ಪ್ರಾರ್ಥನಾ ಸಮಾಜ
ಪ್ರಾರ್ಥನಾ ಸಮಾಜವನ್ನು ಆತ್ಮಾರಾಂ ಪಾಂಡುರಂಗರವರು ಮುಂಬೈನಲ್ಲಿ ಸ್ಥಾಪಿಸಿದರು. ಈ ಸಮಾಜವು ಶಿಕ್ಷಣ ಪ್ರಸಾರಕ್ಕೆ ಹೆಚ್ಚಿನ ಆದ್ಯತೆ ನಿಡುವ ಸಮಾಜವಗಿತ್ತು.ಮಾನವನ ಸೇವೆಯೇ ಪರಮಾತ್ಮನ ಸೇವೆ ಎಂಬುದು ಇದರ ನೆಲೆಗಟ್ಟಾಗಿತ್ತು. ಡೆಕ್ಕನ್ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಪ್ರಯತ್ನಿಸಿತು.[೧]
ಕಾರ್ಯಕ್ರಮಗಳು
ಬದಲಾಯಿಸಿವಿಧವಾ ವಿವಾಹ, ಸ್ತ್ರೀ ಶಿಕ್ಷಣ, ಅಂತರ್ಜಾತಿ ವಿವಾಹ, ಸಹಭೋಜನ ಕಾರ್ಯಕ್ರಮಗಳನ್ನು ಪ್ರೊರ್ತ್ಸಾಹಿಸಿತು ಬಾಲ್ಯವಿವಾಹ, ಜಾತಿಪದ್ಧತಿ, ವಿಗ್ರಹಾರಾಧನೆ ಪರ್ಧಾಪದ್ಧತಿಯನ್ನು ವಿರೋಧಿಸಿತು. ಸರ್ವಧರ್ಮಗಳು ಸತ್ಯದ ಪ್ರತೀಕವಾಗಿದ್ದು ಅವುಗಳನ್ನು ಗೌರವಿಸಬೇಕೆಂದರು. ಭಾರತದ ಪುನರುಜ್ಜೀವನ ಚಳುವಳಿಯ ಕಾಲದಲ್ಲಿ ಅನಾಥಾಲಯಗಳು, ರಾಷ್ಟ್ರೀಯ ಶಾಲೆಗಳು ಮತ್ತು ವಿಧವಾಶ್ರಮಗಳನ್ನು ಸ್ಥಾಪಿಸಲಾಯಿತು.[೨]
ಎಂ.ಜಿ. ರಾನಡೆ
ಬದಲಾಯಿಸಿಎಂ.ಜಿ. ರಾನಡೆಯವರು ಪ್ರಾರ್ಥನಾ ಸಮಾಜವನ್ನು ಜನಪ್ರಿಯಗೊಳಿಸಿದರು. ಸಮಾಜವನ್ನು ಸುಧಾರಿಸದೆ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುವುದು ಅಸಾಧ್ಯವೆಂದರು. ಹಿಂದೂ, ಮುಸ್ಲಿಂ ಏಕತೆಯ ಪ್ರತಿಪಾದಕರಾಗಿದ್ದರು. ರಾನಡೆಯವರು ರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ಸಕ್ರಿಯರಾಗಿದ್ದರು. ಇವರು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ 1884 ರಲ್ಲಿ ಪ್ರೌಢಶಾಲೆಯನ್ನು ಶಾಲೆಯನ್ನು ಆರಂಭಿಸಿದರು. [೩][೪]
ಉಲ್ಲೇಖಗಳು
ಬದಲಾಯಿಸಿಬಾಹ್ಯ ಕೊಂಡಿಗಳು
ಬದಲಾಯಿಸಿಸಾಹಿತ್ಯ
ಬದಲಾಯಿಸಿ- Suresh K. Sharma and Usha Sharma, Cultural and Religious Heritage of India, vol. VIII: Cultural and Religious Reform Movements, New Delhi, Mittal, (2004) ISBN 81-7099-955-3.