ಬಂಗವಾಡಿ ಅರಮನೆಯ ಶ್ರೀ ಆದಿನಾಥ ಸ್ವಾಮಿ ಬಸದಿ

ಸ್ಥಳ ಬದಲಾಯಿಸಿ

ಈ ಬಸದಿಯು ಇಂದಿನ ಬಂಗವಾಡಿ ಅರಮನೆಯ ಮಧ್ಯದ ಪ್ರಾಂಗಣದಲ್ಲಿದೆ.

ಇತಿಹಾಸ ಬದಲಾಯಿಸಿ

ಮೂರ್ತಿಯು ಬಹಳ ಪ್ರಾಚೀನವಾದದ್ದು. ಬಂಗ ಅರಸುಮನೆತನವು ಬೇರೆ ಕಡೆಯಿಂದ ಇಲ್ಲಿಗೆ ಬಂದು ನೆಲೆಸಿದ್ದದ್ದಂತೂ ಐತಿಹಾಸಿಕ ಸತ್ಯ. ಇವರು ಮೈಸೂರು ಬಳಿಯ ಗಂಗವಾಡಿಹಿಂದ ಇಲ್ಲಿಗೆ ಬಂದ ಗಂಗವಂಶದವರಾದರೆಂಬ ಒಂದು ವಾದವೂ ಇದೆ. ಈ ವಾದಕ್ಕೆ ಈ ಜಿನಬಿಂಬವು ಪುಷ್ಟಿಯನ್ನು ನೀಡುವಂತದಾಗಿದ್ದು, ಇತಿಹಾಸ ದೃಷ್ಟಿಯಿಂದಲೂ ಬಹು ಅಮೂಲ್ಯವಾದುದು. ಗಂಗವಾಡಿಯ ಗಂಗಾ ಅರಸರಿಗೂ ಶ್ರೀ ಆದೀಶ್ವರ ಸ್ವಾಮಿ. ಬಂಗ ಅರಸರಿಗೂ ಶ್ರೀ ಆದೀಶ್ವರ ಸ್ವಾಮಿಯೇ ಮನೆದೇವರಾಗಿ ಇವರನ್ನು ಸುಮಾರು ಒಂದುಸಾವಿರ ವರ್ಷಗಳಷ್ಟು ಕಾಲ ಸಂರಕ್ಷಿಸುತ್ತಾ, ಅರಸುತ್ತ ಬಂದಿದ್ದಾರೆ.[೧]

ದೈವ ಬದಲಾಯಿಸಿ

ಶ್ರೀ ಆದೀಶ್ವರ ಸ್ವಾಮಿಯು ಅರಮನೆಯ ಮನೆದೇವರು.

ವಿನ್ಯಾಸ ಬದಲಾಯಿಸಿ

ಇಲ್ಲಿ ಬಸದಿಗೆ ಬೇಕಾದ ಎಲ್ಲಾ ಮಂಟಪಗಳಿಲ್ಲ. ಆದರೆ ಸುಂದರವಾದ ಘಂಟಾ ಮಂಟಪ ಮತ್ತು ಗರ್ಭಗೃಹಗಳು ಮಾತ್ರ ಇವೆ. ಗರ್ಭಗೃಹದಲ್ಲಿ ಪುರಾತನ ಲಕ್ಷಣಗಳುಳ್ಳ ವಿಸ್ತಾರವಾದ ಪ್ರಭಾವಳಿಯ ಮಧ್ಯದಲ್ಲಿ ಶ್ರೀ ಆದೀಶ್ವರ ಸ್ವಾಮಿಯ ಖಡ್ಗಾಸನ ಭಂಗಿಯ ಸುಂದರ ಬಿಂಬ ವಿರಾಜಮಾನವಾಗಿದೆ. ಎಡಬಲಗಳಲ್ಲಿ ನಿಂತುಕೊಂಡಿರುವ ಯಕ್ಷ-ಯಕ್ಷಿಯರ ಬಿಂಬಗಳಿವೆ. ಎಲ್ಲಕ್ಕಿಂತ ಮೇಲ್ಗಡೆಯಲ್ಲಿ ಕೀರ್ತಿ ಮುಖ, ಅದರ ಕೆಳಗಡೆ ಮೂರು ಹೆಡೆಗಳುಳ್ಳ ನಾಗ, ಅದಕ್ಕಿಂತ ಕೆಳಗಡೆ ಮುಕ್ಕೊಡೆ, ಅದಕ್ಕಿಂತ ಕೆಳಗಡೆ ಸ್ವಾಮಿ ಬಿಂಬವಿದ್ದು ಪೀಠದಲ್ಲಿ ಸೂಚ್ಯವಾಗಿ ವೃಷಭಲಾಂಛನವಿದೆ. ಬಳಿಯಲ್ಲಿ ಕೆಳಗಡೆ ಶ್ರೀ ಪದ್ಮಾವತಿ ದೇವಿಯ ಬಿಂಬವ ನಿಟ್ಟು ಪೂಜಿಸಲಾಗುತ್ತಿದೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೧೬೦.