ಪ್ರಿನ್ಸೆಸ್ ಸ್ಟ್ರೀಟ್, ಮುಂಬೈ
Princess Street' (Mumbai)
'ಪ್ರಿನ್ಸೆಸ್ ಸ್ಟ್ರೀಟ್ ' ದಕ್ಷಿಣ ಮುಂಬಯಿ ನಗರದಲ್ಲಿರುವ ವ್ಯಾಪಾರಸ್ಥಳ. ಪ್ರಖ್ಯಾತ ಮೆಟ್ರೋ ಸಿನೆಮಾ ಕ್ಕೆ ಹತ್ತಿರ. ಇಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ವ್ಯಾಪಾರದ ಅಂಗಡಿಗಳು, ಅತಿ ಪುರಾತನವಾದ ಕಲಾಭಂಡಾರಗಳೂ ಇವೆ. ಸುಪ್ರಸಿದ್ಧ ಪಾರ್ಸಿ ಹಾಲಿನಡೈರಿ ಇರುವುದೂ ಈ ಸ್ಥಳದಲ್ಲೇ. ಕ್ರಾಫರ್ಡ್ ರೋಡ್ ಕಡೆಯಿಂದ ಮೆರಿನ್ ಡ್ರೈ ಫ್ಲೈಓವರ್ ಗೆ ಸಂಪರ್ಕವನ್ನು ಹೊಂದಬಹುದು. ಉತ್ತರದಿಕ್ಕಿಗೆ ಹೋದರೆ, ಮರಿನ್ ಲೈನ್ಸ್ ರೈಲ್ವೆ ಸ್ಟೇಷನ್, ಠಾಕುರ್ ದ್ವಾರ್ ಮತ್ತು ಭುಲೇಶ್ವರ್ ಮಂದಿರ ಗಳಿಗೆ ಹತ್ತಿರ. ಇದಕ್ಕೆ ದಕ್ಷಿಣ ದಿಕ್ಕಿನಲ್ಲಿ ಬಂದರೆ, ಧೋಬಿ ತಲಾವ್ ಸಿಕ್ಕುತ್ತದೆ.