ಫರ್ಮಿಯಾನ್
ಕಣ ಭೌತಶಾಸ್ತ್ರದಲ್ಲಿ, ಫರ್ಮಿಯಾನುಗಳು ಫರ್ಮಿ-ಡಿರ‍್ಯಾಕ್ ಅಂಕಿಅಂಶ ಶಾಸ್ತ್ರಕ್ಕೆ ಬದ್ಧವಾಗಿರುವ ಕಣಗಳು; ಅವುಗಳನ್ನು ಎನ್ರಿಕೋ ಫರ್ಮಿಯವರ ಗೌರವಾರ್ಥವಾಗಿ ಫರ್ಮಿಯಾನ್ ಎಂದು ಹೆಸರಿಸಲಾಯಿತು. ಬೋಸ್-ಆಯ್ನ್‌ಸ್ಟಾಯ್ನ್ ಅಂಕಿಅಂಶ ಶಾಸ್ತ್ರಕ್ಕೆ ಬದ್ಧವಾಗಿರುವ ಬೋಸಾನ್‌ಗಳಿಗೆ ತದ್ವಿರುದ್ಧವಾಗಿ ಒಂದು ನಿರ್ದಿಷ್ಟ ಕ್ಷಣದಲ್ಲಿ ಒಂದು ಕ್ವಾಂಟಮ್ ಸ್ಥಿತಿಯಲ್ಲಿ ಒಂದು ಫರ್ಮಿಯಾನ್ ಮಾತ್ರ ಇರಬಹುದು; ಇದನ್ನೇ ಪಾಲೀ ಪ್ರತ್ಯೇಕತಾ ನಿಯಮವೆನ್ನುತ್ತಾರೆ.