ಬಲವಂತ್ ರಾಯ್ ಸಮಿತಿ

ಬಲವಂತ್ ರಾಯ್ ಸಮಿತಿ ೧೯೫೨ ರಲ್ಲಿ ಭಾರತ ಸರ್ಕಾರವು "ಸಮುದಾಯ ಅಭಿವೃಧಿ ಯೊಜನೆ" ಹಾಗು ೧೯೫೩ ರಲ್ಲಿ "ರಾಷ್ಟೀಯ ವಿಸ್ತಿರಣ ಆಯೋಗ" ಜಾರಿಮಾಡಿತು. ಈ ೨ ಯೋಜನೆಗಳನ್ನು ಸೂಕ್ತ ಕ್ರಮದಲ್ಲಿ ನಡೆಸಲು "ಬಲವಂತ್ ರಾಯ್" ಅದ್ಧ್ಯಕ್ಷತೆಯಲ್ಲಿ 1954 ರಲ್ಲಿ ಸಮಿತಿಯನ್ನು ರಚಿಸಿತು.

ಸಮಿತಿಯ ಸದ್ಯಸ್ಯರ ಪಟ್ಟಿ:

೧. ಬಲವಂತ್ ರಾಯ್ ಅಧ್ಯಕ್ಸರು ೨. ಡಾ. ಶಂಕರ್ ದಯಾಳು ಶರ್ಮ ಸದ್ಯಸರು ೩. ಬಿ.ಜಿ.ರಾವ್ ಸದ್ಯಸರು ೪. ಪೂಲಸಿಂಗ್ ಸದ್ಯಸರು

ಬಲವಂತ್ ರಾಯ್ ಸಮಿತಿಯು ೧೯೫೭ ರಲ್ಲಿ ತನ್ನ ವರದಿಯನ್ನು ನೀಡಿತ್ತು. ಈ ಸಮಿತಿಯು ೧. "ಪ್ರಜಾಪ್ರಭುತ್ವ ವಿಕೆಂದ್ರೀಕರಣ" ತತ್ತ್ವದ ಆಧಾರದ ಮೇಲೆ ಪಂಚಾಯತ್ ರಾಜ್ ಸ್ಥಾಪನೆಗೆ ಸಮಿತಿ ಶಿಫಾರಸ್ಸು. . ೨. ಗ್ರಾಮದಿಂದ ಜಿಲ್ಲೆಯವರಗೆ ೩ ಹಂತದ ಪಂಚಾಯತ್ ವ್ಯವಸ್ಥೆಯ ಸ್ಥಾಪನೆಗೆ ಶಿಫಾರಸ್ಸು. ಅ) ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯತ್ ಸ್ಥಾಪನೆ. ಆ) ಬ್ಲಾಕ್ ಮಟ್ಟದಲ್ಲಿ ತಾಲ್ಲೂಕು ಪಂಚಾಯತ್ ಸ್ಥಾಪನೆ. ಇ) ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್ತ್ ಸ್ಥಾಪನೆ. ೩. ೩ ಇಲಾಖೆಗಳು ಒಂದಕ್ಕೊಂದು ಕೊಂಡಿಯಂತೆ ಇರಬೇಕು. ನೇರವಾಗಿ ಜನರಿಂದ ಆಯ್ಕೆಯಾದವರಿಂದ ಗ್ರಾಮ ಪಂಚಯಾತ್ ರಚಿಸಬೆಕು. ತಾಲ್ಲೂಕ್ ಮತ್ತು ಜಿಲ್ಲಾ ಪರಿಷತ್ ಪರೋಕ್ಷವಾಗಿ ಆಯ್ಕೆಯಾದವರಿಂದ ರಚಿಸಬೆಕು. ೪. ತಾಲ್ಲೂಕ್ ಮತ್ತು ಜಿಲ್ಲಾ ಪರಿಷತ್ ಆಡಳಿತ ಹಾಗೂ ಸಲಾಹತ್ಮಕ್ಕವಾಗಿ ಕಾರ್ಯ ನಿರ್ವಹಿಸಬೇಕು.

೧೯೫೮ ರಲ್ಲಿ ರಾಷ್ಟ್ರಿಯ ಮಂಡಳಿ ಈ ವರದಿಯ ಅಂಗೀಕರಿಸಿತು. ೧೯೫೯ ಅಕ್ಟೋಬರ್ ೨ ಗಾಂಧಿ ಜಯಂತಿ ಪ್ರಯುಕ್ತ ರಾಷ್ಟ್ರದಲ್ಲಿ ಮೊದಲ ಬಾರಿಗೆ ರಾಜಸ್ತಾನದ ನಾಗುರ್ (ನಾಗ್ಪುರ್) ದಲ್ಲಿ ಜಾರಿಗೆ ಬಂದಿತ್ತು. ಈ ವರದಿಯನ್ನು ಪಂಚಾಯತ್ ರಾಜ್ ವ್ಯವಸ್ಥೆಯ "ನೀಲಿ ನಕ್ಷೆಯ ಮೂಲ ಪ್ರತಿ" ಅಥವಾ "ಪಂಚಾಯತ್ ರಾಜ್ ವ್ಯವಸ್ಥೆಯ ಬೈಬಲ್" ಎಂದು ಕರೆಯಬಹುದು.