ಬತ್ತೀಸ್ ಶಿರಾಲಾ'
ಮಹಾರಾಷ್ಟ್ರದ ಚಿಕ್ಕ ಹಳ್ಳಿ, 'ಬತ್ತೀಸ್ ಶಿರಾಲಾ', 'ಪುಣೆನಗರ' ದಿಂದ ಸುಮಾರು ೨೦೦ ಕಿ. ಮೀ. ದೂರದಲ್ಲಿರುವ 'ಸಾಂಗ್ಲಿ' ಜಿಲ್ಲೆಯ ಒಂದು ಊರು. ಇಲ್ಲಿ ನಾಗರ ಹಾವುಗಳನ್ನು ಜೀವಂತವಾಗಿ ಹಿಡಿದು ತಂದು, ಪೂಜೆ ಮಾಡುತ್ತಾರೆ. ಪೂಜೆಯ ಬಳಿಕ, 'ದೇವಿ ಮಂದಿರ' ದಿಂದ ನಾಗರ ಹಾವುಗಳ ಮೆರವಣಿಗೆ ಹೊರಡುತ್ತದೆ. ಕೊನೆಗೆ ಹಾವುಗಳನ್ನು ಮೊದಲು ಎಲ್ಲಿಂದ ಹಿಡಿದು ತಂದಿದ್ದರೋ ಅಲ್ಲಿಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ. ಈ ಪ್ರಸಂಗವನ್ನು 'ಬಿ. ಬಿ.ಸಿ ಟೆಲಿವಿಶನ್' ನಲ್ಲೂ ತೋರಿಸಿ, ವಿಶ್ವದಾದ್ಯಂತ ಪ್ರಸಾರಮಾಡಲಾಗಿದೆ. ಹಾಗಾಗಿ ನಾಗರ ಹಬ್ಬಕ್ಕೆ 'ವ್ಯಾಪಾರೀಕರಣದ ಛಾಪು' ಬಿದ್ದಿದೆ.