ಫ್ರೆಡರಿಕ್ ಜ್ಯಾಕ್ಸನ್ ಟರ್ನರ್

ಫ್ರೆಡರಿಕ್ ಜ್ಯಾಕ್ಸನ್ ಟರ್ನರ್ (1861-1932). ಅಮೆರಿಕನ್ ಇತಿಹಾಸಕಾರ.

ಬದುಕು , ಸಾಧನೆ

ಬದಲಾಯಿಸಿ

ವಿಸ್‍ಕಾನ್ಸಿನ್ ಪ್ರಾಂತ್ಯದ ಪೋರ್ಟಿಜ್‍ನಲ್ಲಿ ಜನಿಸಿದರು. ವಿಸ್‍ಕಾನ್ಸಿನ್ ವಿಶ್ವವಿದ್ಯಾಲಯದ ಪದವೀಧರರಾಗಿ (1884) ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು (1890). 1910ರವರೆಗೆ ವಿಸ್‍ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ, ಅನಂತರ 1910ರಿಂದ 1924ರವರೆಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಇತಿಹಾಸದಲ್ಲಿ ಗಡಿನಾಡಿನ ಪ್ರಾಮುಖ್ಯವನ್ನು ಕುರಿತ ಪ್ರಬಂಧವನ್ನು ಅಮೆರಿಕನ್ ಇತಿಹಾಸ ಸಂಘದ ವಿಚಾರಗೋಷ್ಠಿಯಲ್ಲಿ ಓದಿದಾಗ (1893ರ ಜುಲೈ 12) ಟರ್ನರರ ಹೆಸರು ಪ್ರಸಿದ್ಧವಾಯಿತು. ರೈಸ್ ಆಫ್ ದಿ ನ್ಯೂ ವೆಸ್ಟ್ 1819-1829 ದಿ ಯುನೈಟೆಡ್ ಸ್ಟೇಟ್ಸ್ 1830-1850 ಇವರ ಗ್ರಂಥಗಳು. ದಿ ನೇಷನ್ ಅಂಡ್ ಇಟ್ಸ್ ಸೆಕ್ಷನ್ ಎಂಬ ಪುಸ್ತಕ ಇವರ ಮರಣಾ ನಂತರ ಪ್ರಕಟವಾಯಿತು. ದಿ ಸಿಗ್ನಿಫಿಕೆನ್ಸ್ ಆಫ್ ಸೆಕ್ಷನ್ಸ್ ಇನ್ ಅಮೆರಿಕನ್ ಹಿಸ್ಟೊರಿ (1932) ಎಂಬ ಕೃತಿಗಾಗಿ ಇವರಿಗೆ ಮರಣೋತ್ತರ ಪುಲಿಟ್‍ಜರ್ ಬಹುಮಾನ ನೀಡಲಾಯಿತು (1933). ಇವರ ಕೃತಿಗಳೆಲ್ಲ ಬಹುಪಾಲು ಇವರ ಮೊದಲ ಪ್ರಸಿದ್ಧ ಪ್ರಬಂಧದ ವಿಸ್ತರಣೆಗಳೇ ಆಗಿವೆ. ಅಮೆರಿಕದ ಇತಿಹಾಸದಲ್ಲಿ ಅಟ್ಲಾಂಟಿಕ್ ದಂಡೆಗಿಂತಲೂ ವಿಸ್ತಾರವಾದ ಪಶ್ಚಿಮ ಭಾಗಗಳನ್ನು ಕುರಿತು ಬರೆಯಬೇಕೆಂದು ಇವರು ವಾದಿಸಿದರು. ಕ್ಯಾಲಿಫೋರ್ನಿಯದ ಪ್ಯಾಸಡೇನದಲ್ಲಿ 1932ರಲ್ಲಿ ತೀರಿಕೊಂಡರು.