ಪ್ರೋತ್ಸಾಹ ಎಂದರೆ ಒಂದು ಕಾರ್ಯ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಪ್ರೇರಿಸುವಂಥದ್ದು. ಪ್ರೋತ್ಸಾಹ ಸಂರಚನೆಗಳ ಅಧ್ಯಯನವು ಎಲ್ಲ ಆರ್ಥಿಕ ಚಟುವಟಿಕೆಗಳ (ವೈಯಕ್ತಿಕ ತೀರ್ಮಾನ ಮಾಡುವಿಕೆ ಮತ್ತು ಹೆಚ್ಚು ದೊಡ್ಡ ಸಾಂಸ್ಥಿಕ ರಚನೆಯೊಳಗಿನ ಸಹಕಾರ ಹಾಗೂ ಪೈಪೋಟಿ ಎರಡರ ವಿಷಯದಲ್ಲೂ) ಅಧ್ಯಯನಕ್ಕೆ ಕೇಂದ್ರೀಯವಾಗಿದೆ. ಹಾಗಾಗಿ, ಸಮಾಜಗಳ ನಡುವಿನ (ಮತ್ತು ಒಂದು ಸಮಾಜದಲ್ಲಿನ ಸಂಸ್ಥೆಗಳ ನಡುವಿನ) ವ್ಯತ್ಯಾಸಗಳ ಆರ್ಥಿಕ ವಿಶ್ಲೇಷಣೆಯು ಈ ಸಾಮೂಹಿಕ ಪ್ರಯತ್ನಗಳಲ್ಲಿ ಒಳಗೊಂಡ ವ್ಯಕ್ತಿಗಳು ಎದುರಿಸುವ ಪ್ರೋತ್ಸಾಹ ಸಂರಚನೆಗಳಲ್ಲಿನ ವ್ಯತ್ಯಾಸಗಳ ಲಕ್ಷಣ ನಿರೂಪಣೆಗೆ ಸಮಾನವಾಗಿರುತ್ತದೆ. ಪ್ರೋತ್ಸಾಹಗಳು ಹಣಕ್ಕೆ ತಕ್ಕ ಬೆಲೆಯನ್ನು ಒದಗಿಸುವ ಮತ್ತು ಸಂಸ್ಥೆಯ ಯಶಸ್ಸಿಗೆ ಕೊಡುಗೆ ನೀಡುವ ಗುರಿ ಹೊಂದಿರುತ್ತವೆ.[] ವಾಸ್ತವವಾಗಿ ಪ್ರೋತ್ಸಾಹ ವ್ಯವಸ್ಥೆಗಳ ವಿನ್ಯಾಸವು ಒಂದು ಪ್ರಧಾನ ನಿರ್ವಹಣಾ ಚಟುವಟಿಕೆಯಾಗಿದೆ.

ಪ್ರೋತ್ಸಾಹಗಳನ್ನು ವರ್ಗೀಕರಿಸುವುದು

ಬದಲಾಯಿಸಿ

ಒಂದು ನಿರ್ದಿಷ್ಟ ಕ್ರಮಪಥವನ್ನು ತೆಗೆದುಕೊಳ್ಳಲು ಅವು ಘಟಕಗಳನ್ನು ಪ್ರೇರೇಪಿಸುವ ವಿಭಿನ್ನ ಬಗೆಗಳ ಪ್ರಕಾರ ಪ್ರೋತ್ಸಾಹಗಳನ್ನು ವರ್ಗೀಕರಿಸಬಹುದು. ಒಂದು ಸಾಮಾನ್ಯ ಮತ್ತು ಉಪಯುಕ್ತ ವರ್ಗೀಕರಣವು ಪ್ರೋತ್ಸಾಹಗಳನ್ನು ನಾಲ್ಕು ವಿಶಾಲ ವರ್ಗಗಳಾಗಿ ವಿಭಜಿಸುತ್ತದೆ:

  • ಲಾಭದಾಯಕ ಪ್ರೋತ್ಸಾಹಗಳು ಅಥವಾ ಹಣಕಾಸು ಪ್ರೋತ್ಸಾಹಗಳು : ಇವುಗಳಲ್ಲಿ ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಕ್ಕೆ ಪ್ರತಿಫಲವಾಗಿ ಒಂದು ಘಟಕವು ಯಾವುದೋ ರೂಪದ ವಸ್ತುದ್ರವ್ಯ ಬಹುಮಾನವನ್ನು ನಿರೀಕ್ಷಿಸಬಹುದು - ವಿಶೇಷವಾಗಿ ಹಣ.
  • ನೈತಿಕ ಪ್ರೋತ್ಸಾಹಗಳು : ಇವುಗಳಲ್ಲಿ ಒಂದು ನಿರ್ದಿಷ್ಟ ಆಯ್ಕೆಯು ಸರಿಯಾದದ್ದು, ಅಥವಾ ವಿಶೇಷವಾಗಿ ಪ್ರಶಂಸನೀಯವಾದದ್ದು ಎಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ, ಅಥವಾ ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುವಲ್ಲಿನ ವೈಫಲ್ಯವನ್ನು ಅನುಚಿತವೆಂದು ಖಂಡಿಸಲಾಗುತ್ತದೆ.
  • ಒತ್ತಾಯದ ಪ್ರೋತ್ಸಾಹಗಳು : ಇವುಗಳಲ್ಲಿ ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸಲು ವಿಫಲನಾದಾಗ ಅವನ ವಿರುದ್ಧ (ಅಥವಾ ಅವನ ಪ್ರೀತಿಪಾತ್ರರ ವಿರುದ್ಧ) ಸಮುದಾಯದಲ್ಲಿನ ಇತರರು ಶಾರೀರಿಕ ಬಲವನ್ನು ಬಳಸುವರು ಎಂದು ನಿರೀಕ್ಷಿಸಬಹುದು - ಉದಾಹರಣೆಗೆ ಶಿಕ್ಷೆಯಲ್ಲಿ ನೋವುಕೊಡುವುದು, ಅಥವಾ ಸೆರೆವಾಸ ನೀಡುವುದು, ಅಥವಾ ಅವರ ಸ್ವತ್ತುಗಳನ್ನು ಜಪ್ತಿ ಮಾಡುವುದು ಅಥವಾ ನಾಶಮಾಡುವುದು.
  • ಸಹಜ ಪ್ರೋತ್ಸಾಹಗಳು ಅಥವಾ ಸ್ವಭಾವಜನ್ಯ ಪ್ರೇರಣೆ : ಉದಾಹರಣೆಗೆ ಕುತೂಹಲ, ಮಾನಸಿಕ ಅಥವಾ ದೈಹಿಕ ವ್ಯಾಯಾಮ, ಮೆಚ್ಚುಗೆ, ಭಯ, ಕೋಪ, ನೋವು, ಸಂತೋಷ, ಅಥವಾ ಸತ್ಯದ ಬೆನ್ನಟ್ಟುವಿಕೆ, ವಿಶ್ವದಲ್ಲಿನ ವಸ್ತುಗಳು, ವ್ಯಕ್ತಿಗಳು ಅಥವಾ ತಮ್ಮ ಮೇಲೆ ನಿಯಂತ್ರಣ

ಉಲ್ಲೇಖಗಳು

ಬದಲಾಯಿಸಿ
  1. Armstrong, Michael (2015) [2005]. Armstrong's handbook of reward management practice: improving performance through reward (5th ed.). London; Philadelphia: Kogan Page. ISBN 9780749473891. OCLC 910859327.