಂದಿದೆ. ಬಾಜಿ ಎಂದರೆ ಹಗ್ಗದ ಮೇಲೆ ಮಾಡುವ ನೃತ್ಯ ಮತ್ತು ಕಸರತ್ತು ಎಂದು ಹಾಗೂ ಬಾಜಿ ಎಂದರೆ ಪಣ ಎಂದೂ ಹೇಳಲಾಗುತ್ತದೆ.

ಇವರು ಉತ್ತರ ಪ್ರದೇಶ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಹಿಮಾಚಲ ಪ್ರದೇಶ, ಆಂದ್ರಪ್ರದೇಶ, ತೆಲಾಂಗಣ, ಮಹಾರಾಷ್ಟç ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಡ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಕರ್ನಾಟಕದಲ್ಲಿ ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಧಾರವಾಡ, ಹಾವೇರಿ, ಬೆಳಗಾವಿ ಮತ್ತು ವಿಜಯಪುರ ಇತ್ಯಾದಿ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇವರು ನೆರೆಯ ಆಂಧ್ರ, ಈಗಿನ ತೆಲಂಗಾಣ, ಮಹಾರಾಳ್ಟ್ರ, ಮತ್ತು ಅಸ್ಸಾಂ, ಗುಜರಾತ್‌ವರೆಗೂ ಅಲೆಮಾರಿಗಳಾಗಿ ಅಲೆದಾಡುತ್ತಲೇ ಇರುತ್ತಾರೆ. ಇವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮುದಾಯವಾಗಿದೆ.

ಕುಲ, ಬಳಿ, ಬೆಡಗುಗಳು.

ಬದಲಾಯಿಸಿ

ಇವರಲಿ ಕಾಲೇಬಾಗ, ರಾಡಿಯವರು, ಥೋರಿಯವರು, ಮಸಲಾದರ, ಚೆಂಡುವರ್, ತೇಜುವಾಲ್, ರಾಚನರ್, ಜಮ್ಮುದರ್, ಗಮುಕನರ್, ಜನುಮದರ್, ಬೌರಲ್, ಸರ್ಜಿವಾಲ್, ಅಟ್ಟಿವಾಲ್, ತೇಜಿವಾಲ್, ದಕ್ಕ£ವಾಲ್, ಬಹೂರೂಪಿ, ಬೈಲುವಾಲೆ, ರಗಟರಾಡಿವಾಲೆ ಇತ್ಯಾದಿ ಬೆಡುಗುಗಳಿವೆ. ಇವರು ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳಿಂದ ಗುರುತಿಸಿಕೊಂಡಿದ್ದರೂ ಸಹ ಇವರ ಬೆಡುಗುಗಳು ಒಂದೆಯಾಗಿವೆ

ಸಾಮಾನ್ಯವಾಗಿ ತಮ್ಮದೇಯಾದ ಒಳಪಂಗಡಗಳಲ್ಲಿ ವಿವಾಹವಾಗುತ್ತಾರೆ. ಮೇಲ್ವರ್ಗದ ಮುಸ್ಲಿಮರ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ ಆದರೆ ಹೆಣ್ಣು ಕೊಡುವ ಅಥವಾ ಪಡೆಯುವ ಸಂಬಂಧ ಕಂಡುಬರುವುದಿಲ್ಲ. ಇವರಲ್ಲಿ ಮದುವೆಯ ಸಂದರ್ಭದಲ್ಲಿ ಹೆಣ್ಣಿಗೆ ತೆರುವು ಕೊಡುವ ಪದ್ದತಿ ಇದೆ.

ಜಾತಿ ಪಂಚಾಯಿತಿ
ಬದಲಾಯಿಸಿ

ಇವರಲ್ಲಿ ತಮ್ಮದೇ ಆದ ಜಾತಿ ಪಂಚಾಯಿತಿ ಇದೆ. ಸಮುದಾಯದ ಜನರು ಮಾಡುವ ಅಪರಾಧಗಳಿಗೆ ವರ್ಳಕ್ಕೊಮ್ಮೆ ಸಭೆ ಸೇರಿ ನ್ಯಾಯ ತೀರ್ಮಾನ ಮಾಡುವ ವ್ಯವಸ್ಥೆ ಇದೆ. ತಪ್ಪು ಮಾಡಿದವರಿಗೆ ತಪ್ಪಿನ ತೀವ್ರತೆಯ ಅನಗುಣವಾಗಿ ದಂಡ, ಬಹಿಳ್ಕಾರ ಇಲ್ಲವೇ ಕಠಿಣ ಎಚ್ಚರಿಕೆ £Ãಡುವ ಪದ್ಧತಿ ಕಂಡುಬರುತ್ತದೆ. ಊರಿನ ಬಾಗಿಲು ಇಲ್ಲವೇ ಮೆಹಬೂಬ ಸುಭಾ£ ಕಟ್ಟೆಯೇ ಇವರ ನ್ಯಾಯ ತೀರ್ಮಾನ ಮಾಡುವ ಸ್ಥಳವಾಗಿದೆ.

ಬಾಜಿಗರ್ ಸಮುದಾಯವು ತಮ್ಮದೆಯಾದ ಪ್ರತ್ಯೇಕವಾದ ಭಾಷೆಯನ್ನು ಹೊಂದಿದ್ದಾರೆ. ಹೊರಗಿನವರೊಂದಿಗೆ ಮಾತನಾಡುವಾಗ ಅಲ್ಲಿನ ಸ್ಥಳೀಯ ಭಾಳೆಯಲ್ಲಿ ಮಾತನಾಡುತ್ತಾರೆ.

ಇಂದಿಗೂ ಇವರು ಹೊಟ್ಟೆಪಾಡಿಗಾಗಿ ಪಾರಂಪರಿಕ ವೃತ್ತಿಗಳಾದ ದೈಹಿಕ ಕಸರತ್ತು, ಎಮ್ಮೆ ಕೂದಲು ಬೋಳಿಸುವುದು, ಎತ್ತಿನ ಕೊಂಬು ಕೆತ್ತುವುದು, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಿಗೆ ಕಲಾಯಿ ಹಾಕುವುದು, ಅಚ್ಚು ತಯಾರಿಸಿ ಬೆಳ್ಳಿಯ, ಹಿತ್ತಾಳೆ ಹಾಗೂ ಇತರೆ ಲೋಹಗಳ ಮೂರ್ತಿಗಳನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಎತ್ತಿನ ಬಂಡಿ ತಿರುಗಿಸುವುದು, ಕೈಯಿಂದ ಚಪ್ಪಡಿ ಕಲ್ಲುಗಳನ್ನು ಹೊಡೆಯುವುದು. ಲಾಗಾ ಹಾಕುವುದು, ಬಾಜಿಕಟ್ಟಿ ಗುಂಡು ಎತ್ತಿ ಎಸೆಯುವುದು ಇತ್ಯಾದಿ ಕಸರತ್ತುಗಳನ್ನು ಪ್ರದರ್ಶಿಸಿಸುತ್ತಾರೆ. ಇವರು ಸ್ಥಳದಿಂದ ಸ್ಥಳಕ್ಕೆ ಅಲೆಯುವುದು, ವಿವಿಧ ದೈಹಿಕ ತೋರಿಸುವುದಕ್ಕಾಗಿ ಜಾತ್ರೆಗಳಲ್ಲಿ ಭಾಗವಹಿಸುತ್ತಾರೆ. ಜನರಿಂದ ಬಹುಮಾನವಾಗಿ ದವಸ ಧಾನ್ಯ, ಕುರಿ, ಕೋಳಿ, ಹಣ ಮುಂತಾದವುಗಳನ್ನು ಪಡೆದು ಈಗಲೂ ಜೀವನ ಸಾಗಿಸುತ್ತಿರುವ ಹಲವಾರು ಕುಟುಂಬಗಳು ರಾಜ್ಯದಾದ್ಯಂತ ಕಂಡುಬರುತ್ತವೆ. ಮನೋರಂಜನೆಗಾಗಿ ಸೇರುತ್ತಿದ್ದ ಜನರಿಗೆ, ತಾವೇ ಬೇರು ಎಲೆ, ಎಣ್ಣೆ ಬೀಜಗಳನ್ನು ಸೇರಿಸಿ ತಯಾರಿಸಿದ ನಾಟಿ ಔಷಧಿ, ನೋವಿನ ಎಣ್ಣೆ ಹಾಗೂ ಗುಳಿಗೆಗಳನ್ನು ಮಾರುತ್ತಾರೆ.

ಮೀಸಲಾತಿ:
ಬದಲಾಯಿಸಿ

ಸಂವಿಧಾನಬದ್ಧವಾಗಿ ತಮಗೆ ದೊರೆತಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಇದುವರೆಗೂ ಬಾಜಿಗರರಿಗೆ ಸಾಧ್ಯವಾಗಿಲ್ಲ. ಕರ್ನಾಟಕದ ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ದೊರೆತಿರುವುದರ ಬಗ್ಗೆ ಸಮುದಾಯದ ಯಾರಿಗೂ ಮಾಹಿತಿ ಇಲ್ಲ. ರೂಡಿಗತವಾಗಿ ವೃತ್ತಿಯ ಆಧಾರದ ಮೇಲೆ ಜನ ಕರೆಯುವ ಪದಗಳಾದ ಕಲಾಯಿಗಾರರು, ಜಾತಿಗಾರರು, ಫೈಲ್ವಾನ್ ಇತ್ಯಾದಿಗಳೇ ತಮ್ಮ ಜಾತಿ ಎಂದು ತಿಳಿದಿರುವ ಸಾಧ್ಯತೆ ಇದೆ. ತಮ್ಮ ಬಾಜಿಗರ್ ಜಾತಿ ಪ್ರವರ್ಗ-1ರಲ್ಲಿ ಇದೆ ಎಂಬುದೇ ಬಹುತೇಕರಿಗೆ ತಿಳಿದಿಲ್ಲ ಮತ್ತು ಅಲೆಮಾರಿತನದ ಕಾರಣದಿಂದಾಗಿ ಎಲ್ಲಿಯೂ ನೆಲೆ£ಲ್ಲದೇ ಇರುವುದರಿಂದ ಹಾಗೂ ಶಿಕ್ಷಣದಿಂದ ವಂಚಿತರಾಗಿರುವುದರಿಂದ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿಲ್ಲ ಎಂಬುದು ತಿಳಿದು ಬರುತ್ತದೆ. ಇವರು ಕ£ಷ್ಠ ಮೂಲಭೂತ ಸೌಲಭ್ಯಗಳನ್ನು ಪಡೆಯದೇ ಇಂದಿಗೂ ಅಲೆಮಾರಿಗಳಾಗಿ ಗುಡಾರ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ.