ಫ್ರೆಡೆರಿಕ್ ಮಿಸ್ತ್ರಾಲ್
ಫ್ರೆಡರಿಕ್ ಮಿಸ್ತ್ರಾಲ್ (೧೮೩೦ - ೧೯೧೪) ಒಬ್ಬ ಫ್ರೆಂಚ್ ಲೇಖಕರಾಗಿದ್ದರು.
ಫ್ರೆಡರಿಕ್ ಮಿಸ್ತ್ರಾಲ್ | |
---|---|
ಜನನ | ಮೈಲ್ಲೇನ್, ಫ್ರಾನ್ಸ್ | ೮ ಸೆಪ್ಟೆಂಬರ್ ೧೮೩೦
ಮರಣ | March 25, 1914 ಮೈಲ್ಲೇನ್, ಫ್ರಾನ್ಸ್ | (aged 83)
ವೃತ್ತಿ | ಕವಿ |
ರಾಷ್ಟ್ರೀಯತೆ | ಫ್ರಾನ್ಸ್ |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature 1904 |
ನಾಲ್ಕನೆಯ ನೋಬೆಲ್ ಪ್ರಶಸ್ತಿವಿಜೇತ ಫ್ರೆಡರಿಕ್ ಮಿಸ್ತ್ರಾಲ್ ರವರು ಹೋಸೆ ಎಚೆಗಾರೈ ರ ಜೊತೆಗೆ ಹಂಚಿಕೊಂಡರು
ಬದಲಾಯಿಸಿಫ್ರೆಡರಿಕ್ ಮಿಸ್ತ್ರಾಲ್ ರು, ಪ್ರೊವೆನ್ಸಾಲ್ ಅಥವಾ ಓಕ್ಸಿಟನ್ ( Occitan/Provencial ) ಭಾಷೆಯಲ್ಲಿಯೇ ತಮ್ಮ ಭಾವಗೀತೆಗಳನ್ನು ಮತ್ತು ಮಹಾಕಾವ್ಯಗಳನ್ನು ಬರೆದರು. ಪ್ರೊವೆನ್ಸಾಲ್ ಭಾಷೆಗೊಂದು ನಿಘಂಟನ್ನು ರಚಿಸುವ ಉದ್ದೇಶ್ಯವಿತ್ತು. ಅದಕ್ಕಾಗಿ ಫ್ರೆಡರಿಕ್ ಮಿಸ್ತ್ರಾಲ್ ರವರು, 'ಫೆಲಿಬ್ರಿಜ್ ,' ಎಂಬ ಸಾಹಿತ್ಯಸಂಘವನ್ನು ಸ್ಥಾಪಿಸಿ ಬೃಹತ್ ನಿಘಂಟನ್ನು ಪ್ರಕಟಿಸಿದ್ದು ಅವರ ಸಾಧನೆಗಳಲ್ಲೊಂದು. ಫ್ರೆಡರಿಕ್ ಮಿಸ್ತ್ರಾಲ್ ರಿಂದ ಪ್ರಭಾವಿತರಾಗಿ ಚಿಲಿದೇಶದ ಕವಯಿತ್ರಿ, ಲ್ಯೂಸಿಯ ಅಲ್ಕಾಯಾಗಾ, ' ಗಾಬ್ರಿಯೆಲಾ ಮಿಸ್ತ್ರಾಲ್ ' ಎಂದು ಹೆಸರಿಟ್ಟುಕೊಂಡಿದ್ದಲ್ಲದೆ ನೋಬೆಲ್ ಪಾರಿತೋಷಕವನ್ನೂ ಗೆದ್ದಳು. ಫ್ರೆಡರಿಕ್ ಮಿಸ್ತ್ರಾಲ್ ರವರು ತಮ್ಮ ನೋಬೆಲ್ ಪ್ರಶಸ್ತಿಯ ಧನವನ್ನೆಲ್ಲಾ ಪ್ರೊವೆನ್ಸಾಲ್ ಸಂಸ್ಕೃತಿಯ ರಕ್ಷಣೆಗಾಗಿ ತಾವು ಸ್ಥಾಪಿಸಿದ್ದ ವಸ್ತುಸಂಗ್ರಹಲಾಯಕ್ಕೆ ಕೊಟ್ಟುಬಿಟ್ಟರು. ಭಾಷಾಪ್ರೇಮದ ಗೀಳು ಅವರ ತಂದೆ-ತಾಯಿಯರಿಂದ ಬಂದದ್ದು. ತಂದೆ ದೊಡ್ಡ ಹಿಡುವಳಿಗಾರ. ಅವರ ಭಾಷಾ ಶೈಲಿ ಕೆಳವರ್ಗದ ಪ್ರಾದೇಶಿಕ ಪ್ರೊವೆನ್ಸಾಲ್ ಜನರ ಆಡುಭಾಷೆಗೆ ಹೋಲಿಸಬಹುದಾಗಿತ್ತು. ಬಾಲಕನಾಗಿದ್ದ ಫ್ರೆಡರಿಕ್ ಮಿಸ್ತ್ರಾಲ್, ತಮ್ಮ ತಂದೆ-ತಾಯಿಯರು, ಫ್ರೆಂಚ್ ಭಾಷೆಯನ್ನು ಮಾತಾಡುವವರ ಬಗೆಗೆ ತೋರಿಸುತ್ತಿದ್ದ ವಿನಯ, ಹಾಗೂ ಗರವಗಳು ಸರಿಬೀಳುತ್ತಿರಲಿಲ್ಲ. ಮುಂದೆ ಫ್ರೆಡರಿಕ್ ಮಿಸ್ತ್ರಾಲ್ ಅವರು ರುಮಾನಿಲ್ ಎಂಬ ಒಬ್ಬ ಪ್ರಾಧ್ಯಾಪಕರಜೊತೆಗೂಡಿ, ತಮ್ಮ ಭಾಷೆಯ ದ್ವಿತೀಯದರ್ಜೆಯ ಸ್ಥಾನಮಾನವನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಪತ್ರಿಕೆಯೊಂದನ್ನು ನಡೆಸಿದ್ದಲ್ಲದೆ, ತಮ್ಮ ಕಾವ್ಯರಚನೆಯನ್ನೆಲ್ಲಾ ಪ್ರೊವೆನ್ಸಾಲ್ ಭಾಷೆಯಲ್ಲೇ ಮಾಡುತ್ತಿದ್ದರು.
ವಿದ್ಯಾಭ್ಯಾಸದ ತರುವಾಯ ತಮ್ಮ ತಂದೆಯವರ ಜಮೀನಿನ ಸಾಗುವಳಿ ಕಾರ್ಯದಲ್ಲಿ ನಿರತರಾದರು
ಬದಲಾಯಿಸಿವಿದ್ಯಾಭ್ಯಾಸದ ಬಳಿಕ, ಫ್ರೆಡರಿಕ್ ಮಿಸ್ತ್ರಾಲ್ ಬೇರೆ ಉದ್ಯೋಗಕ್ಕೆ ಸೇರದೆ,ತಮ್ಮ ತಂದೆಯವರ ಜಮೀನಿನ ಸಾಗುವಳಿಯನ್ನು ನೋಡಿಕೊಳ್ಳುತ್ತಾ ಜೊತೆಜೊತೆಗೆ ಪ್ರೊವಿನ್ಸಾಲ್ ಸಂಸ್ಕೃತಿ ರಕ್ಷಣೆಗೆ ದುಡಿದರು. ಫ್ರೆಡರಿಕ್ ಮಿಸ್ತ್ರಾಲ್ ಅವರು ಕವಿಯೆಂದು ಜನರಿಗೆ ಮನದಟ್ಟಾಗಿದ್ದು, ರುಮಾನಿಲ್ ರೇ ಸಂಪಾದಿಸಿ ಹೊರತಂದ ಪ್ರೊವೆನ್ಸಾಲ್ ಕವಿಗಳ ಕವನ ಸಂಗ್ರಹದ ಪ್ರಕಟನೆಯಿಂದ. ಮುಂದೆ ಅವರು ಸ್ಥಾಪಿಸಿದ ಫೆಲಿಬ್ರಿಜ್ ಸಂಸ್ಥೆಯಲ್ಲಿದ್ದ ಬಹುಪಾಲು ಲೇಖಕರು, ಕವನ ಸಂಕಲದಲ್ಲಿದ್ದವರೇ. ಫ್ರೆಡರಿಕ್ ಮಿಸ್ತ್ರಾಲ್ ರ ಸತತ ೨ ದಶಕಗಳ ಪರಿಶ್ರಮದಿಂದ, ಪ್ರೊವೆಸಾಲ್ ಭಾಷೆಯ ಬೃಹದ್ ಶಬ್ದ, ಕತೆ, ನುಡಿಗಟ್ಟುಗಳ ಉದ್ಗ್ರಂಥ ಹೊರಬಂತು. ಫ್ರೆಡರಿಕ್ ಮಿಸ್ತ್ರಾಲ್ ರವರು ಬರೆದ ಬೇರೆ ಸ್ವಂತ ಕಾವ್ಯ-ಕೃತಿಗಳು ಹೀಗಿವೆ.
- (೧೮೫೯) 'ಮೀರಿಯೋ'
- (೧೮೭೦) 'ಕ್ಯಾಲೆಂಡೌ'
- (೧೮೮೪) 'ನೆರ್ಟೋ'
- (೧೮೯೭) 'ಲು ಪೊಯಿಮೋ ದು ರೋನ್'
- 'ಲ ರೀನೋ ಜಾನೋ' ನಾಟಕ.
ಇಂತಹ ಆದರ್ಶ ವ್ಯಕ್ತಿ ಭಾಷಾಪ್ರೇಮಿ ಫ್ರೆಡರಿಕ್ ಮಿಸ್ತ್ರಾಲ್ ರಿಗೆ ೧೯೦೪ರಲ್ಲಿ ಅವರ ಸಾರ್ಥ ಸಾಹಿತ್ಯ ಸೇವೆಯನ್ನು ಗುರುತಿಸಿ ನೋಬೆಲ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.