ಬಳ್ಳಾರಿ ನಾಗ (ಚಲನಚಿತ್ರ)

ಬಳ್ಳಾರಿ ನಾಗ ೨೦೦೯ರಲ್ಲಿ ಬಿಡುಗಡೆಯಾದ ಚಿತ್ರ. ವಿಷ್ಣುವರ್ಧನ್ ಮರಣದ ಮುನ್ನ ಬಿಡೂಗಡೆಯಾದ ಅವರ ಕೊನೆಯ ಚಿತ್ರ. ಮಲಯಾಳಂರಾಜಮಾಣಿಕ್ಯಂ ಚಿತ್ರದ ರೀಮೇಕ್.[೧][೨]

ಬಳ್ಳಾರಿ ನಾಗ (ಚಲನಚಿತ್ರ)
ಬಳ್ಳಾರಿ ನಾಗ
ನಿರ್ದೇಶನದಿನೇಶ್ ಬಾಬು
ನಿರ್ಮಾಪಕಕೆ. ಮಂಜು
ಕಥೆಶಹೀದ್
ಪಾತ್ರವರ್ಗವಿಷ್ಣುವರ್ಧನ್ ಮಾನಸಿ
ಸಂಗೀತಎಲ್ ಎನ್ ಶಾಸ್ತ್ರಿ
ಸಾಹಿತ್ಯಗೀತಪ್ರಿಯ

ತಾರಾಗಣ ಬದಲಾಯಿಸಿ

ಬಿಡುಗಡೆ ಬದಲಾಯಿಸಿ

ಈ ಚಿತ್ರವು ೯ ಅಕ್ಟೋಬರ್ ೨೦೦೯ರಂದು ರಾಜ್ಯಾದ್ಯಂತ ಬಿಡುಗಡೆಯಾಯಿತು . ವಿಷ್ಣುವರ್ಧನ್ ಅವರ ನಿಧನದ ಮುನ್ನ ಬಿಡೂಗಡೆಯಾದ ಕೊನೆಯ ಚಿತ್ರ . ಸ್ಕೂಲ್ ಮಾಸ್ಟರ್ ಮತ್ತು ಆಪ್ತರಕ್ಷಕ ಚಿತ್ರಗಳು, ಅವರ ಮರಣದ ನಂತರ ಬಿಡುಗಡೆಯಾದವು.

ವಿಮರ್ಶಾತ್ಮಕ ಪ್ರತಿಕ್ರಿಯೆ ಬದಲಾಯಿಸಿ

ಟೈಮ್ಸ್ ಆಫ್ ಇಂಡಿಯ ಈ ಚಿತ್ರಕ್ಕೆ ೫ ರಲ್ಲಿ ೩.೫ ಸ್ಟಾರ್‌ಗಳನ್ನು ನೀಡುತ್ತ"ಎಲ್ ಎನ್ ಶಾಸ್ತ್ರಿ ಅವರು ಉತ್ತಮ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೀರ್ತಿ ವಿಷ್ಣುವರ್ಧನ್ ಅವರು ಅತ್ಯುತ್ತಮ ವೇಷಭೂಷಣ ನೀಡಿದ್ದಾರೆ. ಪಳನಿರಾಜ್ ಮತ್ತು ಪಂಬಲ್ ರವಿ ಕೆಲವು ಅತ್ಯುತ್ತಮ ಫೈಟ್‌ಗಳನ್ನು ಸಂಯೋಜನೆ ಮಾಡಿದ್ದಾರೆ" ಎಂದಿದೆ. [೩]. ರೆಡಿಫ್.ಕಾಮ್ ಚಿತ್ರಕ್ಕೆ ೫ ರಲ್ಲಿ ೩ ಸ್ಟಾರ್‌ಗಳನ್ನು ನೀಡುತ್ತ "ಎಲ್ ಎನ್ ಶಾಸ್ತ್ರಿ ಅವರ ಹಿಪ್ ಹಾಪ್ ಹಾಡುಗಳ ಸಂಯೋಜನೆ ಚೆನ್ನಾಗಿದೆ. ಅವರ ಹಿನ್ನೆಲೆ ಸಂಗೀತವೂ ಪ್ಲಸ್ ಪಾಯಿಂಟ್ ಆಗಿದೆ. ಎಂದಿನಂತೆ, ನಿರ್ದೇಶಕ ಬಾಬೂ ಉತ್ತಮ ತಾಂತ್ರಿಕ ಕೆಲಸವನ್ನು ಖಚಿತಪಡಿಸಿದ್ದಾರೆ.ಒಟ್ಟಿನಲ್ಲಿ ಬಳ್ಳಾರಿ ನಾಗ ಆನಂದದಾಯಕ ಮನರಂಜನೆ ನೀಡುತ್ತದೆ" ಎಂದಿದೆ.[೪]ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಬರೆದದ್ದು "ಬಳ್ಳಾರಿ ನಾಗ ಚಿತ್ರ 'ಜೋರಾಗಿ' ಇದ್ದರೂ, ವಿಷ್ಣು ಅವರ ರಾಕಿಂಗ್‌ ಪ್ರದರ್ಶನದಿಂದಾಗಿ ಟ್ರೀಟ್ ಆಗಿರುತ್ತದೆ".[೫]

ಉಲ್ಲೇಖಗಳು ಬದಲಾಯಿಸಿ

  1. "Bellary Naga-Review". Archived from the original on 2023-11-28. Retrieved 2024-05-08.
  2. "Part of the job". ಬೆಂಗಳೂರು ಮಿರರ್. Retrieved 28 ಸೆಪ್ಟೆಂಬರ್ 2009.
  3. "Bellary Naga Movie Review". ಟೈಮ್ಸ್ ಆಫ್ ಇಂಡಿಯ. Retrieved 14 ಮೇ 2016.
  4. "Bellary Naga is a breezy entertainer". Retrieved 9 ಅಕ್ಟೋಬರ್ 2009.
  5. "Review - Bellary Naga". Retrieved 12 ಅಕ್ಟೋಬರ್ 2009.