ಫಿ ಫಿ ದ್ವೀಪಗಳು
ಫಿ ಫಿ ದ್ವೀಪಗಳು ಥೈಲ್ಯಾಂಡ್ ದೇಶದಲ್ಲಿ ದೊಡ್ಡ ದ್ವೀಪವಾದ ಫುಕೆಟ್ ಮತ್ತು ಪಶ್ಚಿಮ ಅಂಡಮಾನ್ ಸಮುದ್ರದ ನಡುವೆ ಇದ್ದು, ಒಂದು ದ್ವೀಪದಲ್ಲಿ ಮಾತ್ರ ಶಾಶ್ವತ ಜನವಸತಿ ಇದೆ. ಇನ್ನೊಂದು ದ್ವೀಪವನ್ನೂ ಪ್ರವಾಸಿಗಳು ಸಂದರ್ಶಿಸುವರು. ಈ ದ್ವೀಪಗಳು ತುಂಬ ರಮಣೀಯವಾಗಿದ್ದು, 'ದಿ ಬೀಚ್' ಎಂಬ ಇಂಗ್ಲೀಷ್ ಚಲನಚಿತ್ರದಿಂದಾಗಿ ಇಲ್ಲಿ ಪ್ರವಾಸಿಗಳ ಬರವು ಬಹಳಷ್ಟು ಹೆಚ್ಚಾಗಿದೆ. ೨೦೦೪ ರಲ್ಲಿ ತ್ಸುನಾಮಿಯಿಂದಾಗಿ ಈ ದ್ವೀಪದಲ್ಲಿ ಬಹಳಷ್ಟು ಹಾನಿ ಸಂಭವಿಸಿದ್ದು ಈಗ ಬಹಳಷ್ಟನ್ನು ಸುಸ್ಥಿತಿಗೆ ತರಲಾಗಿದೆ.ಮೊದಲ್ಲೆಲ್ಲ ಅಂದರೆ ೧೯೪೦ರ ಸಮಯದಲ್ಲಿ ಈ ದ್ವೀಪದಲ್ಲಿ ಮುಸ್ಲಿಮ ಮೀನುಗಾರರು ಇದ್ದರು,ನಂತರ ಈ ದ್ವೀಪವು ತೆಂಗಿನ ತೋಟ ಆಯಿತು.ಫಿ ಫಿ ಡಾನ್ ಥಾಯ್ ಜನಸಂಖ್ಯೆಯಲ್ಲಿ 80% ಮುಸ್ಲಿಂರೇ ಇದ್ದರು.ಇಲ್ಲಿ ಸುಮಾರು ೨೦೦೦ ದಿಂದ ೩೦೦೦ ಮಂದಿ ಜನರಿದ್ದಾರೆ.
ಚಿತ್ರಗಳು
ಬದಲಾಯಿಸಿ-
ಒಳಸರೋವರವನ್ನು ಸಮುದ್ರಕ್ಕೆ ಜೋಡಿಸುವ ಗುಹೆ.
-
ಫಿ ಫಿ ಬಂದರಿನಲ್ಲಿನ ಉದ್ದ ದೋಣಿಗಳು.
-
ಜಿಪ್ಸಿ ದೋಣಿಗಳು
-
ಇನ್ನೊಂದು ದೋಣಿ