ಬಲಾತ್ಕಾರದ ಸಂಭೋಗವು (ಅತ್ಯಾಚಾರ) ಒಂದು ಬಗೆಯ ಲೈಂಗಿಕ ಅಪರಾಧವಾಗಿದೆ. ಇದರಲ್ಲಿ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮೇಲೆ ಅವನ/ಅವಳ ಸಮ್ಮತಿಯಿಲ್ಲದೆಯೇ ಸಂಭೋಗ ಅಥವಾ ಇತರ ರೂಪದ ಲೈಂಗಿಕ ಪ್ರವೇಶವನ್ನು ಎಸಗಲಾಗುತ್ತದೆ. ಈ ಕ್ರಿಯೆಯನ್ನು ಶಾರೀರಿಕ ಬಲ, ಬಲಾತ್ಕಾರ, ಅಧಿಕಾರದ ದುರುಪಯೋಗದಿಂದ ನಡೆಸಬಹುದು, ಅಥವಾ ಸಕ್ರಮ ಸಮ್ಮತಿಯನ್ನು ನೀಡಲು ಅಸಮರ್ಥವಾಗಿರುವ ವ್ಯಕ್ತಿಯ (ಉದಾಹರಣೆಗೆ ಪ್ರಜ್ಞೆ ತಪ್ಪಿದ, ಅಶಕ್ತನಾಗಿಸಿದ, ಬೌದ್ಧಿಕ ಅಶಕ್ತತೆಯಿರುವ, ಸಮ್ಮತಿಯ ವಯಸ್ಸಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿ) ವಿರುದ್ಧ ನಡೆಸಬಹುದು.[೧]

ಅತ್ಯಾಚಾರದ ವರದಿ ಒಪ್ಪಿಸುವ, ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮತ್ತು ಶಿಕ್ಷೆ ನೀಡುವ ಪ್ರಮಾಣ ಕಾನೂನುವ್ಯಾಪ್ತಿಗಳ ನಡುವೆ ಬದಲಾಗುತ್ತದೆ. ವಿಶ್ವಾದ್ಯಂತ, ಅತ್ಯಾಚಾರವನ್ನು ಮುಖ್ಯವಾಗಿ ಪುರುಷರು ಎಸಗುತ್ತಾರೆ.[೨] ವ್ಯಕ್ತಿಗೆ ತಿಳಿದಿರುವ ಜನರಿಂದ ಅತ್ಯಾಚಾರಕ್ಕಿಂತ ಅಪರಿಚಿತರಿಂದ ಅತ್ಯಾಚಾರವು ಸಾಧಾರಣವಾಗಿ ಕಡಿಮೆ ಸಾಮಾನ್ಯವಾಗಿದೆ. ಪುರುಷರ ಮೇಲೆ ಪುರುಷರ, ಹಾಗೂ ಮಹಿಳೆಯರ ಮೇಲೆ ಮಹಿಳೆಯರ ಅತ್ಯಾಚಾರ ಜೈಲುಗಳಲ್ಲಿ ಸಾಮಾನ್ಯವಾಗಿದೆ ಮತ್ತು ಅತ್ಯಾಚಾರದ ಅತಿ ಕಡಿಮೆ ವರದಿ ಮಾಡಲಾದ ರೂಪಗಳಾಗಿರಬಹುದು.

ಉಲ್ಲೇಖಗಳು ಬದಲಾಯಿಸಿ

  1. "Sexual violence chapter 6" (PDF). World Health Organization. 2002. Retrieved 5 December 2015. {{cite web}}: Italic or bold markup not allowed in: |publisher= (help)
  2. "Violence against women". World Health Organization (in ಬ್ರಿಟಿಷ್ ಇಂಗ್ಲಿಷ್). Retrieved 2017-09-08.