ಪ್ರಾಚೀನ ಸಂಪ್ರದಾಯಗಳು

ಕಾಲ ನಿಲ್ಲುವುದಿಲ್ಲ. ಕಾಲ ಸಾಗಿದಂತೆ ಹೊಸದಗಿದದ್ದು ಹಲಯದಾಗುತ್ತದೆ. ಮನುಷ್ಯ ಹೊಸಹೊಸದನ್ನು ಬಯಸುತ್ತಾ,ಕಾಣುತ್ತಾ ಮುಂದೆ ಸಾಗುತ್ತಾನೆ. ಆಗ ಹಳೆಯ ರೀತಿ-ನೀತಿಗಳು, ಪದ್ದತಿಗಳು ಅವನಿಗೆ ಹೊಂದಿಕೊಳ್ಳದೆ ಹೋಗಬಹುದು. ಒಂದು ಕಾಲಕ್ಕೆ ಸಮಾಜ್ಪಯೂಗಿ ಆಗಿದೀರಬಹುದಾದ ಪದ್ದತಿ- ಸಂಪ್ರದಾಯಗಳು ಬರುಬರುತ್ತಾ ಅನವಶ್ಯಕ ಆಚರನೆಗಲಾಗುತ್ತವೆ.ಇನ್ನೂ ಕಾಲಕಳೆದಂತೆ ಅವು ಅಪ್ರಯೋಜಕ ಪೀಡೆಗಳಾಗಿ ಬಿಡಬಹುದು. ಹಳೆಯ ಸಂಪ್ರದಾಯಗಳುನ್ನು ಆಗ ಬಿಟ್ಟುಕೊದಬೀಕಾಗುತ್ತದೆ ಅಥವಾ ಅದರ ಒಳ್ಳೆಯ ಅಂಶವನ್ನು ಹೊಸ ಸನ್ನಿವೇಶಕ್ಕೆ ಹೊಂದೆಕೊಲ್ಲುವಂತೆ ಮಾರ್ಪ್ರಡಿಸಿಕೊಲ್ಲಬೀಕಾಗುತ್ತದೇ. ಹಳಯದೆಂದು ಬಗೆಯಲೂಬಾರದು. ಹಲ್ಲೆಯದಕ್ಕೆ 'ಅಜ್ಜ ನೆಟ್ಟ ಆಲದ ಮರ'ವೆಂದು ಅದಕ್ಕೆ ನೇನುಹಾಕಿಕೊಲ್ಲಲೂಬಾರದು.

ಯಾವಾಗ ಹಳೆಯ ಸಂಪ್ರದಾಯಗಳು ಸಮಾಜಕ್ಕೆ ಅಥವಾ ವ್ಯಕ್ತಿಗೆ ಬಾರವಾಗಿ ಪೀಡೆಯಾಗಿ ಪರಿಣಮಿಸುತ್ತವೆಯೋ ಆಗ ಅದನ್ನು ತ್ಯಾಗ ಮಾಡಬೇಕಾಗುತ್ತದೆ. ಚರಿತ್ರೆಯಲ್ಲಿ ಬೇಕಾದಷ್ಟು ಉದಾಹರಣೆಗಲಿವೆ. ಇನ್ನೊಂದು ಉದಾಹರಣೆಯಂದರೆ ಬಲಿ ಪದ್ಧತಿ. ಅದನ್ನು ಇಂದು ಪೂರ್ಣವಾಗಿ ತಡೆತಟ್ಟಲಾಗದಿದ್ದರೂ ಶಾಸನದ ದ್ರಿಷ್ಟಿಯಿಂದ ತಡೆತಟ್ಟಲಾಗಿದೆ. ಹಳೆಯ ಸಂಪ್ರದಾಯತಳಲ್ಲಿರುವ ಸದುದ್ದೇಶಗಳನ್ನು ಉಳಿಸಿಕೊಂಡು,ಹೊಸ ವಾತಾವರಣಕ್ಕೆ ಹೊಂದುವಂತೆ ಅವನ್ನು ಮಾರ್ಪಡಿಸಿಕೊಳ್ಳುವುದರಲ್ಲಿ ಜಾಣತನವಿದೆ,ವಿವೆಕವಿದೆ. ಇದನ್ನೇ ಡಿ.ವಿ.ಜಿ. ಅವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ "ಹಳೆ ಬೇರು, ಹೊಸ ಚಿಗುರು" ಎಂದು ಹೇಳಿದ್ದಾರೆ. ಕಾಳಿದಾಸನು ಇದನ್ನೇ "ಹಳೆಯದಾದ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ" ಎಂದು ಹೇಳಿದಾನೆ. ಹೊಸತು ಹಳತುಗಳ ಒಂದು ರಸಪಾಕವನ್ನು ಸಿದ್ದಗೊಳಸಿ ಬಳಸುವಲ್ಲಿ ಮಾನವನ ಹಿರಿಮೆ ಇದೆ. ಕಾಲಕಾಲಕ್ಕೆ ಹಳೆಯ ಪದ್ದತಿಗಳನ್ನು,ವಿಚಾರಗಳನ್ನು ವಿಮರ್ಶಿಸುತ್ತಾ, ಸಂಸ್ಕರಿಸುತ್ತಾ, ಪ್ರಯೋಜನಕಾರಿಗಳನ್ನಾಗಿ ಮಾರ್ಪಡಿಸಿಕೊಳ್ಳಬೇಕು.