ಬನಶಂಕರಿ ದೇವಸ್ಥಾನ, ಬೆಂಗಳೂರು

ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿರುವ 'ಬನಶಂಕರಿ ದೇವಾಲಯ',[೧] ಕನಕಪುರ ರಸ್ತೆಯಲ್ಲಿದೆ. ಈ ದೇವಸ್ಥಾನ ಬೆಂಗಳೂರಿನ ಶ್ರದ್ಧಾಳುಗಳ ನೆಚ್ಚಿನ ತಾಣ. ಬೆಂಗಳೂರಿನ ಅಕ್ಕಪಕ್ಕದ ಸ್ಥಳಗಳ ಭಕ್ತಾದಿಗಳು ಮತ್ತು ದೂರದೂರದಿಂದ ಶ್ರದ್ಧೆ ಆಸಕ್ತಿಗಳಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಭೆಟ್ಟಿನೀಡಿ ತಮ್ಮ ಮನದ ಕಾಮನೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಇದಲ್ಲದೆ, ಹಳೆಯ ದೇವಸ್ಥಾನದ ಜಾಗದಲ್ಲಿ ಒಂದು ಹೊಸ ಸುಂದರ ದೇವಾಲಯ ಈಗ ಸಿದ್ಧಗೊಂಡಿದೆ.

ಚಿತ್ರ:P1010015.JPG
'ಬನಶಂಕರಿ ಅಮ್ಮನವರ ಹೊಸ ದೇವಾಲಯ'
ಚಿತ್ರ:1-PA250210.JPG
'ಈಶ್ವರ ಪಾರ್ವತಿ ದೇವಾಲಯ'

ಐತಿಹ್ಯ ಬದಲಾಯಿಸಿ

ಚಿತ್ರ:CTA, Ananth 025.JPG
'ಪುರಾತನ ಬನಶಂಕರಿ ಅಮ್ಮನವರ ಮಂದಿರ'

ಸ್ಥಳ ಪುರಾಣದ ರೀತ್ಯ , ಈ ದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು, ೧೯೧೫ ರಲ್ಲಿ. ಸೋಮಣ್ಣ ಶೆಟ್ಟಿ ಎಂಬುವವರು ಬನಶಂಕರಮ್ಮನವರ ವಿಗ್ರಹವನ್ನು ಬಿಜಾಪುರಜಿಲ್ಲೆಯ ಬಾದಾಮಿಯಿಂದ ತೆಗೆದುಕೊಂಡು ಬಂದು ಬೆಂಗಳೂರಿನ 'ಬನಶಂಕರಿ ದೇವಾಲಯ'ದಲ್ಲಿ ಸ್ಥಾಪಿಸಿದರು. ಬಹಳ ವರ್ಷಗಳಿಂದ ಈ ಮಂದಿರ ಭಕ್ತಾದಿಗಳ ಮನೋಕಾಮನೆಯನ್ನು ಈಡೇರಿಸುತ್ತಿತ್ತು. ಸಮಯ ಸರಿದಂತೆ ಶ್ರದ್ಧಾಳುಗಳು ಹೆಚ್ಚಾಗತೊಡಗಿದರು. ಭಕ್ತಾದಿಗಳ ಉದಾರ ಕಾಣಿಕೆಯಿಂದಾಗಿ ಈಗ ಕಾಣಿಸುತ್ತಿರುವ ಭವ್ಯ ದೇವಸ್ಥಾನವನ್ನು ನಿರ್ಮಿಸಲು ಸಾಧ್ಯವಾಯಿತು.

ವೈಶಿಷ್ಠ್ಯತೆ ಬದಲಾಯಿಸಿ

ಚಿತ್ರ:BA12.JPG
'ಹೊಸದಾಗಿ ನಿರ್ಮಾಣಗೊಂಡಿರುವ ಭವ್ಯ ಬನಶಂಕರಿ ಅಮ್ಮನವರ ದೇಗುಲ'

ಸಾಮಾನ್ಯವಾಗಿ ಹಿಂದುಗಳಿಗೆ ರಾಹುಕಾಲದಲ್ಲಿ ಯಾವ ವ್ರತ-ನಿಯಮಾದಿಗಳೂ ವರ್ಜಿತವಾಗಿವೆ. ಹಾಗಾಗಿ, ಅಮ್ಮನವರ ಪೂಜೆಯನ್ನು 'ರಾಹುಕಾಲ'ದ ಸಮಯದಲ್ಲಿ ನಡೆಸುವ ವಿಧಾನವು ಅತಿ ವಿಶೇಷವಾಗಿದೆ. 'ಪಂಚಾಂಗ'ದಲ್ಲೂ ಇದರ ಉಲ್ಲೇಖವಿದೆ. ಆದರೆ ರಾಹುಕಾಲದಲ್ಲೂ ನಡೆಯುವ ಈ ವಿಶೇಷ ಪೂಜಾವಿಧಾನದಿಂದಾಗಿ ಈ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರವಾಗಿದೆ. ಶುಕ್ರವಾರ, ಮಂಗಳವಾರ ಮತ್ತು ರವಿವಾರದಂದು ಭಕ್ತರ ದೊಡ್ಡ ಗುಂಪುನ್ನು ದೇವಾಲಯದಲ್ಲಿ ಕಾಣಬಹುದಾಗಿದೆ. ಬನಶಂಕರಿ ಅಮ್ಮನವರಿಗೆ ಅರ್ಧ ಕತ್ತರಿಸಿದ ನಿಂಬೆಹಣ್ಣಿನ ರಸಿಕೆ ತೆಗೆದು, ಅದರಲ್ಲಿ ಎಣ್ಣೆದೀಪವನ್ನು ಹಚ್ಚಿಡುವ ವಿಧಿ ಅನನ್ಯವಾದದ್ದು.

ಜಾತ್ರಾ ಮಹೋತ್ಸವ ಬದಲಾಯಿಸಿ

ಪ್ರತಿವರ್ಷವೂ ಅಮ್ಮನವರ ಜಾತ್ರೆ, ಡಿಸೆಂಬರ್ ತಿಂಗಳ ಕೊನೆಯವಾರ ಇಲ್ಲವೇ ಜನವರಿ ತಿಂಗಳ ಮೊದಲವಾರದಲ್ಲಿ ವಿಜೃಂಭಣೆಯಿಂದ ನೆರವೇರುತ್ತದೆ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಬರುವ ದಸರಾ ಹಬ್ಬದಲ್ಲೂ ಕೂಡ ಬನಶಂಕರಿದೇವಿಯ ಪೂಜಾವಿಧಿಗಳು ಬಹಳ ಸುಂದರವಾಗಿಯೂ ವಿಧಿವತ್ತಾಗಿಯೂ ಜರುಗುತ್ತವೆ.

ವರ್ತಮಾನ ಹಾಗೂ ಭವಿಷ್ಯ ಬದಲಾಯಿಸಿ

ಚಿತ್ರ:BS14.JPG
ಹೊಸದಾಗಿ ನಿರ್ಮಿಸಿರುವ ಛಾವಣಿಯಡಿ ಭಕ್ತಾದಿಗಳು ಸೇರುವ ಸ್ಥಳ

ಕರ್ನಾಟಕ ಸರಕಾರಧರ್ಮಾರ್ಥ ಸೇವೆಯ ಅಡಿಯಲ್ಲಿ ಈ ದೇವಾಲಯ ಬರುವುದರಿಂದ ಸರಕಾರದ ಕೃಪಾಪೋಷಿತದ ವಲಯದಲ್ಲಿ ಪೂಜಾ-ವಿಧಿಗಳು ಚೆನ್ನಾಗಿ ನೆರವೇರುತ್ತವೆ.

ತಲುಪುವ ವಿಧಾನ ಬದಲಾಯಿಸಿ

ಈ ಪುರಾತನ ದೇವಾಲಯಕ್ಕೆ ಬೆಂಗಳೂರು ನಗರದ ಎಲ್ಲಾ ಕಡೆಯಿಂದಲೂ ಬಂದು ತಲುಪಲು ಸರಕಾರಿ ಬಸ್ ಸೌಕರ್ಯಗಳಿವೆ. 'ಮೆಜೆಸ್ಟಿಕ್', ನಿಂದ ಬನಶಂಕರಿಗೆ ಬರಲು ೧೨ನೇ ಸಂಖ್ಯೆಯ ಅಂಕಣದಲ್ಲಿ ಸೂಕ್ತವಾದ ಬಸ್ಸನ್ನು ಹತ್ತಬಹುದು. ಜಯನಗರ ೪ ನೇ ಬ್ಲಾಕ್ ಹಾಗೂ ಕತ್ರಿಗುಪ್ಪೆಗೆ ಇದು ಹತ್ತಿರವಿದೆ.ಸಾರಕ್ಕಿಬಡಾವಣೆ ಹತ್ತಿರದಲ್ಲಿದೆ.

ಉಲ್ಲೇಖಗಳು ಬದಲಾಯಿಸಿ

  1. 2 Blr.com, Banashankari Temple[ಶಾಶ್ವತವಾಗಿ ಮಡಿದ ಕೊಂಡಿ]