ಬಳ್ಳಿ ಅರಿಶಿನ
Coscinium fenestratum | |
---|---|
Illustration of plant parts from Coscinium fenestratum (1852). | |
Scientific classification | |
ಸಾಮ್ರಾಜ್ಯ: | Plantae
|
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | Eudicots
|
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | C. fenestratum
|
Binomial name | |
Coscinium fenestratum (Goetgh.) Colebr
| |
Synonyms | |
Coscinium maingayi Pierre[೧] |
ಬಳ್ಳಿ ಅರಶಿನ (Coscinium fenestratum) ತೇವಾಂಶವಿರುವ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೆಳೆಯುವ ಸಸ್ಯ ಸಂಪನ್ಮೂಲ. ಈ ಗಿಡವು ಕೊಸೆನಿಯಮ್ ಫ಼ೆನೆಸ್ಟ್ರೆಟಮ್ ಕೊಲೆಬ್ರ್ Coscinium Fenestratum Colebr ಎಂಬ ವೈಜ್ಞಾನಿಕ ಹೆಸರನ್ನು ಒಳಗೊಂಡಿದ್ದು, ಮಧುಪರ್ಣಿ ಸಸ್ಯವರ್ಗಕ್ಕೆ ಸೇರಿದ್ದಾಗಿದೆ .ದ್ವಿದಳ ಸಸ್ಯವಾದ ಇದರ ಎಲೆ ಮೇಲ್ನೋಟಕ್ಕೆ ವೀಳ್ಯದೆಲೆಯಂತೆ ಗೋಚರಿಸಿದರೂ, ಇದರ ಮೇಲೈ ವೀಳ್ಯದೆಲೆಯಷ್ಟು ನುಣುಪಾಗಿಲ್ಲ, ಅಲ್ಲದೇ ಗಾತ್ರದಲ್ಲಿಯೂ ದೊಡ್ಡದು. ಎಲೆಯ ಹಿಂಭಾಗ ಬೆಳ್ಳಿಯ ಹೊಳಪು. ಚಿಗುರಿನ ಬಣ್ಣವೂ ಬೆಳ್ಳಿಯದ್ದೇ. ಸಂತಾನಾಭಿವೃದ್ಧಿ ಬೀಜದಿಂದ. ಗಾಢ ಅರಶಿನ ಬಣ್ಣದ ಇದರ ಕಾಂಡದ ರುಚಿ ಕಹಿ. ಈ ಬಳ್ಳಿಯ ಬೆಳವಣಿಗೆ ನಿಧಾನ.
ಭಾರತದ ಹೆಸರುಗಳು
ಬದಲಾಯಿಸಿಪ್ರಸಾರಣ
ಬದಲಾಯಿಸಿದಕ್ಷಿಣ ಭಾರತದ ಪಶ್ಚಿಮಖಘಟ್ಟಗಳಲ್ಲಿ ಹೇರಳವಾಗಿ ದೊರೆಯುತ್ತವೆ.
ಸಸ್ಯ ವರ್ಣನೆ
ಬದಲಾಯಿಸಿಇದು ಹಳದಿ ತೊಗಟೆಯುಳ್ಳ, ಸ್ಥೂಲ ಮತ್ತು ಹಬ್ಬುವ ಗಿಡ. ಸಸಿಯಾಗಿರುವಾಗ ರೋಮಗಳಿಂದ ತುಂಬಿರುತ್ತದೆ. ಎಲೆ ಚರ್ಮದಂತೆ, ಮೇಲ್ಭಾಗ ನಯವಾಗಿ, ಕೆಳಭಾಗ ಸ್ವಲ್ಪ ರೋಮಗಳಿಂದ ಕೂಡಿರುತ್ತದೆ. ಎಲೆಯಲ್ಲಿ ೫ ರಿಂದ ೭ ನರಗಳು ಇವೆ. ತುದಿಯು ಸಣ್ಣದಾಗಿರುತ್ತದೆ. ಸಣ್ಣ ಶಿಖೆಯನ್ನುಳ್ಳ ಹೂವುಗಳು ಚಿಕ್ಕ ಚಿಕ್ಕವಾಗಿರುತ್ತವೆ.[೨]
ಮೂಲಿಕೆ ಮತ್ತು ದ್ರವ್ಯಗುಣ
ಬದಲಾಯಿಸಿಒಣಗಿದ ಕಾಂಡದ ದ್ರವ್ಯದ ಹೆಸರು ಬೆರ್ ಬೆರಿನ್. ಜ್ವರ, ನಿಶ್ಯಕ್ತತೆ, ದೌರ್ಬಲ್ಯ, ಕೆಲವು ಅಜೀರ್ಣ ರೋಗಗಳಲ್ಲಿ ಫಲಕಾರಿಯಾಗಿದೆ. ಹೊರಲೇಪನವಾಗಿ ಗಾಯಗಳಿಗೆ ಉಪಯೋಗಿಸುತ್ತಾರೆ. ಇದ ಬೇರು ಕ್ರಿಮಿನಾಶಕ ಗುಣವುಳ್ಳದ್ದಾಗಿದೆ.
ಊಪಯೋಗಗಳು
ಬದಲಾಯಿಸಿಕಾಂಡವು ಒಂದು ಮಾದರಿಯಾದ ಹಳದಿ ಬಣ್ಣವನ್ನು ಕೊಡುತ್ತದೆ. ಒಂಟಿಯಾಗಿ ಅಥವಾ ಅರಶಿನದೊಂದಿಗೆ ಉಪಯೋಗಿಸುತ್ತಾರೆ.
ಉಲ್ಲೇಖಗಳು
ಬದಲಾಯಿಸಿ- ↑ Coscinium fenestratum (Goetgh.) Colebr. The Plant List (2013). Version 1.1
- ↑ ಔಷಧಿಯ ಗಿಡಗಳು, ಎಸ್. ಕೆ. ಚೈನ್, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ, ೧೮೯೮, ಪುಟ ೫೮