ಮಧ್ಯಮ ವರ್ಗದ ಇಂಗ್ಲೀಷರು ಮೊದಲು ಧರಿಸುತ್ತಿದ್ದ ಉಡುಪೇ ಫ್ರಾಕ್ . ಫ್ರಾಕ್‍ಗಳು ಸಡಿಲವಾಗಿದ್ದು, ಮೊಣಕಾಲಿನವರೆಗೆ ಇರುತ್ತವೆ. ಇದನ್ನು ಒಂದೇ ಬಟ್ಟೆಯಿಂದ ಹೊಲಿಯಲಾಗುತ್ತದೆ. ಆಸ್ಟ್ರೆಲಿಯಾದಲ್ಲಿ ಮುಖ್ಯವಾಗಿ ಅವರು ಧರಿಸುವ ಬಟ್ಟೆಗೆ ಫ್ರಾಕ್ ಅಥವಾ ಗೌನ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಆಧುನಿಕ ಪ್ರಾಕ್‍ಗಳು ವಿವಿಧ ಆಕಾರ, ಶೈಲಿಯಲ್ಲಿ ಇರುತ್ತವೆ. ಮೊದಲು ವಿದೇಶಿ ಸಂಸ್ಕ್ರತಿ ಮಹಿಳೆಯರು ಹಾಗೂ ಹುಡುಗಿಯರು ಈ ಉಡುಪನ್ನು ಧರಿಸುತ್ತಾರೆ. ಈಗ ಇದು ಒಂದು ಪ್ಯಾಷನ್ ಆಗಿದೆ. ಯಾವುದೇ ಶುಭಸಮಾರಂಭಗಳಿಗೆ, ಪಾರ್ಟಿಗಳಿಗೆ ಈ ಡ್ರೆಸ್‍ನ್ನು ಬಳಸುತ್ತಾರೆ.

ಇತಿಹಾಸ

ಬದಲಾಯಿಸಿ
 
2010 ರಲ್ಲಿ ಜಪಾನಿನ ಗಾಯಕಿ ಧರಿಸಿರುವ ಉಡುಗೆ- "ಫ್ರಾಕ್"

ಮೂಲತಃ ಫ್ರಾಕ್ ಸಾಮಾನ್ಯವಾಗಿ ವಿಶಾಲ ಪೂರ್ಣ ತೋಳುಗಳನ್ನು ಹೊಂದಿರುವ ಸಡಿಲ ಮತ್ತು ಉದ್ದನೆಯ ಉಡುಪಾಗಿದೆ. ಹೆಚ್ಚಾಗಿ ಇದನ್ನು ಪಾರ್ಟಿ ಸಂಧರ್ಭಗಳಲ್ಲಿ ಬಳಸುತ್ತಾರೆ.

11ನೇ ಶತಮಾನ

ಬದಲಾಯಿಸಿ

ಯುರೋಪಿನಲ್ಲಿ 11ನೇ ಶತಮಾನದಲ್ಲಿ ಮಹಿಳೆಯರು ಪುರುಷರ ಗಿಡ್ಡ ಅಂಗಿಯನ್ನು ಹೋಲುವ ಉಡುಪನ್ನು ಧರಿಸುತ್ತಿದ್ದರು ಮತ್ತು ಇವು ಸಡಿಲವಾಗಿರುತ್ತಿದ್ದವು. ಇವುಗಳು ಮೊಣಕಾಲಿನ ಮೇಲ್ಬಾಗದವರೆಗೆ ಇರುತ್ತಿದ್ದವು. ಶತಮಾನದ ಅಂತ್ಯದಲ್ಲಿ ಈ ಉಡುಪುಗಳನ್ನು ಮಹಿಳೆಯರಿಗೆ ಬೇಕಾದ ರೀತಿಯಲ್ಲಿ ವಿನ್ಯಾಸವನ್ನು ಮಾಡಿ, ಸುಲಭವಾಗಿ ಧರಿಸುವಂತೆ ಮಾಡಿದರು.

16ನೇ ಶತಮಾನ

ಬದಲಾಯಿಸಿ

1550 ರ ದಶಕದ ಆರಂಭದಿಂದ, ಯುರೋಪ್ ನಲ್ಲಿ ಮಾಧ್ಯಮ ಮತ್ತು ಮೇಲ್ವರ್ಗದ ಮಹಿಳೆಯರು ಫ್ರಾಕ್‍ನ್ನು ಧರಿಸುತ್ತಿದ್ದರು. ಇದು ಆಗಲ ತೋಳು ಮತ್ತು ಕಾಲರನ್ನು ಹೊಂದಿದ್ದವು. ಈ ಉಡುಗೆಯು ಸಮಾಜದಲ್ಲಿ ಮಹಿಳೆಯರ ಸ್ಥಾನವನ್ನು ಗುರುತ್ತಿಸಿದ್ದವು. ಈ ರೀತಿಯ ಉಡುಪಿಗೆ ಇಟಲಿಯಲ್ಲಿ ರೋಪಾ ಮತ್ತು ಸೆಮರಾ ಎಂದು ಕರೆಯುತ್ತಿದ್ದರು. ಈ ಉಡುಗೆ ಅಥವಾ ಫ್ರಾಕ್‍ನ್ನು ಚಳಿಯ ದಿನದಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು.

17ನೇ ಶತಮಾನ

ಬದಲಾಯಿಸಿ

17ನೇ ಶತಮಾದಲ್ಲಿ ಫ್ರಾಕ್ ಎಂಬುದು ಬ್ರಿಟನ್‍ನ ಕುರುಬರು, ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಧರಿಸಿರುವ ಪೂರ್ಣಉದ್ದನೆಯ ಹೊರ ಉಡುಪು ಆಗಿತ್ತು. ಶತಮಾನದ ಅಂತ್ಯದಲ್ಲಿ ಶುರುವಾದವಸ್ತ್ರೋದ್ಯಮದ ಉತ್ಪಾದನೆಯ ಕೇಂದ್ರವಾಗಿದ್ದ ಹಾಲೆಂಡ್‍ನಲ್ಲಿ ವಿವಿಧ ರೀತಿಯ, ನಾವೀನ್ಯತೆಯ ಫ್ರಾಕ್ ಹಾಗೂ ಇತರ ರೀತಿಯ ಉಡುಪುಗಳು ತಯಾರಾಗುತ್ತಿದ್ದವು. ಫ್ರಾಕ್‍ಗಳ ಮೇಲೆ ಪ್ರಾಣಿಗಳ ಚಿತ್ರ, ಸಸ್ಯಗಳ ಚಿತ್ರ, ಆ ದೇಶದ ಸಂಸ್ಕøತಿ ಸಾರುವ ಕೆಲವೊಂದು ಚಿತ್ರಗಳು, ವೈಜಾÐನಿಕ ಸಂಶೋಧನೆಗಳನ್ನು ಪ್ರತಿಬಿಂಬಿಸುವ ಕಸೂತಿಯು ಜನಪ್ರಿಯವಾಗಿದ್ದವು.[]

18ನೇ ಶತಮಾನ

ಬದಲಾಯಿಸಿ

ಬ್ರಿಟನ್ ಮತ್ತು ಅಮೆರಿಕಾದಲ್ಲಿ ಫ್ರಾಕ್ ಸಾಂಪ್ರದಾಯಿಕವಾಗಿ ಕಾರ್ಮಿಕ ವರ್ಗದವರಿಂದ ಪಡೆದ ವಿಶಾಲವಾದ ,ಪ್ಲಾಟ್ ಕಾಲರ್ ಹೊಂದಿರುವ ಉಡುಗೆ ಆಗಿತ್ತು.ಅಲ್ಲದೇ ಬೇಟೆಯಾಡುವಿಕೆ ಅಥವಾ ಇತರ ದೇಶದ ಅನ್ವೇಷಣೆಗಳಿಗೆ ಹೋಗುವಾಗ ಪುರುಷರು ಈ ಉಡುಪನ್ನು ಕೋಟ್‍ನ ರೀತಿಯಲ್ಲಿ ಧರಿಸುತ್ತಿದ್ದರು. ಕ್ರಮೇಣ ಫ್ರಾಕ್ ನಿಖರವಾದ ಐತಿಹಾಸಿಕ ವಿಕಸನ ಹೊಂದಿತ್ತು.

19 ನೇ ಶತಮಾನ

ಬದಲಾಯಿಸಿ

19 ನೇ ಶತಮಾನದ ಆರಂಭದ ಹೊತ್ತಿಗೆ ಗಂಡಸರಿಗಾಗಿ ಫ್ರಾಕ್ ಕೋಟ್‍ನ್ನು ತಯಾರಿಸಲಾಯಿತು. ಈ ಫ್ರಾಕ್ ಕೋಟ್ ಪೂರ್ಣ ತೊಳುಗಳನ್ನು , ಪಕೆಟ್ ಮತ್ತು ವಿ-ಆಕಾರದ ಕಾಲರ್‍ನ್ನು ಹೊಂದಿತ್ತು. ಇದನ್ನು ಹೊಸ ರೀತಿಯ ವಿನ್ಯಾಸದೊಂದಿಗೆ ಮಾಡಲಾಯಿತು.ರಷ್ಯದಲ್ಲಿ ಫ್ರಾಕನ್ನು ತೆಳುವಾದ ಬಟ್ಟೆಯಿಂದ ಮಾಡುತ್ತಿದ್ದರು. ಇದನ್ನು ಎಲಿಜಾಬೇತ್ ಲಿಬ್ರನ್‍ರಾಣಿಯು ಈ ತರಹದ ಉಡುಪನ್ನು ಧರಿಸುತ್ತಿದ್ದಳು. ನಂತರ ರಷ್ಯದ ಮಹಿಳೆಯರು ಅದನ್ನು ನೋಡಿ ಆಕರ್ಷಿತರಾಗಿ ತಾವು ಕೂಡ ಧರಿಸುತ್ತಿದ್ದರು. ಇದರಲ್ಲಿ ಈಗ ಹೊಸ ರೀತಿಯ ವಿನ್ಯಾಸಗಳನ್ನು ಹೊಂದಿದೆ. ಅದರಲ್ಲಿ ಸಿಲ್ಕ , ಕಟಾನ್, ಅಲ್ಲದೇ ಸೀರೆಯಲ್ಲಿಯೂ ಹೋಲಿಸಬಹುದಾದ ಫ್ರಾಕ್‍ಗಳು ಇವೆ. ಟ್ಯಾಟೂ ಡಿಸೈನ್‍ನ ಫ್ರಾಕ್ಗಳು ಇಂದು ಹೊಸ ರೀತಿಯಲ್ಲಿ ಕಾಣಿಸುತ್ತಿವೆ.ಈ ಉಡುಗೆಗಳು ವಿವಿಧ ರೀತಿಯ ಬಣ್ಣಗಳು, ಮತ್ತು ಸೀಸನ್‍ಗೆ ತಕ್ಕಂತೆ ಧರಿಸುವ ಫ್ರಾಕ್‍ಗಳು ಇವೆ. ವಿನೂತನವಾಗಿ ಕಲರ್‍ಪುಲ್ ಫ್ರಾಕ್‍ಗಳು ಪುಟ್ಟ ಮಕ್ಕಳಿಗೆ ಹೆಚ್ಚು ಮೆರುಗನ್ನು ಕೊಡುತ್ತಿವೆ. ಅದರಲ್ಲಿ ವಿವಿಧ ವಿಧಗಳು ಇವೆ. ಅವುಗಳೆಂದರೆ ಅಂಬ್ರೆಲಾ ಫ್ರಾಕ್, ವೆಲ್ವಟ್ ಬಲೂನ್ ಫ್ರಾಕ್, ಯೋಕ್ ಫ್ರಾಕ್, ಲಾಂಗ್ ಫ್ರಾಕ್, ಫ್ರಿಲ್ ಫ್ರಾಕ್,ಸ್ಟ್ರಪ್ ಫ್ರಾಕ್, ನೆಟ್ಟೆಡ್ ಫ್ರಾಕ್, ವೆಲ್ವೆಟ್ ಫ್ರಾಕ್, ಸಿಂಥೆಟಿಕ್ ಫ್ರಾಕ್‍ಗಳು ರಾರಾಜೀಸುತ್ತಿವೆ. ಇತ್ತೀಚೆಗೆ ಫ್ರಾಕ್ ಡ್ರೆಸ್‍ಗಳ ಮೇಲೆ ಹೊಸ ರೀತಿಯಾದ ತ್ರೀಡಿ ಪ್ರಿಂಟ್‍ನ ಡಿಸೈನ್‍ಗಳನ್ನು ಮಾಡಿದ್ದಾರೆ. ವಿವಿಧ ಬಣ್ಣಗಳಿಂದ ಮಾಡಿದ ಈ ವಿನ್ಯಾಸಗಳು ಯಾವುದೇ ರೀತಿಯಲ್ಲಿಯೂ ಹಾಳಾಗುವುದಿಲ್ಲ.[]

ಉಲ್ಲೇಖ

ಬದಲಾಯಿಸಿ
  1. www.macquariedictionary.com.au
  2. https://books.google.co.in/books/about/Carefree_Clothes_for_Girls.html?id=aBOuvrYcX1AC
"https://kn.wikipedia.org/w/index.php?title=ಫ್ರಾಕ್&oldid=1056654" ಇಂದ ಪಡೆಯಲ್ಪಟ್ಟಿದೆ