ಫರ್ಡಿನೆಂಡ್ ಡಿ ಸಸ್ಯೂರ್

ಫರ್ಡಿನೆಂಡ್ ಡಿ ಸಸ್ಯೂರ್ (೨೬ ನವೆಂಬರ್ ೧೮೫೭-೨೨ಫೆಬ್ರವರಿ ೧೯೧೩) ೨೦ ನೇ ಶತಮಾನದ ಸ್ವಿಸ್ ನ ಭಾಷಾ ವಿಜ್ಞಾನಿ ಹಾಗೂ ಸಂಕೇತ ವಿಜ್ಞಾನಿ. ಭಾಷಾ ವಿಜ್ಞಾನ ಹಾಗೂ ಸಂಕೇತ ವಿಜ್ಞಾನದ ಬೆಳವಣಿಗೆಯಲ್ಲಿ ಇವನ ಕೊಡುಗೆ ಗಮನಾರ್ಹವಾದದ್ದು. ಇವನನ್ನು ೨೦ ನೇ ಶತಮಾನದ ಭಾಷಾ ವಿಜ್ಞಾನದ ಪಿತಾಮಹನೆಂದು ಪರಿಗಣಿಸಬಹುದು ಹಾಗೂ ಸಂಕೇತ ವಿಜ್ಞಾನದ ಪಿತಾಮಹರುಗಳಲ್ಲಿ (ಚಾರ್ಲ್ಸ್ ಸ್ಯಾಂಡರ್ಸ್ ಫೇರ್ಯ್ಸ್) ಕೂಡ ಒಬ್ಬ.[]

ಫರ್ಡಿನೆಂಡ್ ಡಿ ಸಸ್ಯೂರ್
ಫರ್ಡಿನೆಂಡ್ ಡಿ ಸಸ್ಯೂರ್
ಜನನನವಂಬರ್ ೨೬, ೧೮೫೭
ಜಿನೆವಾ, ಸ್ವಿಟ್ಝರ್ಲ್ಯಾಂಡ್
ಮರಣಫೆಬ್ರವರಿ ೨೨, ೧೯೧೩
ಸ್ವಿಟ್ಝರ್ಲ್ಯಾಂಡ್
ವೃತ್ತಿಭಾಷಾ ಶಾಸ್ತ್ರಜ್ಞ
ರಾಷ್ಟ್ರೀಯತೆಸ್ವಿಸ್

ಇವನ ಭಾಷಾಂತರಕಾರರಲ್ಲಿ ಒಬ್ಬನಾದ ರಾಯ್ ಹ್ಯಾರಿಸ್, ಭಾಷಾ ವಿಜ್ಞಾನಕ್ಕೆ ಹಾಗೂ ಭಾಷಾದ್ಯಯನಕ್ಕೆ ನೀಡಿದ ಕೊಡುಗೆಗಳನ್ನು ಈ ಕೆಳಕಂಡಂತೆ ವಿವರಿಸುತ್ತಾನೆ. "ಪದಗಳು ಕೇವಲ ಶಬ್ದದ ಗುಂಪು ಅಥವಾ ಸಂವಹನವನ್ನು ಕಾಯ್ದುಕೊಳ್ಳುವಂತವುಗಳು. ಅವುಗಳು ಪ್ರಪಂಚದಲ್ಲಿ ಮಾನವನಿಂದ ರಚಿಸಲ್ಪಟ್ಟ ಹಾಗೂ ಉಚ್ಚಾರಿಸಲ್ಪಟ್ಟ ಸಾಮಾಜಿಕ, ಅಗತ್ಯ ವಾದ ಉಪಕರಣಗಳಿಂದ ಸಂಗ್ರಹಿಸಲ್ಪಟ್ಟ ಉಪಕರಣಗಳು. ಇದು ೨೦ ನೇ ಶತಮಾನದ ಮಾನವಶಾಸ್ತ್ರದ ಎಲ್ಲಾ ಮಿತಿಗಳನ್ನು ಭಾಷಾ ದ್ರುಷ್ಟಿಕೋನದ ಆಳವಾದ......... ಇದು ವಿಶೇಷವಾಗಿ ಭಾಷಾ ವಿಜ್ಞಾನದ,ತತ್ವಶಾಸ್ತ್ರ,ಮನೋವಿಜ್ಞಾನ,ಸಮಾಜಶಾಸ್ತ್ರ,ಹಾಗೂ ಮಾನವಶಾಸ್ತ್ರದಲ್ಲಿ ಗುರುತಿಸಿಕೊಂಡಿದೆ."

ನಂತರ ಅವು ಹೆಚ್ಚುಕಾಲ ವಿಮರ್ಶಾತ್ಮಕವಾಗಿ ಹಾಗೂ ವಿಸ್ತಾರತೆಯನ್ನು ಹೊಂದಿದ್ದು, ಸಸ್ಯೂರ್ ನಿಂದ ಪರಿಚಯಿಸಲ್ಪಟ್ಟ ಸಂಘಟನಾಯಾಮಗಳು ಭಾಷಾ ಸಂಗತಿಗೆ ಸಮಕಾಲೀನ ಮಾರ್ಗಗಳ ಮುಂದುವರಿಕೆಗೆ ಸಹಾಯಕವಾಗಿದೆ.ಫ್ರಾಗ್ ಸ್ಕೂಲ್ನ ಭಾಷಾ ವಿಜ್ಞಾನಿ ಜಾನ್ ಮುಕರೊಸ್ಕಿ ಸಸ್ಯೂರ್ ನ "ಭಾಷಾ ವಿಜ್ಞಾನ ಸಂಕೇತದ ಆಂತರಿಕ ರಚನೆ ಶಬ್ದದ ಆಕರಗಳಿಂದ ಮತ್ತು ಮಾನಸಿಕ ಪ್ರಕ್ರಿಯೆಯಿಂದ ಪ್ರತ್ಯೇಕಿಸಲ್ಪಟ್ಟೈದೆ " ಎಂಬ ಅನ್ವೇಷಣೆಯನ್ನು ತಿಳಿಸಿದ್ದಾನೆ, ಮತ್ತು ಈ ಬೆಳವಣಿಗೆಯಲ್ಲಿ "ಇದರೊಂದಿಗೆ ಹೊಸ ಮಾರ್ಗಗಳು ಕೇವಲ ಭಾಷಾ ವಿಜ್ಞಾನಕ್ಕಲ್ಲದೆ ಮುಂದಿನ ಸಾಹಿತ್ಯದ ಸಿದ್ದಾಂತಕ್ಕೆ ಕೂಡ ತೋರುತ್ತದೆ." ರುಕ್ವಾಯ್ ಹಸನ್ ನ ವಾದ "ಸಸ್ಯೂರ್ ನ ಭಾಷಾ ವಿಜ್ಞಾನ ಸಂಕೇತ ಸಿದ್ದಾಂತದ ಪ್ರಭಾವ ಹೇಗಿತ್ತೆಂದರೆ ಆಧುನಿಕ ಭಾಷಾಶಾಸ್ತ್ರಜ್ನರು ಮತ್ತು ಅವರ ಸಿದ್ದಾಂತಗಳು ಸಸ್ಯೂರ್ ನ ಆಕರವನ್ನು ಹೊಂದಿವೆ:ಅವು ಪೂರ್ವ-ಸಸ್ಯೂರ್ ನ ಕಾಲ,ಸಸ್ಯೂರ್ ನ ಕಾಲ, ಸಸ್ಯೂರ್ ನ ವಿರೋಧ, ಸಸ್ಯೂರ್ ನ ನಂತರ ಅಥವಾ ಸಸ್ಯೂರ್ ನದ್ದಲ್ಲ ಎಂಬುದಾಗಿ ಕಂಡುಬರುತ್ತವೆ.

ಜೀವನ ಚರಿತ್ರೆ

ಬದಲಾಯಿಸಿ

ಫರ್ಡಿನಾಂಡ್ ಮೊಂಗಿನ್ ಡಿ ಸಸ್ಯೂರ್ ಜಿನಿವಾದಲ್ಲಿ ೧೮೫೭ ರಲ್ಲಿ ಜನಿಸಿದನು.ತಂದೆ ಹೆನ್ರಿ ಲೂಯಿಸ್ ಫ್ರೆಡರಿಕ್ ಡಿ ಸಸ್ಯೂರ್,ಖನಿಜಶಾಸ್ತ್ರಜ್ನ,ಕೀಟಶಾಸ್ತ್ರಜ್ನ, ಜೀವವರ್ಗೀಕರಣ ವಿಜ್ಞಾನಿ. ಸಸ್ಯೂರ್ ತನ್ನ ಹದಿನಾಲ್ಕನೇ ವಯಸ್ಸಿನಲ್ಲಿಯೇ ಗಣನೀಯವಾದ ಪ್ರತಿಭೆ ಮತ್ತು ಬೌದ್ದಿಕ ಸಾಮರ್ಥ್ಯವನ್ನು ತೋರುತ್ತಿದ್ದ. ಲ್ಯಾಟಿನ್,ಗೀಕ್,ಸಂಸ್ಕ್ರುತದ ಅಧ್ಯಯನದ ನಂತರದ ವರ್ಷಗಳಲ್ಲಿ ಜಿನಿವಾ ವಿಶ್ವವಿದ್ಯಾನಿಲಯದಲ್ಲಿ ವಿವಿಧ ವಿಷಯಗಳ ಅಧ್ಯಯನ ಕೈಗೊಂಡು, ಲಿಫ್ಸೀಗ್ ವಿಶ್ವವಿದ್ಯಾನಿಲಯದಲ್ಲಿ ೧೮೭೬ ರಲ್ಲಿ ಪದವಿಯನ್ನು ಪಡೆದನು.

ತನ್ನ ಇಪ್ಪತ್ತೊಂದನೆ ವಯಸ್ಸಿನಲ್ಲಿ " ಮೆಮೊರೆಸರ್ ಲೇ ಸಿಸ್ಟಮಪ್ರಿಮಿಟಿವ್ ದೈಸ್ ವಯೊಲೆಸ್ಡಾನ್ಸ್ ಲೇಸ್ ಲಾಂಗ್ಸ್ ಇಂಡೊ-ಯೂರೊಪಿನ್ಸ್" (ಡೆಸರ್ಟೆಷನ್ ಆನ್ ದಿ ಪ್ರಿಮಿಟಿವ್ ವೊವೆಲ್ ಸಿಸ್ಟಮ್ ಇನ್ ಇಂಡೊ-ಯೂರೊಪಿಯನ್ ಲ್ಯಾಂಗ್ವೆಜಸ್) ಎಂಬ ಪುಸ್ತಕವನ್ನು ಪ್ರಕಟಿಸಿ, ನಂತರ ಲೊಕೆಟಿವ್ ಆಬ್ಸಲ್ಯೂಟ್ ಎಂಬ ವಿಷಯದ ಮೇಲೆ ಸಂಸ್ಕ್ರುತದಲ್ಲಿ ಸಂಶೋಧನಾ ಕಾರ್ಯವನ್ನು ಬರ್ಲಿನ್ ನಲ್ಲಿ ಕೈಗೊಂಡನು. ಲಿಪ್ಸೀಗ್ ನಗರಕ್ಕೆ ಮರಳಿದ ನಂತರ ೧೮೮೦ ರಲ್ಲಿ ಡಾಕ್ಟರೇಟ್ ನೀಡಲಾಯಿತು. ತದ ನಂತರ, ಪ್ಯಾರಿಸ್ ನಲ್ಲಿ ಸಂಸ್ಕ್ರುತ,ಗಾಥಿಕ್ ಮತ್ತು ಒಲ್ಡ್ ಹೈ ಜರ್ಮನ್, ಮತ್ತು ಇತರ ವಿಷಯಗಳಲ್ಲಿ ಪ್ರಾದ್ಯಾಪಕನಾಗಿದ್ದನು.

ಹನ್ನೊಂದು ವರ್ಷಗಳಕಾಲ ಇಕೊಲೆ ಪ್ರಾಟಿಕ್ ಡೆಸ್ ಹೊಟಿಸೆಟ್ಯುಡ್ಸ್ ಬಗ್ಗೆ ಬೊದಿಸುವ ಸಂಧರ್ಭದಲ್ಲಿ ಚೆವೆಲಿಯರ್ ಡಿ ಲ ಲೆಜಿಯಾಂಡ್ ಹೊನರ್( ನೈಟ್ ಆಫ್ ದಿ ಲೆಜಿಯಾನ್ ಆಫ್ ಹಾನರ್) ಎಂದೇ ಹೆಸರು ಪಡೆದನು. ಜಿನಿವಾದಿಂದ ೧೮೯೧ ರಲ್ಲಿ ಪ್ರಾದ್ಯಾಪಕತ್ವಕ್ಕೇ ಆಹ್ವಾನ ಬಂದಾಗ ಜಿನಿವಾಕ್ಕೇ ಹಿಂತಿರುಗಿದನು. ಸಸ್ಯೂರ್ ತನ್ನ ಜೀವನದ ಉಳಿದ ಭಾಗವನ್ನು ಜಿನಿವಾ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಮತ್ತು ಇಂಡೊ-ಯೊರೊಪಿಯನ್ ಭಾಷೆಗಳನ್ನು ಬೋದಿಸುವುದರೊಂದಿಗೆ ಕಳೆದರು. ಸಸ್ಯೂರ್ ೧೯೦೭ ರಿಂದ ' ಕೋರ್ಸ್ ಆಫ್ ಜನರಲ್ ಲಿಂಗ್ವಿಸ್ಟಿಕ್ಸ್' ವಿಷಯವನ್ನು ಬೋದಿಸಲು ಪ್ರಾರಂಭಿಸಿದ್ದಲ್ಲದೆ,ಅದನ್ನು ಮೂರು ಬಾರಿ ೧೯೧೧ರ ಅಂತ್ಯದ ವರೆಗೆ ಬೋದಿಸಿದನು. ೧೯೧೩ರಲ್ಲಿ ಸ್ವಿಡ್ಜರ್ ಲ್ಯಾಂಡ್ ನ ವುಫ್ಲೆನ್ಸ್-ಲೆ-ಚಾಟಿವ್,ವಾಡ್ ಎಂಬಲ್ಲಿ ಮರಣ ಹೊಂದಿದನು. ಇವನ ಮಗ ರೇಮಂಡ್ ಡಿ ಸೊಸ್ಸೂರ್ ಮನೋವಿಶ್ಲೇಷಕ. ಸಸ್ಯೂರ್ ೧೮೮೦ ಮತ್ತು ೧೮೯೦ರ ದಶಕದಲ್ಲಿ ಹಲವಾರು ಬಾರಿ 'ಸಾಮಾನ್ಯ ಭಾಷಾವಿಜ್ಞಾನ' ವಿಷಯದ ಬಗ್ಗೆ ಪುಸ್ತಕ ಬರೆಯಲು ಪ್ರಯತ್ನಿಸಿದ್ದಾನೆ. ೧೯೧೬ರಲ್ಲಿ ೧೯೦೭ ಮತ್ತು ೧೯೧೧ ರ ನಡುವಿನ ಭಾಷಾ ವರ್ಣನೆಯ ಪ್ರಮುಖ ತತ್ವಗಳ ಬಗ್ಗೆ ಸಸ್ಯೂರ್ ನೀಡಿರುವ ಉಪನ್ಯಾಸಗಳನ್ನು ಅವನ ಶಿಷ್ಯರು ಸಂಗ್ರಹಿಸಿ ಸಸ್ಯೂರ್ ನ ಮರಣದ ನಂತರ "ಕೋರ್ಸ್ ಡೇ ಲಿಂಗ್ವಿಸ್ಟಿಕ್ ಜನರಲ್" ಎಂಬ ಹೆಸರಿನಲ್ಲಿ ಪುಸ್ತಕವನ್ನು ಪ್ರಕಟಗೊಳಿಸಿದರು. ಇವನ ಕೆಲವು ಬರಹಗಳಲ್ಲಿ ಪೂರ್ಣಗೊಳ್ಳದ ಪ್ರಬಂದಗಳನ್ನು ೧೯೯೬ರಲ್ಲಿ ಅನ್ವೇಷಿಸಲಾಯಿತು, ಆದರೂ ಬಹುಪಾಲು ಅಂಶಗಳು ಇಗಾಗಲೇ ಇಂಗ್ಲರ್ ನ ಕ್ರಿಟಿಕಲ್ ಎಡಿಷನ್ ಅಫ್ ದ ಕೋರ್ಸ್ ಎಂಬ ಪುಸ್ತಕದಲ್ಲಿ ೧೯೬೭ ಮತ್ತು ೧೯೭೪ ರಲ್ಲಿ ಪ್ರಕಟಗೊಂದಿವೆ.

ಮೈಲಿಗಲ್ಲುಗಳು

ಬದಲಾಯಿಸಿ

೨೦ ನೇ ಶತಮಾನದ ಮೊದಲಾರ್ದದಲ್ಲಿನ ಭಾಷಾಶಾಸ್ತ್ರದ ಬೆಳವಣಿಗೆಯ ಮೇಲೆ ಸಸ್ಸ್ಯೂರ್ ನ ಪ್ರಭಾವ ಕೂಡ ಗಣನೀಯವಾದದ್ದು. ಇವನ ಪ್ರಸ್ತುತ ಚಿಂತನೆಗಳೆರಡು ಸ್ವತಂತ್ರವಾಗಿ ಉಗಮಗೊಂಡಿದ್ದು, ಒಂದು ಯೂರೋಪ್ ನಲ್ಲಿ, ಮತ್ತೊಂದು ಅಮೆರಿಕಾದಲ್ಲಿ.ಸಸ್ಸ್ಯೂರ್ ನ ಎರಡು ಸಂಯೋಜಿತ ಚಿಂತನೆಗಳ ಪಲಿತಾಂಶ ಸಂರಚನಾ ಭಾಷಾಶಾಸ್ತ್ರದ ಕೇಂದ್ರಿಯ ಸೂತ್ರವಾಗಿ ಮಾರ್ಪಟ್ಟಿತು. ಭಾಷಾಶಾಸ್ತ್ರದ ಸಮಕಾಲಿನ ಸೈದ್ದಾಂತಿಕತೆಯಲ್ಲಿ ಇವನ ಸ್ಥಾನಮಾನ ಅತ್ಯಂತ ಕಿರಿದಾಗಿದ್ದು,ಈಗಿನ ಹಲವು ಮೂಲ ಸ್ಥಾನಗಳೊಂದಿಗೆ ಅಥವಾ ವಿಷಯಗಳೊಂದಿಗೆ ಸವಾಲಾಗಿ ಪರಿಣಮಿಸಿತು.

ಸಸ್ಯೂರ್ ಭಾಷಾಶಾಸ್ತ್ರ ಒಂದು ಯಾಧೃಚ್ಚಿಕ ರೀತಿಯೆಂದು ತೋರಿಸಿದನು, ಮತ್ತು ಆದ್ದರಿಂದ ಎಲ್ಲಾ ಭಾಷೆಗಳು ಸಾಮ್ಯವಾದ ಲಕ್ಷಣಗಳನ್ನು ಒಳಗೊಂಡಿರುತ್ತವೆ. ಸಸ್ಯೂರ್ ನ ಪ್ರಕಾರ, ಒಂದು ಭಾಷೆ ಯಾಧೃಚ್ಚಿಕವಾದದ್ದು ಏಕೆಂದರೆ ಒಂದು ಭಾಗದ ಮೊತ್ತಕ್ಕಿಂತ ಅಖಂಡತೆಯು ಸುವ್ಯವಸ್ಥಿತವಾಗಿರಬೇಕು. ಅದೇರೀತಿ,ಎಲ್ಲಾ ಭಾಷೆಗಳು ತಮ್ಮದೇಆದ ಪರಿಕಲ್ಪನೆಗಳನ್ನು ಮತ್ತು ಶಬ್ದಚಿತ್ರಣಗಳನ್ನು ಒಳಗೊಂಡಿರುತ್ತವೆ (ಅಥವಾ ಸೂಚಕಗಳು ಮತ್ತು ಸೂಚಿತಗಳು) ಆದ್ದರಿಂದ,ಸಸ್ಯೂರ್ ನ ವಾದವೆಂದರೆ,ಭಾಷೆಗಳು ತಮ್ಮ ಅಂಶಗಳಲ್ಲಿ ಸಂಭಂದಿತ ಪರಿಕಲ್ಪನೆಗಳನ್ನು ಒಳಗೊಂಡಿವೆ: ಪದಗಳು ಮತ್ತು ಅವುಗಳ ಅರ್ಥಗಳನ್ನು ಒಂದಕ್ಕೊಂದು ಹೊಲಿಕೆ ಮತ್ತು ವ್ಯತ್ಯಾಸ ಮಾಡುವುದರೊಂದಿಗೆ ವ್ಯಾಖ್ಯಾನಿಸಬಹುದು. ಉದಾಹರಣೆಗೆ ಶಬ್ದಚಿತ್ರಣ ಮತ್ತು ಪರಿಕಲ್ಪನೆಯ ಪಟ್ಟಿಯಲ್ಲಿ ಹೊಲಿಸಿ ನೋಡಿದಾಗ ಎರಡು ಭಿನ್ನವಾದವುಗಳು. ಭಾಷೆಗಳು ಕೂಡ ಯಾದೃಚ್ಚಿಕವಾದವು ಏಕೆಂದರೆ ಭಾಷಾವಿಜ್ಞಾನದ ಮೂಲಾಂಶಗಳ ಸ್ವರೂಪದಿಂದ ಭಾಷೆಗಳು ಯಾದೃಚ್ಚಿಕವಾದವುಗಳು: ಅವುಗಳು ತಮ್ಮ ಕಾರ್ಯಾತ್ಮಕತೆಗಿಂತ ಅವುಗಳು ಒಳಗೊಂಡಿರುವ ಗುಣಗಳನ್ನು ವ್ಯಾಖ್ಯಾನಿಸುತ್ತವೆ. ಕೊನೆಯದಾಗಿ, ಇವನ ಪ್ರತಿಜ್ನೆಯ ಆಧಾರದಮೇಲೆ,ಭಾಷೆಯು ಒಂದು ವಿಶಾಲವಾದ ವಿಮರ್ಶಾತ್ಮಕ ಸಂಧರ್ಬದಲ್ಲಿ ಸಾಮಾಜಿಕ ಸ್ವರೂಪವನ್ನು ಹೊಂದಿದ್ದು,ಅದರ ರಚನೆಯಲ್ಲಿ ಸಧೃಡತೆಯನ್ನು ಮತ್ತು ಸ್ಪಷ್ಟತೆಯನ್ನು ಹೊಂದಿದೆ.

ಯೂರೋಪ್ ನಲ್ಲಿ,ಫ್ರಾಗ್ ಸ್ಕೂಲ್ ನ ಅತೀ ಮುಖ್ಯವಾದ ಕಾರ್ಯ ಈ ಅವಧಿಯ ಮೇಲೆ ಪರಿಣಾಮ ಬೀರಿತು. ನಿಕೋಲೆ ಟ್ರಿಬೆಜ್ಕೋಯ್ ಮತ್ತು ರೋಮ್ ನ ಯಾಕೊಬ್ಸನ್ ಇವರಿಬ್ಬರು ೧೯೪೦ರ ದಶಕದಲ್ಲಿ ಕೋರ್ಸ್ ಅಫ್ ಫೊನೊಲಾಜಿಕಲ್ ಥಿಯರಿ ಎಂಬುದರ ರಚನೆಗೆ ಫ್ರಾಗ್ ಸ್ಕೂಲ್ ನಲ್ಲಿದ್ದಂತಹ ಪ್ರಮುಖ ಭಾಷಾಶಾಸ್ತ್ರಜ್ನರು,ಯಾಕೊಬ್ಸನ್ ಫೊನೊಲಜಿಯ ಸಂರ್ಚನಾ-ಕಾರ್ಯಾತ್ಮಕ ಸಿದ್ದಾಂತಕ್ಕೆ ಸೇರಿದಂತೆ,ವ್ಯತ್ಯಾಸದಿಂದ ಕೂಡಿದ ಲಕ್ಷಣಗಳ ಏಣಿ-ಶ್ರೇಣಿ ಆಧಾರದಮೇಲೆ ಸಸ್ಯೂರ್ ನ ಪ್ರಾಕ್ ಕಲ್ಪನೆಯಂತೆ ಇದು ಭಾಷಾವಿಜ್ಞಾನದ ವಿಶ್ಲೇಷಣೆಗೆ ಮೊದಲನೆಯ ಪರಿಹಾರದಂತೆ ಎಂದು ಹೇಳಿದ್ದಾನೆ. ಮತ್ತೊಂದೆಡೆ, ಲೂಯಿಸ್ ಹೆಜಿಮ್ ಸ್ಲೇಪ್ ಮತ್ತು ಕೋಪನ್ ಹೇಗನ್ ಸ್ಕೂಲ್ ರಚನಾ ಸಿದ್ದಾಂತದ ಪ್ರತಿಪಾದಕರ ಸೈದ್ದಾಂತಿಕ ಚೌಕಟ್ಟಿನಲ್ಲಿ ಭಾಷಾವಿಜ್ಞಾನದ ವಿವರಣೆಯನ್ನು ತಮ್ಮದೇ ಆದ ರೀತಿಯಲ್ಲಿ ನೀಡಿದ್ದಾರೆ.

ಅಮೆರಿಕಾದಲ್ಲಿ, ಸಸ್ಯೂರ್ ನ ಚಿಂತನೆಗಳು ಲಿಯೋನಾರ್ಡ್ ಬ್ಲೂಮ್ ಫೀಲ್ಡ್ ನ ವರ್ಗೀಕರಣದ ಮಾಹಿತಿಯನ್ನು ಬ್ಲೂಮ್ ಫೀಲ್ಡ್ ನಂತರದ ರಚನಾವಾದದ್ ಅ ವಿದ್ವಾಂಸರುಗಳಾದ ಯುಜೀನ್ ನಿಡಾ,ಬರ್ನಾರ್ಡ್ ಬ್ಲಾಚ್,ಜಾರ್ಜ್ ಎಲ್.ಟ್ರಾಗರ್,ರೂಲಾನ್ ಎಸ್. ೩ನೇ ವೆಲ್ಸ್,ಚಾರ್ಲ್ಸ್ ಹಕ್ಕೇಟ್ ಮತ್ತು ಜೀಲಿಂಗ್ ಹ್ಯಾರಿಸ್,ಮತ್ತು ನೋಮ್ ಚಾಮ್ಸ್ಕಿ ಇವರಿಂದ ತಿಳಿಯಬಹುದಾಗಿದೆ. ಚಾಮ್ಸ್ಕಿಯ ರೂಪಾಂತರ ವ್ಯಾಕರಣದ ಸಿದ್ದಾಂತದ ಜೊತೆಯಲ್ಲಿ ,ಇನ್ನಿತರ ಸಮಕಾಲಿನ ರಚನಾವಾದದ ಬೆಳವಣಿಗೆಯು ಕೀನೆತ್ ಫಿಕ್ಸ್ ನ ಟ್ಯಾಗ್ ಮೆಮಿಕ್ ಸಿದ್ದಾಂತ,ಸಿಡ್ನಿ ಲ್ಯಾಂಪ್ಸ್ ನ ಸ್ಟ್ರಾಟಿಫಿಕೇಷನಲ್ ವ್ಯಾಕರಣ ಸಿದ್ದಾಂತದ ಮತ್ತು ಮೈಕಲ್ ಸಿಲ್ವರ್ ಸ್ಟೈನ್ ನ ಕೆಲಸಗಳು ಕೂಡ ಒಳಗೊಂಡಿರುತ್ತದೆ.ಸುವ್ಯವಸ್ಥಿತ ಕಾರ್ಯಾತ್ಮಕ ಭಾಷಾವಿಜ್ಞಾನದ ಸಿದ್ದಾಂತವು ಸಸ್ಯೂರ್ ನ ಸಂಕೇತ ತತ್ವಗಳ ಆಧಾರದ ಮೇಲೆ ಸುವ್ಯವಸ್ಥಿತ ಕಾರ್ಯಾತ್ಮಕ ಸಿದ್ದಾಂತವೆಂದು ಒಪ್ಪಿಕೊಂಡಿದ್ದರು ಕೆಲವು ಮಾರ್ಪಾಡುಗಳನ್ನು ಕೂಡ ಮಾಡಲಾಗಿದೆ. ರುಕ್ವಾಯ್ ಹಸನ್ ನ ಪ್ರಕಾರ ಸುವ್ಯಸ್ಥಿತ ಕಾರ್ಯಾತ್ಮಕ ಭಾಷಾವಿಜ್ಞಾನವು ಸಸ್ಯೂರ್ ನ ನಂತರದ ಭಾಷಾವಿಜ್ಞಾನದ ಸಿದ್ದಾಂತವೆಂದು ತಿಳಿಸಿದ್ದಾನೆ.

ಮೈಕಲ್ ಹ್ಯಾಲಿಡೇಯ ವಾದವೆಂದರೆ;ಸಸ್ಯೂರ್ ಸಂಕೇತವನ್ನು ಭಾಷಾವಿಜ್ಞಾನದ ರಚನೆಯ ಸಂಘಟನಾತ್ಮಕ ಪರಿಕಲ್ಪನೆಯಾಗಿ ತೆಗೆದುಕೊಂಡಿದ್ದು,ಅದನ್ನು ಭಾಷೆಯ "ಲ್ಯಾರ್ಬಿಟ್ರೇರಿಯರ್ ಡು ಸೈನ್" ಎಂಬ ಪದಕೋಶದ ಸಾಂಪ್ರದಾಯಿಕ ಸ್ವರೂಪವನ್ನು ವ್ಯಕ್ತಪಡಿಸಲು ಬಳಸಲಾಗುತ್ತಿದೆ. ಇದು,ಯಾದೃಚ್ಚಿಕತೆಯ ವ್ಯವಸ್ಥೆಯ ಅಂಶದ ಸತ್ಯಾಂಶದಲ್ಲಿನ ಮೂಲಾಂಶಗಳ ಪರಿಣಾಮವನ್ನು,ಅಂದರೆ ಪದಗಳ ಧ್ವನಿಶಾಸ್ತ್ರದ ಆಕಾರ,ಮತ್ತು ಇದರೊಂದಿಗೆ ಸ್ಪಷ್ಟತೆಯ ಉಗಮದ ಯಾದೃಚ್ಚಿಕವಲ್ಲದ ಅಂಶಗಳನ್ನು ಒಳಗೊಳ್ಳುತ್ತದೆ. ಯಾವುದಾದರು ಯಾದೃಚ್ಚಿಕವಲ್ಲದ ಉದಾಹರಣೆಯು ಭಾಷೆಯಲ್ಲಿನ ವಿವಿಧ ರೀತಿಯ ಅರ್ಥಗಳನ್ನು ವಿವಿಧ ರೀತಿಯ ವ್ಯಾಕರಣಾರಚನೆಯನ್ನು ವ್ಯಕ್ತಪಡಿಸುತ್ತದೆ,ಇದು,ಭಾಷಾವಿಜ್ಞಾನದ ರಚನೆಯ ಕಾರ್ಯಾತ್ಮಕತೆಯನ್ನು ವ್ಯಕ್ತಪಡಿಸುವಾಗ ಕಾಣಿಸುತ್ತದೆ.

ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್

ಬದಲಾಯಿಸಿ

ಇದು ಸಸ್ಯೂರ್ ನ ಅತ್ಯಂತ ಪ್ರತಿಷ್ಟಿತ ಕಾರ್ಯ. ಕೋರ್ಸ್ ಇನ್ ಜನರಲ್ ಲಿಂಗ್ವಿಸ್ತಿಕ್ಸ್ (ಕೋರ್ಸ್ ಡಿ ಲಿಂಗ್ವಿಸ್ಟಿಕ್ಸ್ ಜನರಲ್),ಸಸ್ಯೂರ್ ನ ಮರಣಾನಂತರ ೧೯೧೬ ರಲ್ಲಿ ಅವನ ವಿದ್ಯಾರ್ಥಿಗಳಾದ ಚಾರ್ಲ್ಸ್ ಬೆಲ್ಲಿ ಮತ್ತು ಆಲ್ಬರ್ಟ್ ಸೆಬೆಹಾಯ್ ರಿಂದ ಪ್ರಕಟಗೊಂಡಿತು. ಇದು ಜಿನಿವಾದಲ್ಲಿ ಸಸ್ಯೂರ್ ನೀಡಿದ ಉಪನ್ಯಾಸಗಳಿಂದ ಸಂಗ್ರಹಿಸಲ್ಪಟ್ಟ ಅಂಶಗಳ ಆಧಾರದ ಮೇಲೆ ಪ್ರಕಟಗೊಳಿಸಲಾಯಿತು. ಇದು ೨೦ನೇ ಶತಮಾನದ ಭಾಷಾವಿಜ್ಞಾನಗಳಿಗೆ ಅಡಿಪಾಯ ಹಾಕಿಕೊಡುವ ಒಂದು ಪಥವೇ ಆಯಿತು,ಇದು ವಿಷಯದ ಅನುಕ್ರಮಣಿಕೆಗೆ ತಳಹದಿಯಾಗಿದ್ದರೂ(೨೦ನೇಶತಮಾನದ ಇನ್ನಿತರ ಭಾಷಾವಿಜ್ಞಾನಿಗಳ ಹಲವು ಚಿಂತನೆಗಳು ಕೂಡ ಮುಂಚೂಣಿಯಲ್ಲಿದ್ದವು),ಹೊಸತಾದ ಮಾರ್ಗಗಳು ಸಸ್ಯೂರ್ ನ ಭಾಷಾವಿಜ್ಞಾನಡ ಆಯಾಮಗಳ ಚರ್ಚೆಗೆ ಅನ್ವಯಿಸುತ್ತಿದ್ದವು.

ಇದರ ಮುಖ್ಯ ಉದ್ದೇಶ ಭಾಷೆಯು ಒಂದು ವ್ಯವಸ್ಥೆಯಿಂದ ಕೂಡಿದ ಮೂಲಾಂಶಗಳ ಔಪಚಾರಿಕ ವ್ಯವಸ್ಥೆಯಾಗಿದ್ದು,ಪ್ರಾದೇಶಿಕ ಭಾಷೆಗಳ ಉಗಮ ಮತ್ತು ಅರ್ಥಗ್ರಹಣದಿಂದ ಹೊರಗಿದೆ. ಈ ಮೂಲಾಂಶಗಳು ಸಸ್ಯೂರ್ ನ ಭಾಷಾವಿಜ್ಞಾನದ ಸಂಕೇತಗಳಾ ಉದ್ದೇಶವನ್ನು ಒಳಗೊಂಡಿದ್ದು,ಅದು ಸೂಚಕ ಮತ್ತು ಸೂಚಿತಗಳಿಮ್ದ ರಚಿಸಲ್ಪಟ್ಟಿರುವಂತವುಗಳು. ಆದರೂ,ಸಂಕೇತವು ನಿರ್ದೇಶಿತವಾಗಿದ್ದು,ಸಸ್ಯೂರ್ ಇದನ್ನು ಭಾಷಾವಿಜ್ಞಾನಿ ನಿಯಮಗಳ ವ್ಯಾಪ್ತಿಯಿಂದಾಚೆಗಿನ ಕೊನೆಯ ಪ್ರಶ್ನೆಯಾಗಿ ತೆಗೆದುಕೊಂಡನು.

ಲಾರಿಂಜಿಯಲ್ ಥಿಯರಿ

ಬದಲಾಯಿಸಿ

ಸಸ್ಯೂರ್ ವಿದ್ಯಾರ್ಥಿಯಾಗಿದ್ದಾಗ,ಇಂಡೊ-ಯುರೋಪಿಯನ್ ಫಿಲಾಲಜಿಎಂಬ ಪುಸ್ತಕವನ್ನು ಪ್ರಕಟಿಸಿ ಅದು ಪ್ರೊಟೊ-ಇಂಡೊ-ಯುರೋಪಿಯನ್ (ಸೊನೆಂಟ್ ಕೊಫಿಶಿಯಟ್ಸ್) ನಲ್ಲಿನ ಅಸ್ಥಿತ್ವವಾದಿಗಳಾ ಪ್ರಸ್ತಾಪವು ಅಗಿತ್ತು. ಸ್ಕ್ಯಾಂಡೀನೆವಿಯನ್ ನ ವಿಧ್ವಾಂಸ ಹರ್ಮನ್ ಮೊಲ್ಲರ್ ಇವುಗಳು ಅಪ್ಪಟ ಲಾರೆಂಜಿಯಲ್ ವ್ಯಂಜನಗಳಾಗಿದ್ದು,ಲಾರೆಂಜಿಯಲ್ ಥಿಯರಿ ಏನೆಂಬುದನ್ನು ತಿಳಿಸುತ್ತವೆ ಎಂದು ಸಲಹೆ ನೀಡುತ್ತಾನೆ.ಇದು ಒಂದು ವಿವಾದಾತ್ಮಕ ಸಮಸ್ಯೆಯಾಗಿ ಪರಿವರ್ತನೆಗೊಂಡು,ಸಸ್ಯುರ್ ಭಾಷಾವಿಜ್ಞಾನದ ಗೊತ್ತಿರುವ ದತ್ತಾಂಶ ಮತ್ತು ಗೊತ್ತಿಲ್ಲದ ದತ್ತಾಂಶಗಳು ಸಂರಚನಾವಾದದ ಬೆಳವಣಿಗೆಯಲ್ಲಿ ಅವನ ಪ್ರಾಕ್ ಕಲ್ಪನೆ ಯೆನೆಂಬುದನ್ನು ವಿವರಿಸಲು ಪ್ರಯತ್ನಿಸಿದ್ದಾನೆ. ಕೋಫಿಶಿಯೆಂಟ್/ಲಾರೆಂಜಿಯಲ್ ನ ಮುಖ್ಯ ಅಸ್ಥಿತ್ವಗಾರರ ಬಗ್ಗೆ ಸಸ್ಯೂರ್ ನ ಕಾಲಜ್ನಾನವೆನೆಂದರೆ,ಅವರುಗಳ ಅನ್ವೇಷಣೆ,ಹಿಟ್ಟೀ ಟೆಕ್ಸ್ಟ್ಗಳನ್ನು ಕಂಡುಹಿಡಿದು ಸುಮಾರು ಐವತ್ತು ವರ್ಷಗಳಾದ ನಂತರ ಪ್ರತಿಧ್ವನಿಸಿದವೆಂದು ಸಾಬೀತುಪಡಿಸಿದನು.

ಸಿಮಿಯಾಟಿಕ್(ಸಂಕೇತ ಶಾಸ್ತ್ರ)

ಬದಲಾಯಿಸಿ

ಸಸ್ಯೂರ್ ಸಂಕೇತ ವಿಜ್ಞಾನದ ಸಂಸ್ಥಾಪಕ ಪಿತಾಮಹರುಗಳಲ್ಲಿ ಒಬ್ಬ. ಇವನ ಸಂಕೇತ/ಸೂಚಕ/ಸೂಚಿತಗಳು ಸಂಕೇತ ವಲಯದ ಜೀವಾಳುಗಳು. ನಿರ್ಣಾಯಕ ಅಂಶವೆಂದರೆ ಇವು ಸಂಕೇತ ವಿಜ್ಞಾನದಜೀವಾಳುಗಳಾದರು ಕೆಲವೊಮ್ಮೆ ನಿರ್ಲಕ್ಷಣೆಗೆ ಒಳಪಡುತ್ತವೆ ಅಥವಾ ಅನ್ವಯಿಸುವುದಿಲ್ಲ. ಭಾಷಾವಿಜ್ಞಾನದ ವರ್ಣನೆಯ ಸಿಂಟಾಗ್ಮಾಟಿಕ್ ಮತ್ತು ಪ್ಯಾರಡಿಗ್ಮಾಟಿಕ್ನ ಸೂತ್ರದ ಆಯಾಮವು ಹೌದು.

ಹೊರಗಿನ ಭಾಷಾವಿಜ್ಞಾನಿಗಳ ಪ್ರಭಾವ

ಬದಲಾಯಿಸಿ

ಸಂರಚನಾವಾದದಿಂದ ತತ್ವಗಳು ಮತ್ತು ವಿಧಾನಗಳು ಉಪಯೋಗಕ್ಕೆ ಬಂದು,ನಂತರ ಫ್ರೆಂಚ್ ಬುದ್ದಿಜೀವಿಗಳು ಅವುಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅಳವಡಿಸಿಕೊಂಡರು,ಅವರಗಳೆಂದರೆ ರೋಲಾಂಡ್ ಬಾರ್ತ್ಸ್,ಜಾಕಸ್ ಲಾಕೆನ್ ಮತ್ತು ಕ್ಲಾಡ್ ಲೇವಿ-ಸ್ಟ್ರಾಸ್. ಇಂತಹ ಬುದ್ದಿಜೀವಿಗಳು ಸಸ್ಯೂರ್ ನ ಚಿಂತನೆಗಳಿಂದ ಪ್ರಭಾವಿತರಾಗಿ ಅವುಗಳನ್ನು ತಮ್ಮ ಅಧ್ಯಯನ ಕ್ಷೇತ್ರಗಳಲ್ಲಿ (ಸಾಹಿತ್ಯ ಅಧ್ಯಯನ/ತತ್ವಶಾಸ್ತ್ರ,ಮನೋವಿಶ್ಲೇಷಣೆ,ಮಾನವಶಾಸ್ತ್ರ) ಅಳವಡಿಸಿಕೊಂಡಿದ್ದಾರೆ. ಹೀಗಿರುವಾಗ,ಸಸ್ಯೂರ್ ನ ಭಾಷಾವಿಜ್ಞಾನ ಸಿದ್ದಾಂತದ ಬಗೆಗಿನ ಇವರುಗಳ ಸಾಮ್ಯ ವಿವರಣೆಯೆಂದರೆ,ಸಸ್ಯೂರ್ ನ ಕಟ್ಟುಪಾಡುಗಳಲ್ಲಿನ ಸಂರಚನಾವಾದದ ಕೊನೆಯ ಘೋಷಣೆಗಳಾಗಿವೆ ಎಂದು ಹೇಳಿದ್ದಾರೆ.

ಉಲ್ಲೇಖಗಳು

ಬದಲಾಯಿಸಿ