ಬಾಚಣಿಗೆ

ಕೂದಲನ್ನು ಬಾಚಿ ಕೊಳ್ಳವ ಉಪಕರಣ

ಬಾಚಣಿಗೆಯು (ಹಣಿಗೆ, ಸಿಕ್ಕಟಿಗೆ) ಹಲ್ಲುಗಳ ಸಾಲನ್ನು ಹಿಡಿದಿಡುವ ಕಾಂಡವನ್ನು ಹೊಂದಿರುವ ಒಂದು ಉಪಕರಣ. ಕೂದಲನ್ನು ಸ್ವಚ್ಛಗೊಳಿಸಲು, ಸುಕ್ಕು ಬಿಡಿಸಲು, ಅಥವಾ ವಿನ್ಯಾಸ ಮಾಡಲು ಕೂದಲಿನ ಮೂಲಕ ಇದನ್ನು ಎಳೆಯುವುದು ಇದರ ಉದ್ದೇಶವಾಗಿದೆ. ಬಾಚಣಿಗೆಗಳನ್ನು ಪ್ರಾಗೈತಿಹಾಸಿಕ ಕಾಲದಿಂದ ಬಳಸಲಾಗಿದೆ, ಮತ್ತು ಪರ್ಷಿಯಾದಲ್ಲಿನ ೫,೦೦೦ ವರ್ಷದಷ್ಟು ಹಳೆಯದೆಂದು ಕಾಲ ನಿರ್ಧಾರ ಮಾಡಲಾದ ವಸಾಹತುಗಳಿಂದ ಬಹಳ ಸಂಸ್ಕರಿತ ರೂಪಗಳಲ್ಲಿ ಪತ್ತೆಹಚ್ಚಲಾಗಿದೆ.[೧]

Plastic comb, 2015-06-07.jpg

ವಿವರಣೆಸಂಪಾದಿಸಿ

ಬಾಚಣಿಗೆಗಳು ಒಂದು ಕಾಂಡ ಮತ್ತು ಅದಕ್ಕೆ ಲಂಬ ಕೋನದಲ್ಲಿ ಸ್ಥಾಪಿಸಲಾದ ಹಲ್ಲುಗಳನ್ನು ಹೊಂದಿರುತ್ತವೆ. ಬಾಚಣಿಗೆಗಳನ್ನು ಅನೇಕ ವಸ್ತುಗಳಿಂದ ತಯಾರಿಸಬಹುದು, ಅತ್ಯಂತ ಸಾಮಾನ್ಯವಾಗಿ ಪ್ಲಾಸ್ಟಿಕ್, ಲೋಹ ಅಥವಾ ಕಟ್ಟಿಗೆ. ದಂತ ಹಾಗೂ ಆಮೆ ಚಿಪ್ಪಿನಿಂದ ತಯಾರಿಸಿದ ಬಾಚಣಿಗೆಗಳು ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದವು, ಆದರೆ ಅವುಗಳನ್ನು ಉತ್ಪತ್ತಿಮಾಡುವ ಪ್ರಾಣಿಗಳ ಬಗ್ಗೆ ಕಾಳಜಿಯಿಂದ ಅವುಗಳ ಬಳಕೆ ಕಡಿಮೆಯಾಗಿದೆ.

ಉಲ್ಲೇಖಗಳುಸಂಪಾದಿಸಿ

  1. Vaux, William Sandys Wright (1850-01-01). Nineveh and Persepolis: An Historical Sketch of Ancient Assyria and Persia, with an Account of the Recent Researches in Those Countries (in ಇಂಗ್ಲಿಷ್). A. Hall, Virtue, & Company.
"https://kn.wikipedia.org/w/index.php?title=ಬಾಚಣಿಗೆ&oldid=901008" ಇಂದ ಪಡೆಯಲ್ಪಟ್ಟಿದೆ