ಫ್ರಾನ್ಸಿಸ್ ವಿಲಿಯಂ ಆಸ್ಟನ್
ಫ್ರಾನ್ಸಿಸ್ ವಿಲಿಯಂ ಆಸ್ಟನ್(೧೮೮೭-೧೯೪೭)ಆಂಗ್ಲ ಭೌತ ಹಾಗೂ ರಸಾಯನಶಾಸ್ತ್ರಜ್ಞ.ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ ಎಂಬಲ್ಲಿ ಜನಿಸಿದರು.ಪ್ರಸಿದ್ಧ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಲಿತರು.೧೯೧೦ ರಿಂದ ಇದೇ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಲ್ಲಿ ಸಂಶೋಧನೆ ಕೈಗೊಂಡ ಇವರು ತನ್ನ ನಿಧನರಾದರು.ಇವರು ೧೯೧೯ ರಲ್ಲಿ 'ಮಾಸ್ ಸ್ಪೆಕ್ತ್ರೋಗ್ರಾಪ್'ಎಂಬ ಉಪಕರಣವನ್ನು ಕಂಡುಹಿಡಿದರು.ಈ ಉಪಕರಣದಿಂದ ಭಾರ ಹಾಗೂ ಹಗುರ ಪರಮಾಣುಗಳನ್ನು ಬೇರ್ಪಡಿಸಲು ಹಾಗೂ ಪರಮಾಣು ತೂಕವನ್ನು ಕರಾರುವಕ್ಕಾಗಿ ಲೆಕ್ಕ ಹಾಕಲು ಸಾದ್ಯವಾಯಿತು.ಈ ಉಪಕರಣವನ್ನು ಬಳಸಿ ಇವರು ಹೆಚ್ಚಿನ ಎಲ್ಲಾ ಮೂಲವಸ್ತುಗಳು ವಿವಿಧ ಐಸೋಟೋಪ್ಗಳ ಮಿಶ್ರಣ ಎಂದು ಸಾಬೀತು ಪಡಿಸಿದರು.ಈ ಉಪಕರಣದ ಸಂಶೋಧನೆಗೆ ಇವರಿಗೆ ೧೯೨೨ ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.