ಫೇಸ್ಪೌಡರ್
ಪೌಡರ್ ಅಂದರೆ ಎಲ್ಲರಿಗೂ ಇಷ್ಟ. ಕೆಲವರು ಪೌಡರ್‍ಅನ್ನು ಅತಿಯಾಗಿ ಹೆಚ್ಚು ಇಷ್ಟಪಡುತ್ತಾರೆ. ತಾವು ಸುಂದರವಾಗಿ ಕಾಣಬೇಕೆಂದು ಪೌಡರ್‍ಅನ್ನು ಅತಿ ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಪೌಡರ್ ಹಚ್ಚಿದ ಮುಖ ಇನ್ನಷ್ಟು ಅಸಹ್ಯವಾಗಿ ಕಾಣುತ್ತದೆ. ಮುಖಕ್ಕೆ ಪೌಡರ್‍ನ್ನು ಹಚ್ಚುವುದು ಬಹಳ ಸುಲಭ. ಹೆಚ್ಚು ಬೆವರಿದಾಗ ತ್ವಚೆ ಹಾಳಾಗಬಾರದೆಂದು ಮುಖಕ್ಕೆ ಪೌಡರ್‍ನ್ನು ಲೇಪಿಸಿಕೊಳ್ಳುತ್ತಾರೆ. ಮೊಡವೆ, ಕಲೆಗಳು ಇದ್ದಾಗ ಸ್ವಚ್ಛ ನೀರಿನಲ್ಲಿ ಮುಖವನ್ನು ತೊಳೆದು, ಸಂಪೂರ್ಣ ಒಣಗಿದ ಮೇಲೆ ಕ್ರೀಂನ್ನು ಬಳಸಬೇಕು. ನಂತರ ಪೌಡರ್‍ನ್ನು ಹಚ್ಚಿಕೊಳ್ಳಬೇಕು. ಜೊತೆಗೆ ಉತ್ತಮ ಗುಣಮಟ್ಟದ ಪೌಡರ್‍ನ ಬಳಕೆಯ ಕುರಿತು ತಿಳಿದುಕೊಳ್ಳುವುದು ಬಲು ಮುಖ್ಯ.[೧]
ಪೌಡರ್ ಆಯ್ಕೆ
ಬದಲಾಯಿಸಿಪೌಡರ್ಅನ್ನು ಖರೀದಿ ಮಾಡುವಾಗ ಸರಿಯಾದ ಬಣ್ಣವನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ. ತ್ವಚೆಯ ಬಣ್ಣಕ್ಕೆ ಹೊಂದಿಕೆಯಾಗುವ ಪೌಡರ್‍ನ್ನು ಆರಿಸಬೇಕು. ಹೆಚ್ಚಾಗಿ ಕಂದು ಹಾಗೂ ಬಿಳಿ ಬಣ್ಣಗಳಲ್ಲಿ ಮುಖದ ಪೌಡರ್ ದೊರಕುತ್ತದೆ. ಸಾಮಾನ್ಯವಾಗಿ ಮುಖದ ಪೌಡರ್‍ಗಳು ಮುಖದ ಅಂದವನ್ನು ಹೆಚ್ಚಿಸುವಲ್ಲಿ ಕಾರಣವಾಗುತ್ತದೆ.[೨]
ಪೌಡರ್ ಹಚ್ಚುವ ವಿಧಾನ
ಬದಲಾಯಿಸಿಮುಖದ ಗೆರೆಗಳ ಹೊರ ತುದಿಗಳನ್ನು ಮುಚ್ಚಲು ಮುಖಕ್ಕೆ ಪೌಡರ್‍ನ್ನು ಸರಿಯಾಗಿ ಹಚ್ಚಿಕೊಳ್ಳಬೇಕು. ಕುತ್ತಿಗೆ ಹಾಗೂ ಅದರ ಸುತ್ತ-ಮುತ್ತಲಿನ ಪ್ರದೇಶದಲ್ಲಿ ವೃತ್ತಾಕಾರವಾಗಿ ಪೌಡರ್‍ನ್ನು ತಿರುಗಿಸುತ್ತಾ ಹಚ್ಚಿಕೊಳ್ಳಬೇಕು. ಪೌಡರ್‍ನ್ನು ಹಚ್ಚಿಕೊಳ್ಳುವಂತಹ ಸಮಯದಲ್ಲಿ ಕಾಂಪ್ಯಾಕ್ಟ್‍ನ್ನು ಬಳಸಬಾರದು. ಅದರ ಜೊತೆಗೆ ಮಾರುಕಟ್ಟೆಯಲ್ಲಿ ಬಿಡಿಯಾಗಿದೊರಕುವ ಪೌಡರ್‍ನ್ನು ಖರೀದಿ ಮಾಡಬಾರದು. ಇವುಗಳು ಮುಖದಲ್ಲಿ ಗೆರೆಗಳನ್ನು ಮತ್ತು ಸುಕ್ಕುಗಳನ್ನು ಜೊತೆಗೆ ಕೆಲವೊಂದು ಚರ್ಮ ಸಂಬಂಧಿ ಖಾಯಿಲೆಗಳನ್ನು ಉಂಟುಮಾಡಬಹುದು.[೩] ಮುಖಕ್ಕೆ ಪೌಡರ್‍ನ್ನು ಬಳಸುವ ಸಮಯದಲ್ಲಿ ಪೆಟ್ರೋಲಿಯಮ್ ಜೆಲ್ಲಿಗಳನ್ನು ಬಳಸಬಾರದು. ಮುಖವು ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಹೊಂದಿದ್ದರೆ, ಹೆಚ್ಚಿನ ಅಲಂಕಾರವು ಬಣ್ಣದ ಬೊಂಬೆನ್ನಾಗಿಸಬಹುದು. ಆದ್ದರಿಂದ ಮುಖಕ್ಕೆ ಪೌಡರ್‍ನ್ನು ಹಚ್ಚುವಾಗ ಕನಿಷ್ಟವಾಗಿ ಹಚ್ಚಬೇಕು. ಮುಖದಿಂದ ಹೆಚ್ಚಿನ ಪೌಡರ್‍ನ್ನುತೆಗೆಯಲು ಬ್ಲೋಟಿಂಗ್ ಪೇಪರ್‍ನ್ನು ಬಳಸಬೇಕು. ಇದರಿಂದ ಹೆಚ್ಚಿನ ಪೌಡರ್ ಮುಖದಲ್ಲಿದ್ದರೂ ಹೆಚ್ಚೆಂದುಕಂಡು ಬರುವುದಿಲ್ಲ. ಸುವಾಸನೆ ಭರಿತವಾಗಿ ಕಂಡು ಬರುವ ಮುಖದ ಪೌಡರ್‍ಗಳು ಎಲ್ಲಾ ವಯಸ್ಸಿನ ಜನತೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿಕಾರಣವಾಗುತ್ತಿದೆ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2018-02-16. Retrieved 2018-04-05.
- ↑ https://www.avoskinbeauty.com/blog/en/5-types-of-face-powder-and-its-functions/
- ↑ https://www.beautyheaven.com.au/makeup/face-powder/different-make-up-powders-explained