ಸಂದಾಯ

(ಬಟವಾಡೆ ಇಂದ ಪುನರ್ನಿರ್ದೇಶಿತ)

ಸಂದಾಯ ಎಂದರೆ ಸರಕುಗಳು, ಅಥವಾ ಸೇವೆಗಳು, ಅಥವಾ ಒಂದು ಕಾನೂನಾತ್ಮಕ ಕರ್ತವ್ಯವನ್ನು ಪೂರೈಸಲು (ವ್ಯಕ್ತಿ ಅಥವಾ ಕಂಪನಿಯಂತಹ) ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಮೌಲ್ಯದ ವಿನಿಮಯ. ಸಂದಾಯವು ಬಗೆಬಗೆಯ ರೂಪಗಳನ್ನು ತೆಗೆದುಕೊಳ್ಳಬಹುದು. ವಸ್ತು ವಿನಿಮಯವೆಂದರೆ ಒಂದು ಸರಕು ಅಥವಾ ಸೇವೆಗಾಗಿ ಮತ್ತೊಂದರ ವಿನಿಮಯ. ಇದು ಸಂದಾಯದ ಒಂದು ರೂಪ. ಸಂದಾಯದ ಅತ್ಯಂತ ಸಾಮಾನ್ಯ ಸಾಧನವು ಹಣ, ಚೆಕ್‍ನ ಬಳಕೆ, ಅಥವಾ ಖರ್ಚುಹಾಕುವಿಕೆ, ಕ್ರೆಡಿಟ್ ಅಥವಾ ಬ್ಯಾಂಕ್ ವರ್ಗಾವಣೆಗಳನ್ನು ಒಳಗೊಳ್ಳುತ್ತದೆ. ಸಂದಾಯಗಳು ಸಂಕೀರ್ಣ ರೂಪಗಳನ್ನು ಕೂಡ ತೆಗೆದುಕೊಳ್ಳಬಹುದು, ಉದಾಹರಣೆಗೆ ಷೇರುಗಳ ನೀಡಿಕೆ ಅಥವಾ ಪಕ್ಷಗಳಿಗೆ ಯಾವುದಾದರೂ ಮೌಲ್ಯವಿರುವಂಥದ್ದು ಅಥವಾ ಪ್ರಯೋಜನವಿರುವಂಥದ್ದರ ವರ್ಗಾವಣೆ. ಅಮೇರಿಕದ ಕಾನೂನಿನಲ್ಲಿ, ಪಾವತಿಸುವವನು ಎಂದರೆ ಸಂದಾಯ ಮಾಡುತ್ತಿರುವ ಪಕ್ಷ, ಸ್ವೀಕರಿಸುವವನು ಎಂದರೆ ಸಂದಾಯವನ್ನು ಪಡೆಯುತ್ತಿರುವ ಪಕ್ಷ. ವ್ಯಾಪಾರದಲ್ಲಿ, ಆಗಾಗ್ಗೆ ಸಂದಾಯಗಳ ಮೊದಲು ಸರಕು/ಸೇವಾ ಪಟ್ಟಿ ಅಥವಾ ಬಿಲ್ಲನ್ನು ನೀಡಲಾಗುತ್ತದೆ.

ಸಾಮಾನ್ಯಾವಾಗಿ, ಸ್ವೀಕರಿಸುವವನಿಗೆ ತಾನು ಯಾವ ಸಂದಾಯದ ವಿಧಾನವನ್ನು ಸ್ವೀಕರಿಸುವನು ಎಂದು ತೀರ್ಮಾನಿಸುವ ಸ್ವಾತಂತ್ರ್ಯವಿರುತ್ತದೆ; ಸಾಧಾರಣವಾಗಿ ಕಾನೂನುಗಳ ಪ್ರಕಾರ ಪಾವತಿಸುವವನು ಸೂಚಿಸಲಾದ ಮಿತಿಯವರೆಗೆ ದೇಶದ ನ್ಯಾಯಸಮ್ಮತ ದ್ರವ್ಯವನ್ನು ಒಪ್ಪಿಕೊಳ್ಳಬೇಕೆಂಬ ಅಗತ್ಯವಿರುತ್ತದೆ. ಸಂದಾಯವನ್ನು ಅತ್ಯಂತ ಸಾಮಾನ್ಯವಾಗಿ ಪಾವತಿಸುವವನ ಸ್ಥಳೀಯ ಚಲಾವಣೆಯಲ್ಲಿ ನೆರವೇರಿಸಲಾಗುತ್ತದೆ, ಆದರೆ ಪಕ್ಷಗಳು ಬೇರೆ ವಿಧಕ್ಕೆ ಒಪ್ಪಿದರೆ ಇದು ಬದಲಾಗಬಹುದು. ಮತ್ತೊಂದು ಚಲಾವಣೆಯಲ್ಲಿ ಸಂದಾಯ ಮಾಡುವುದು ಹೆಚ್ಚುವರಿ ವಿದೇಶಿ ವಿನಿಮಯ ವಹಿವಾಟನ್ನು ಒಳಗೊಳ್ಳುತ್ತದೆ. ಸ್ವೀಕರಿಸುವವನು ಒಂದು ಋಣದ ಸಂಬಂಧವಾಗಿ ರಾಜಿ ಮಾಡಿಕೊಳ್ಳಬಹುದು, ಅಂದರೆ, ಸಾಲಗಾರನ ಕರ್ತವ್ಯದ ಸಂಪೂರ್ಣ ಇತ್ಯರ್ಥಕ್ಕಾಗಿ ಭಾಗಶಃ ಸಂದಾಯವನ್ನು ಸ್ವೀಕರಿಸಬಹುದು, ಅಥವಾ ವಿನಾಯಿತಿಯನ್ನು ನೀಡಬಹುದು, ಉದಾಹರಣೆಗೆ ನಗದು ಸಂದಾಯಕ್ಕಾಗಿ, ಅಥವಾ ವಿಳಂಬವಿಲ್ಲದ ಸಂದಾಯಕ್ಕಾಗಿ, ಇತ್ಯಾದಿ. ಮತ್ತೊಂದೆಡೆ, ಸ್ವೀಕರಿಸುವವನು ಅಧಿಕ ಕರವನ್ನು ವಿಧಿಸಬಹುದು, ಉದಾಹರಣೆಗೆ, ತಡವಾದ ಸಂದಾಯ ಶುಲ್ಕವಾಗಿ, ಅಥವಾ ಒಂದು ನಿರ್ದಿಷ್ಟ ಕ್ರೆಡಿಟ್ ಕಾರ್ಡ್‌ನ ಬಳಕೆಗಾಗಿ, ಇತ್ಯಾದಿ.

ಸ್ವೀಕರಿಸುವವನಿಂದ ಸಂದಾಯದ ಸ್ವೀಕಾರವು ಒಂದು ಋಣ ಅಥವಾ ಇತರ ಬಾಧ್ಯತೆಯನ್ನು ರದ್ದು ಮಾಡುತ್ತದೆ. ಒಬ್ಬ ಸಾಲಗಾರನು ಅನುಚಿತವಾಗಿ ಸಂದಾಯವನ್ನು ಸ್ವೀಕರಿಸಲು ತಿರಸ್ಕರಿಸುವಂತಿಲ್ಲ, ಆದರೆ ಸಂದಾಯವನ್ನು ಕೆಲವು ಸಂದರ್ಭಗಳಲ್ಲಿ ತಿರಸ್ಕರಿಸಬಹುದು, ಉದಾಹರಣೆಗೆ, ಭಾನುವಾರದಂದು ಅಥವಾ ಬ್ಯಾಂಕ್ ವೇಳೆಗಳನ್ನು ಮೀರಿದರೆ. ಸಾಮಾನ್ಯವಾಗಿ ಸ್ವೀಕರಿಸುವವನು ಸಂದಾಯವನ್ನು ಅಂಗೀಕರಿಸಲು ಪಾವತಿದಾರನಿಗೆ ಒಂದು ರಸೀದಿಯನ್ನು ಕೊಡಲು ಬದ್ಧನಾಗಿರುತ್ತಾನೆ. ರಸೀದಿಯು "ಸಂಪೂರ್ಣವಾಗಿ ಸಂದಾಯವಾಗಿದೆ" ಎಂದು ಒಂದು ಲೆಕ್ಕದ ಮೇಲಿನ ಅನುಮೋದನೆ/ದೃಢೀಕರಣವಾಗಿರಬಹುದು. ಒಂದು ಋಣಕ್ಕಾಗಿ ಖಾತರಿ ಪತ್ರ ಅಥವಾ ಇತರ ಭದ್ರತಾ ಪತ್ರವನ್ನು ಕೊಡುವುದು ಸಂದಾಯವೆಂದು ಎನಿಸಿಕೊಳ್ಳುವುದಿಲ್ಲ.

"https://kn.wikipedia.org/w/index.php?title=ಸಂದಾಯ&oldid=846999" ಇಂದ ಪಡೆಯಲ್ಪಟ್ಟಿದೆ