ಬಳ್ಳಾರ್ಪುರ ಕೋಟೆ (ಹಿಂದೆ ಬಳ್ಳಾರ್ಷಾ ಕೋಟೆ ಎಂದು ಕರೆಯಲಾಗುತ್ತಿತ್ತು) ಭಾರತದ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿರುವ ಪುರಾತನ ಕೋಟೆಯಾಗಿದೆ. ಇದು ಬಳ್ಳಾರ್ಪುರ ನಗರದಲ್ಲಿ, ವರದಾ ನದಿಯ ಪೂರ್ವ ದಡದಲ್ಲಿದೆ.

ಬಳ್ಳಾರ್ಪುರ ಕೋಟೆ
ಚಂದ್ರಾಪುರ ಜಿಲ್ಲೆ, ಮಹಾರಾಷ್ಟ್ರ
ನಿರ್ದೇಶಾಂಕಗಳು19°51′03.01″N 79°20′30.75″E / 19.8508361°N 79.3418750°E / 19.8508361; 79.3418750
ಶೈಲಿಭೂ ಕೋಟೆ
ಸ್ಥಳದ ಮಾಹಿತಿ
ಒಡೆಯಭಾರತ ಸರ್ಕಾರ
ಇವರ ಹಿಡಿತದಲ್ಲಿದೆ(೧೭೩೯-೧೮೧೮)
 ಯುನೈಟೆಡ್ ಕಿಂಗ್ಡಂ
  • ಈಸ್ಟ್ ಇಂಡಿಯಾ ಕಂಪನಿ (೧೮೧೮-೧೮೫೭)
  • ಬ್ರಿಟಿಷ್ ರಾಜ್ (೧೮೫೭-೧೯೪೭)
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ಹೌದು
ಪರಿಸ್ಥಿತಿಅವಶೇಷ
ಸ್ಥಳದ ಇತಿಹಾಸ
ಸಾಮಗ್ರಿಗಳುಕಲ್ಲು

ಇತಿಹಾಸ ಬದಲಾಯಿಸಿ

ಬಳ್ಳಾರ್ಪುರ ಕೋಟೆಯನ್ನು ಗೊಂಡ ಸಾಮ್ರಾಜ್ಯದ ರಾಜ ಖಾಂಡ್ಕ್ಯ ಬಲ್ಲಾಳ ಷಾ (೧೪೩೭-೬೨) ನಿರ್ಮಿಸಿದನು. ಅವನು ತನ್ನ ತಂದೆಯಾದ ಶೇರ್ ಷಾನ ನಂತರ ಅವನ ಉತ್ತರಾಧಿಕಾರಿಯಾಗಿ ಸಿಂಹಾಸನವನ್ನೇರಿದನು. ಅವನು ಚಂದ್ರಾಪುರ ನಗರದ ಸ್ಥಾಪಕನೂ ಆಗಿದ್ದನು. ರಾಜನು ಪವಾಡದ ನೀರಿನ ಕೊಳವನ್ನು ಕಂಡುಹಿಡಿದನು, ಅದು ಹುಣ್ಣುಗಳು ಮತ್ತು ಗಾಯಗಳನ್ನು ಗುಣಪಡಿಸಲು ಸಹಾಯಕವಾಯಿತು. ಅದಕ್ಕೆ ಅಕಲೇಶ್ವರ ತೀರ್ಥ ಎಂದು ಹೆಸರಿಡಲಾಯಿತು. ಈ ಪಟ್ಟಣವು ಕೋಟೆಯ ಸುತ್ತಲೂ ಬಳ್ಳಾರ್ಪುರ ಅಥವಾ ಬಲ್ಲಾಳ ನಗರವಾಗಿ ಬೆಳೆಯಿತು. ಅನೇಕ ವರ್ಷಗಳ ಕಾಲ ಬಳ್ಳಾರ್ಪುರವು ಸಾಮ್ರಾಜ್ಯದ ಕೇಂದ್ರವಾಗಿತ್ತು. ನಂತರ ಚಂದ್ರಾಪುರ ನಗರವನ್ನು ಸ್ಥಾಪಿಸಲಾಯಿತು. ಕೊನೆಯ ಗೊಂಡ ಸಾಮ್ರಾಜ್ಯದ ರಾಜ ನೀಲಕಂಠ ಷಾ ಬಳ್ಳಾರ್ಪುರದ ಸೆರೆಮನೆಯಲ್ಲಿ ನಿಧನರಾದರು.

ವೈಶಿಷ್ಟ್ಯಗಳು ಬದಲಾಯಿಸಿ

ಕೋಟೆಯು ದೊಡ್ಡ ಕಪ್ಪು ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ ಮತ್ತು ಆ ಕಾಲದಲ್ಲಿ ಅಸಾಧಾರಣ ರಕ್ಷಣಾ ಕೋಟೆಯಾಗಿತ್ತು. ಈ ಕೋಟೆಯು ಆಯತ ಆಕಾರದಲ್ಲಿದ್ದು, ಮುಖ್ಯ ದ್ವಾರವು ಪೂರ್ವ ದಿಕ್ಕಿಗೆ ಎದುರಾಗಿದೆ. ವರದಾ ನದಿಯ ಪೂರ್ವ ದಂಡೆಯಲ್ಲಿ ನಿರ್ಮಿಸಲಾದ ಈ ಕೋಟೆಯು ಗೋಡೆಗಳು ಮತ್ತು ಗೋಪುರಗಳನ್ನು ಹೊಂದಿದೆ. ಪರಸ್ಪರ ಲಂಬಕೋನದಲ್ಲಿ ಎರಡು ಅಖಂಡ ಬಾಗಿಲುಗಳನ್ನು ಹೊಂದಿಸಲಾಗಿದೆ. ನದಿಯ ಅಂಚಿನಲ್ಲಿ ಇದರ ಸಣ್ಣ ಪ್ರವೇಶದ್ವಾರವೂ ಇದೆ. ಕೋಟೆಯ ಗೋಡೆಗಳು ಈಗಲೂ ಹಾಗೇ ಇವೆ, ಆದರೆ ಎಲ್ಲಾ ಹಳೆಯ ಕಟ್ಟಡಗಳು ಸಂಪೂರ್ಣ ಅವಶೇಷಗಳಾಗಿವೆ. ಈ ಕಂಬ/ಸ್ಥಂಬದ ಹಲವು ಭಾಗಗಳು ಇನ್ನೂ ಭೂಮಿಯೊಳಗೆ ಸುರಕ್ಷಿತವಾಗಿವೆ. ಕೋಟೆಯ ಗೋಡೆಗಳಲ್ಲಿ ಪತ್ತೆ ಮಾಡಲು ಸಾದ್ಯವಾಗದ ಅನೇಕ ಸುರಂಗಗಳಿವೆ. [೧]

ಉಲ್ಲೇಖಗಳು ಬದಲಾಯಿಸಿ

  1. "The Gazetteers Department - Chandrapur". Cultural.maharashtra.gov.in. Retrieved 2019-10-19.