ಬರಂತಿ ಭಾರತದ ಪಶ್ಚಿಮ ಬಂಗಾಳದ ಪುರೂಲಿಯಾ ಜಿಲ್ಲೆಯಲ್ಲಿನ ರಘುನಾಥ್‍ಪುರ್ ಉಪವಿಭಾಗದ ಸಂತುರಿಯಲ್ಲಿ (ಅಭಿವೃದ್ಧಿ ಕ್ಷೇತ್ರ) ಸ್ಥಿತವಾಗಿರುವ ಒಂದು ಚಿಕ್ಕ ಆದಿವಾಸಿ ಗ್ರಾಮವಾಗಿದೆ. ಇದು ಬರಂತಿ ಸರೋವರದ ಪಕ್ಕದಲ್ಲಿ ಸ್ಥಿತವಾಗಿದೆ. ಇದು ಒಂದು ಬೆಳೆಯುತ್ತಿರುವ, ಆದರೆ ಪ್ರಶಾಂತವಾದ ಪ್ರವಾಸಿ ತಾಣವಾಗಿದೆ.[೧]

ಪ್ರವಾಸೋದ್ಯಮ ಬದಲಾಯಿಸಿ

ಬರಂತಿ ಗೊರೊಂಗಿ ಗುಡ್ಡದ ಮಡಿಲಿನಲ್ಲಿ ಸ್ಥಿತವಾಗಿರುವ ಬೆಳೆಯುತ್ತಿರುವ ಪ್ರವಾಸಿ ಕೇಂದ್ರವಾಗಿದೆ. ಈ ಹಳ್ಳಿಯನ್ನು ಒಂದು ಪಾರ್ಶ್ವದಲ್ಲಿ ಪಂಚ್‍ಕೋಟ್ ಗುಡ್ಡ ಸುತ್ತುವರಿದಿದೆ ಮತ್ತು ಇನ್ನೊಂದು ಪಾರ್ಶ್ವದಲ್ಲಿ ಬಿಹಾರಿನಾಥ್ ಗುಡ್ಡವು ಸುತ್ತುವರಿದಿದೆ. ರಾಮ್‍ಚಂದ್ರಾಪುರ್ ಮಧ್ಯಮ ನೀರಾವರಿ ಯೋಜನೆಯಡಿ ಒಂದು ಜಲಾಶಯವಿದೆ. ಇದರ ನೈಸರ್ಗಿಕ ಪರಿಸರದ ಕಾರಣ ಈ ಪ್ರದೇಶವು ಗುಡ್ಡ ಮತ್ತು ಅರಣ್ಯ ಚಾರಣಕ್ಕೆ ಜನಪ್ರಿಯವಾಗಿದೆ.[೨] ಬರಂತಿಯಿಂದ ಗಢ್ ಪಂಚ್‍ಕೋಟ್ ೧೨ ಕಿ.ಮಿ. ದೂರದಲ್ಲಿದೆ ಮತ್ತು ಜೊಯ್‍ಚಂದಿ ಪಹಾರ್ ೨೧ ಕಿ.ಮಿ. ದೂರದಲ್ಲಿದೆ.[೩] ಬಂಗಾಳದ ಅರಕು ಕಣಿವೆಯಾದ ಬಿಹಾರಿನಾಥ್ ಬರಂತಿಯಿಂದ ೧೮ ಕಿ.ಮಿ. ದೂರದಲ್ಲಿದೆ.

ಛಾಯಾಂಕಣ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. "Tourist spots in Purulia being developed by the Bengal Govt". news.webindia123.com. 24 May 2017. Archived from the original on 27 ಆಗಸ್ಟ್ 2017. Retrieved 27 August 2017.
  2. "Next weekend you can be at ... Baranti". telegraphindia.com. 27 December 2009. Archived from the original on 27 ಆಗಸ್ಟ್ 2017. Retrieved 27 August 2017.
  3. "নীলাভ সুন্দরী হয়ে প্রতীক্ষায় বড়ন্তি". anandabazar.com. 25 May 2017. Archived from the original on 27 ಆಗಸ್ಟ್ 2017. Retrieved 27 August 2017.
"https://kn.wikipedia.org/w/index.php?title=ಬರಂತಿ&oldid=1223467" ಇಂದ ಪಡೆಯಲ್ಪಟ್ಟಿದೆ