ಭೂಗೋಳ ಶಾಸ್ತ್ರದಲ್ಲಿ, ಬಯಲು (ಮೈದಾನ) ಎಂದರೆ ಎತ್ತರದಲ್ಲಿ ಬಹಳಷ್ಟು ಬದಲಾಗದ ಚಪ್ಪಟೆಯಾದ, ವಿಸ್ತಾರವಾದ ಭೂಪ್ರದೇಶ. ಬಯಲುಗಳು ಕಣಿವೆಗಳ ಕೆಳಭಾಗದ ಉದ್ದಕ್ಕೆ ಅಥವಾ ಪರ್ವತಗಳ ಹೊಸ್ತಿಲುಮೆಟ್ಟಿಲ ಮೇಲೆ ತಗ್ಗುಪ್ರದೇಶವಾಗಿ, ಕರಾವಳಿ ಬಯಲುಗಳಾಗಿ ಮತ್ತು ಪ್ರಸ್ಥಭೂಮಿಗಳು ಅಥವಾ ಎತ್ತರ ಪ್ರದೇಶಗಳಾಗಿ ಕಾಣಿಸುತ್ತವೆ.[]

ಪರ್ವತದ ಮುಂದೆ ಮುನ್ನೆಲೆಯಾಗಿ ಬಯಲನ್ನು ಕಾಣಬಹುದು.

ಕಣಿವೆಯಲ್ಲಿ, ಬಯಲು ಎರಡು ಕಡೆಗಳಿಂದ ಆವೃತವಾಗಿರುತ್ತದೆ. ಆದರೆ ಇತರ ಸಂದರ್ಭಗಳಲ್ಲಿ, ಬಯಲು ಗುಡ್ಡಗಳ ಸಂಪೂರ್ಣ ಅಥವಾ ಭಾಗಶಃ ವರ್ತುಲಗಳಿಂದ, ಪರ್ವತಗಳಿಂದ, ಅಥವಾ ಕಡಿಬಂಡೆಗಳಿಂದ ಪರಿಮಿತಗೊಂಡಿರಬಹುದು. ಒಂದು ಭೌಗೋಳಿಕ ಪ್ರದೇಶವು ಒಂದಕ್ಕಿಂತ ಹೆಚ್ಚು ಬಯಲನ್ನು ಹೊಂದಿದ್ದಾಗ, ಅವು ಕಣಿವೆಮಾರ್ಗದ ಮೂಲಕ ಜೋಡಣೆಗೊಂಡಿರಬಹುದು. ಕರಾವಳಿ ಬಯಲುಗಳು ಬಹುತೇಕವಾಗಿ ಸಮುದ್ರ ಮಟ್ಟದಿಂದ ಮೇಲೇರಿ ಪರ್ವತಗಳು ಅಥವಾ ಪ್ರಸ್ಥಭೂಮಿಗಳಂತಹ ಎತ್ತರದ ರೂಪಗಳು ಅಡ್ಡ ಬರುವವರೆಗೆ ವ್ಯಾಪಿಸುತ್ತವೆ.[]

ಉಲ್ಲೇಖಗಳು

ಬದಲಾಯಿಸಿ
  1. Rood, Stewart B.; Pan, Jason; Gill, Karen M.; Franks, Carmen G.; Samuelson, Glenda M.; Shepherd, Anita (2008-02-01). "Declining summer flows of Rocky Mountain rivers: Changing seasonal hydrology and probable impacts on floodplain forests". Journal of Hydrology. 349 (3–4): 397–410. doi:10.1016/j.jhydrol.2007.11.012.
  2. Whittow, John (1984). Dictionary of Physical Geography. London: Penguin. p. 467. ISBN 978-0-14-051094-2.


"https://kn.wikipedia.org/w/index.php?title=ಬಯಲು&oldid=925430" ಇಂದ ಪಡೆಯಲ್ಪಟ್ಟಿದೆ