ಫ಼ಲಾಫ಼ಲ್
ಫ಼ಲಾಫ಼ಲ್ ರುಬ್ಬಿದ ಕಡಲೆ ಅಥವಾ ಅವರೆಕಾಯಿ ಅಥವಾ ಎರಡರಿಂದಲೂ ತಯಾರಿಸಲಾದ ಒಂದು ಕರಿದ ಉಂಡೆ ಅಥವಾ ಪ್ಯಾಟಿ. ಫ಼ಲಾಫ಼ಲ್ ಸಾಮಾನ್ಯವಾಗಿ ಒಂದು ಚೀಲದಂತೆ ಕಾರ್ಯನಿರ್ವಹಿಸುವ ಪೀಟಾದಲ್ಲಿ ಬಡಿಸಲಾದ ಅಥವಾ ಲಾಫ಼ಾ ಎಂದು ಕರೆಯಲಾದ ಫ಼್ಲ್ಯಾಟ್ಬ್ರೆಡ್ನಲ್ಲಿ ಸುತ್ತಲಾದ ಒಂದು ಸಾಂಪ್ರದಾಯಿಕ ಮಧ್ಯಪ್ರಾಚ್ಯ ಆಹಾರವಾಗಿದೆ. ಫ಼ಲಾಫ಼ಲ್ ಉಂಡೆಗಳ ಮೇಲೆ ಸ್ಯಾಲಡ್ಗಳು, ಊರಿಡಲಾದ ತರಕಾರಿಗಳು, ಮೆಣಸಿನಕಾಯಿ ಸಾಸ್ನಿಂದ ಅಲಂಕರಿಸಲಾಗುತ್ತದೆ.