ಬಸವರಾಜ ಪುರಾಣಿಕ
ಬಸವರಾಜ ಪುರಾಣಿಕ (ಜನವರಿ 19, 1938 - ಜೂನ್ 20, 2017) ಓರ್ವ ಲೇಖಕ, ಭಾಷಾಂತರಕಾರ, ಪ್ರೊಫೈಲ್ ಬರಹಗಾರ ಮತ್ತು ವಚನ ಸಾಹಿತ್ಯಕ್ಕೆ ಸಮರ್ಪಿತವಾದ ಪ್ರಸಿದ್ಧ ಭಾಷಣಕಾರರಾಗಿದ್ದರು. ಅವರು ಶಿವ ಶರಣರ ತತ್ತ್ವಶಾಸ್ತ್ರದಲ್ಲಿ ಪರಿಣತರಾಗಿದ್ದರು ಮತ್ತು ಅಲ್ಲಮ ಪ್ರಭು ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಅವರು ಉರ್ದುದಿಂದ ಕನ್ನಡಕ್ಕೆ ಪುಸ್ತಕಗಳನ್ನು ಅನುವಾಡಿಸಿದ ಪ್ರಸಿದ್ಧ ಭಾಷಾಂತರಕಾರರಾಗಿದ್ದರು.
ಅವರಿಗೆ ಕರ್ನಾಟಕ ಅನುವಾದ ಅಕಾಡೆಮಿ 2007 ರಲ್ಲಿ [೧] [೨]ಅನುವಾದಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿ ನೀಡಲಾಗಿತು ಮತ್ತು ಬಿಜಾಪುರ ಸಾಹಿತ್ಯ ಸಮ್ಮೇಳನ 2013 ರಲ್ಲಿ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಅವರನ್ನು ಸನ್ಮಾನಿಸಲಾಯಿತು. ಅವರ ಪುಸ್ತಕ ಅನುಪಮ ಚರಿತ ಅಲಮಪ್ರಭುದೇವ ಗೆ ಕಾರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರೊಫೆಸರ್ ಮಾಳವಾಡ ಪ್ರಶಸ್ತಿಯನ್ನು ನೀಡಲಾಯಿತು.
ಅವರು ಕರ್ನಾಟಕ ಉರ್ದು ಅಕಾಡೆಮಿಯ ಸದಸ್ಯರಾಗಿದ್ದರು ಮತ್ತು ಅವರು ತಮ್ಮ ಭಾಷಾಂತರದ ಮೂಲಕ ಉರ್ದು ಸಾಹಿತ್ಯವನ್ನು ಜನಪ್ರಿಯಗೊಳಿಸುವಲ್ಲಿ ಸಹಾಯ ಮಾಡಿದ್ದಾರೆ. ಅವರ ಅನುವಾದಗಳಾದ ಉರ್ದು ಕಥೆಗಳು (ಮೂಲ ಉರ್ದು ಅಫ್ಸೇನ ಅನುವಾದ) ಮತ್ತು ಹೊಗೆ(ಗುಳ್ಝರ್ ರವರ ಧುವಾ ಅನುವಾದ) ಜನಪ್ರಿಯವಾಗಿವೆ
ಇಂದಿನ ಕೊಪ್ಪಳ ಜಿಲ್ಲೆಯಲ್ಲಿರುವ ದ್ಯಾಂಪುರವೆಂಬ ಕುಗ್ರಾಮದಲ್ಲಿ ಇವರು Jan 19,1938 ರಂದು ಜನಿಸಿದರು. ಇವರ ತಂದೆ ಕಲ್ಲಿನಾಥ ಶಾಸ್ತ್ರೀ ಪುರಾಣಿಕ, ತಾಯಿ ದಾನಮ್ಮ ಮತ್ತು ಅಣ್ಣಂದಿರು, ಕವಿ ಸಿದ್ದಯ್ಯ ಪುರಾಣಿಕ ಹಾಗು ಅನ್ನದಾನಯ್ಯ ಪುರಾಣಿಕ
ಪುರಾಣಿಕರು ತಮ್ಮ ಆರಂಭಿಕ ಶಿಕ್ಷಣವನ್ನು ಕೊಪ್ಪಳದಲ್ಲಿ ಮತ್ತು ನಂತರ ಹುಬ್ಬಳ್ಳಿಯಲ್ಲಿ ಮಾಡಿದರು. ನಂತರ ಅವರು ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಿದರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸ್ಟ್ರಕ್ಚರಲ್ ಇಂಜಿನಿಯರಿಂಗ್ನಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪಡೆದರು ಮತ್ತು ವಾಟರ್ಲೂ ವಿಶ್ವವಿದ್ಯಾನಿಲಯದಲ್ಲಿ ಸುಧಾರಿತ ರಚನಾತ್ಮಕ ಎಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಿದರು..
ತಂದೆ, ಅಣ್ಣಂದಿರಿಂದ ಪ್ರಭಾವಿತರಾಗಿ ಸಾಹಿತ್ಯದಲ್ಲಿ ಅಭಿರುಚಿ ಹೊಂದಿರುವ ಇವರು, ಉತ್ತಮ ವಾಗ್ಮಿಗಳೆಂದು ಹೆಸರು ಮಾಡಿದ್ದಾರೆ. ಬಸವ ಸಮಿತಿ, ಬೆಂಗಳೂರು ಇವರ ಬಸವ ಜರ್ನಲ್ ಮಾಸ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದ್ದಾರೆ
ಬಸವರಾಜ ಪುರಾಣಕ ಎಂಜಿನಿಯರಿಂಗ್, ಉದ್ಯಮಶೀಲತೆ ಮತ್ತು ಶರಣ ತತ್ತ್ವಶಾಸ್ತ್ರದ ವಿಷಯಗಳ ಬಗ್ಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ 18 ಪುಸ್ತಕಗಳನ್ನು ಬರೆದು ಭಾಷಾಂತರಿಸಿದ್ದಾರೆ.
ಕನ್ನಡ ಪುಸ್ತಕಗಳು:
- ಸಿಮೆಂಟ್ ಕಾಂಕ್ರೀಟ್ (ಪ್ರಕಾಶಕರು: ಕಾರ್ನಾಟಕ ವಿಶ್ವವಿದ್ಯಾಲಯ)
- ನಿಮಗೊಂದು ಹೊಸಮಾನೆ (ಪ್ರಕಾಶಕರು: ಕರ್ನಾಟಕ ವಿಶ್ವವಿದ್ಯಾಲಯ)
- ಅನುಪಮಚರಿತ ಅಲ್ಲಮಪ್ರಭುದೇವ (ಪ್ರಕಾಶಕರು: ಬಸವ ಸಮಿತಿ)
- ಉದ್ಯಮಶೀಲತೆ (ಪ್ರಕಾಶಕರು: ಕರ್ನಾಟಕ ವಿಶ್ವವಿದ್ಯಾನಿಲಯ)
- ಅಂಗ ಕಾರಂಡ, ಆತ್ಮ ಸುಘಂಧ, ನಿಂಬಲ್ ಮಠ (ಪ್ರಕಾಶಕರು: ಶ್ರೀ ನಿಂಬಲ್ ಮಠ)
- ಅಲ್ಲಮಪ್ರಭು (ಪ್ರಕಾಶಕ: ಬಸವ ಸಮಿತಿ)
- ವೀರಶೈವ ಧರ್ಮ ಹಗು ವ್ಯತಿತ್ವ ವಿಕಸನ (ಪ್ರಕಾಶಕರು: ಶ್ರೀ ರಂಭಪುರಿ ಪೀಠ)
- ಅಲ್ಲಮಪ್ರಭುದೇವ - ಬೆರಗು, ಬೆಡಗು, ಬೆಳಗು (ಪ್ರಕಾಶಕರು: ಹರಕೊಡ ಶ್ರೀಮಠ )
- ಅಲ್ಲಮಪ್ರಭು (ಪ್ರಕಾಶಕರು: ಸಿದ್ದಗಂಗಾ ಮಠ )
- ಅನುಭಾವದ ಆಯಾಮಗುಲು (ಪ್ರಕಾಶಕರು: ಶ್ರೀ ರಂಭಪುರಿ ಪೀಠ)
- ಬಸವ ಮತ್ತು ಉದ್ಯಮಶೀಲತೆ (ಪ್ರಕಾಶಕರು: ಕಾರ್ನಾಟಕ ವಿಶ್ವವಿದ್ಯಾಲಯ)
- ಕನ್ನಡ ಕುಲದೀಕ್ಷಿತರು
ಇಂಗ್ಲಿಷ್ ಪುಸ್ತಕಗಳು:
- ಆರ್ಟಿಸ್ಟ್ಸ್ ಆಫ್ ಇನ್ನರ್ ಲೈಫ್[೩] (ಪ್ರಕಾಶಕರು: ಬಸವ ಸಮಿತಿ)
- ಚನ್ನಬಸವಣ್ಣ
ಅನುವಾದಗಳು:
- ಸಂರಚನಾತ್ಮಕ ಯಂತ್ರಶಾಸ್ತ್ರ ( ರಷ್ಯನ್ ಮೂಲದ ಇಂಗ್ಲಿಷ್ ಅನುವಾದ) (ಪ್ರಕಾಶಕರು: ಕರ್ನಾಟಕ ವಿಶ್ವವಿದ್ಯಾಲಯ)
- ಸೈಧಾಂತಿಕ ಯಂತ್ರಶಾಸ್ತ್ರ (ರಷ್ಯನ್ ಮೂಲದ ಇಂಗ್ಲಿಷ್ ಅನುವಾದ) (ಪ್ರಕಾಶಕರು: ಕಾರ್ನಾಟಕ ವಿಶ್ವವಿದ್ಯಾಲಯ)
- ಉರ್ದು ಕಥೆಗಳು[೪] (ಮೂಲ ಉರ್ದು ಅಫ್ಸಾನೆ) (ಪ್ರಕಾಶಕರು: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ)
- ಹೊಗೆ (ಮೂಲ ಧುವಾ) (ಪ್ರಕಾಶಕರು: ಅನುವಾದ ಸಾಹಿತ್ಯ ಅಕಾಡೆಮಿ ನವ ದೆಹಲಿ)
ವಿಜ್ಞಾನ, ಧರ್ಮ ಮತ್ತು ಶಿವಶರಣರನ್ನು ಹಲವಾರು ಲೇಖನಗಳನ್ನು ಕನ್ನಡ ದಿನಪತ್ರಿಕೆಗಳಲ್ಲಿ ಮತ್ತು ಬಸವ ಪಥ ಮಾಸ ಪತ್ರಿಕೆಯಲ್ಲಿ ಬರೆದಿದ್ದಾರೆ.
ಪೂರ್ಣಿಕ ಅವರು ಬೆಂಗಳೂರಿನಲ್ಲಿ ಜೂನ್ 20, 2017 ರಂದು ನಿಧನರಾದರು[೫]
ಬಸವರಾಜ ಪುರಾನಿಕ ನೆನೆಪು
ಉಲ್ಲೇಖಗಳು
ಬದಲಾಯಿಸಿ- ↑ http://www.thehindu.com/todays-paper/tp-national/tp-karnataka/Anuvada-Academy-announces-awards/article15150240.ece
- ↑ http://archive.deccanherald.com/DeccanHerald.com/Content/Jan242008/state2008012448274.asp
- ↑ http://www.thehindu.com/todays-paper/tp-national/tp-karnataka/book-on-vachanas-released/article3032792.ece
- ↑ https://archive.org/details/in.ernet.dli.2015.447709
- ↑ http://vijaykarnataka.indiatimes.com/district/koppala/-/articleshow/59238137.cms