ಪ್ರಹ್ಲಾದ ಬೆಟಗೇರಿ

'ಪ್ರಹ್ಲಾದ್ ಬೆಟಗೇರಿ', ಯವರ ರೂಪ ಪರಂಗಿಯವರ ತರಹ. ಅಜಾನುಬಾಹು. ನೂರಾರು ಅಧಿಕ ಸಿನಿಮಾಗಳಲ್ಲಿ ಹತ್ತಕ್ಕೂ ಹೆಚ್ಚು ದಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಆ ಪಾತ್ರಗಳು ಅಷ್ಟೇನೂ ಹೆಚ್ಚು ಕಾಲ ಕಲಾ ರಸಿಕರ ಮನಸ್ಸಿನಲ್ಲಿ ನಿಲ್ಲುವಂತಹದಲ್ಲ. ಕಿರುಪಾತ್ರಗಳು. ಮೆಗಾ ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಾಗಲೂ ಒಪ್ಪಿಕೊಳ್ಳಲಿಲ್ಲ. ತೆರೆಯ ಹಿಂದೆ ಅಂದರೆ ನೇಪಥ್ಯದ ಕೆಲಸದಲ್ಲಿ ಅವರಿಗೆ ಅತಿ ಪ್ರೀತಿ. ಜನಶ್ರೀ ವಾಹಿನಿಯ 'ಇದು ನಮ್ಮ ಊರು 'ಎಂಬ 'ರಿಯಾಲಿಟಿ ಷೋ ನ ವ್ಯವಸ್ಥಾಪಕ'ನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿರ್ದೇಶನ ಮಾತು ಬರವಣಿಗೆಯಲ್ಲಿ ಸಹಾಯಕನಾಗಿ ಹಲವು ಚಲನಚಿತ್ರಗಳಲ್ಲಿ ಮತ್ತು ಟೆಲಿವಿಶನ್ ಗಳಲ್ಲಿ ಕೆಲಸಮಾಡುತ್ತಿದ್ದಾರೆ.

ವ್ಯವಸ್ಥಾಪಕ

ಬದಲಾಯಿಸಿ

ಚಿತ್ರೀಕರಣದ ಸಮಯದಲ್ಲಿ ಬೇಕಾದ ಅನೇಕ ಕೆಲಸಗಳನ್ನು ಒದಗಿಸುವ ನಿಟ್ಟಿನಲ್ಲಿ ಸ್ಥಳೀಯ ಮುಖಂಡರನ್ನು ಭೆಟ್ಟಿಯಾಗಿ ಅವರಿಗೆ ಮನವರಿಕೆ ಮಾಡುವ ಕೆಲಸ ಸ್ಥಳೀಯ ರೌಡಿಗಳನ್ನು ನಿಯಂತ್ರಿಸುವ ಕಾರ್ಯ ಕೆಲವು ವೇಳೆ ಪೊಲೀಸರ ಕಿರುಕುಳ ಗಳನ್ನೂ ನಿಭಾಯಿಸಿ ಸಮಯಕ್ಕೆ ಸರಿಯಾಗಿ ಎಲ್ಲಾ ಏರ್ಪಾಡುಗಳನ್ನು ಮಾಡುವುದು ಸುಲಭವೇನಲ್ಲ. ಸೃಜನ ಶೀಲತೆಯ ಅನಿವಾರ್ಯತೆ ಬಹಳವಾಗಿ ಬೇಕಾಗುತ್ತದೆ. ಗುಜರಾತಿ, ಕನ್ನಡ ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಓದಲು-ಬರೆಯಲು ಬಲ್ಲರು. ಲಂಬಾಣಿ ಪಟ್ಟೆಗಾರ್, ಚೆಂಚು, ಕಂಜರಭಾಟ್, ರಬಾರಿ ಭಾಷೆಗಳಲ್ಲಿ ವ್ಯವಹರಿಸಬಲ್ಲರು. ಭಿನ್ನ ಪರಿಸರದ ವ್ಯಕ್ತಿಗಳ ಜೊತೆ ಒಡನಾಟ, ಭಿನ್ನ ಪರಿಸರಗಳ ಜೊತೆ ಕೆಲಸ ಸಂಭಾಳಿಸುವ ಕೆಲಸ. ದೇಶದಾದ್ಯಂತ ತಮ್ಮ ವೃತ್ತಿಜೀವನದ ಸಮಯದಲ್ಲಿ ಸುತ್ತಿದ್ದಾರೆ. ನವ ದೆಹಲಿ ರಾಜಾಸ್ತಾನ, ಅಹ್ಮದಾಬಾದ್, ಮೌಂಟ್ ಅಬು, ಪಾಳಿ, ಅಂಬಾಜಿ, ಮೊದಲಾದ ಕಡೆ ಅವರು ಕೆಲ ಸಮಯ ವಾಸವಾಗಿದ್ದು, ಅಲ್ಲಿನ ಭಾಷೆಗಳನ್ನೂ ಕಲಿತರು.

ಪರಿವಾರ

ಬದಲಾಯಿಸಿ

ಪ್ರಹ್ಲಾದ್ ಬೆಟಗೇರಿಯವರ ಪತ್ನಿ,, ವಿಜಯಲಕ್ಷ್ಮಿ ಲಂಬಾಣಿ ಜನಾಂಗದವರು. 'ಲಂಕೇಶ್ ಪತ್ರಿಕೆ'ಯಲ್ಲಿ ಸಂಪಾದಕಿಯಾಗಿ ಕೆಲಸ ಮಾಡಿದ್ದರು. ಪ್ರಹ್ಲಾದ್, ಕೊಪ್ಪಳದ ಭಾಗ್ಯನಗರದ ನೇಕಾರ ಜನಾಂಗಕ್ಕೆ ಸೇರಿದವರು. ಹುಬ್ಬಳ್ಳಿಯ ಪಟ್ಟೇಗಾರರು ಬಂಧುಗಳ ತರಹ. ಈ ತರಹದ ಒಡನಾಟಗಳಿಂದ ಕರ್ನಾಟಕದ ಹಲವಾರು ಬುಡಕಟ್ಟು ಮತ್ತು ಹಲವು ಉಪಭಾಷೆಗಳಲ್ಲೂ ವ್ಯವಹರಿಸುವ ಸಾಮರ್ಥ್ಯ ಬಂತು.

ನಟನ ಕಲೆ ಒಲಿದದ್ದು

ಬದಲಾಯಿಸಿ

ಗುಡಗೇರಿ ಬಸವರಾಜ್ ಜೊತೆ ಅವರ ನಾಟಕ ಕಂಪೆನಿಯಲ್ಲಿ ನಟನಾಗಿ ಕೆಲಸಮಾಡಿದರು. ಬೆಂಗಳೂರಿಗೆ ಬಂದು ನೆಲೆಸಿದ ಮೇಲೆ ಸಿನಿಮಾ ಧಾರಾವಾಹಿಗಳಲ್ಲಿ ಕೆಲಸ ಮಾಡಬೇಕಾದ ಪ್ರಸಂಗ ಒದಗಿ ಬಂತು. ' ಈಶ್ವರ ಅಲ್ಲಾ ನೀನೆ ಎಲ್ಲಾ ,' 'ಶಿಶುನಾಳ ಶರೀಫರ ಕುರಿತ ಮೆಗಾ ಧಾರಾವಾಹಿ' ಗೆ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮ ನಿರ್ವಹಿಸುತ್ತಿದ್ದ ಬೆಂಗಳೂರಿನ ಪುಟ್ಟಣ್ಣ ಕಣಗಾಲ್ ಚಿತ್ರ ಮಂದಿರದ ಸಹಾಯಕ ವ್ಯವಸ್ಥಾಪಕನಾಗಿ ಕೆಲಸಮಾಡಿದರು.

ಒಳ್ಳೆಯ ಲೇಖಕ

ಬದಲಾಯಿಸಿ

ಗುಲಾಬಿ, ಜೋಗಿತಿ, ಕವನ ಸಂಗ್ರಹ ಹೊರತಂದಿದ್ದಾರೆ. 'ಸಮಕಾಲೀನ ಗುಜರಾತಿ ಕಥೆಗಳು' ಅನುವಾದ ಸಂಸ ದೀಯ ಪಟು 'ಬಸವರಾಜೇಶ್ವರಿ' ಸಂಶೋಧನಾ ಕೃತಿ, 'ಅಡವಿ ಚೆಂಚರ ಸಂಸ್ಕೃತಿ' ಮಗ ಅಂಕುರ್ ಬೆಟಗೇರಿ ಕವಿ. ಹಾಗು ವಿಮರ್ಶಕ . 'ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯನ್ ಲಿಟರೇಚರ್ ಜರ್ನಲ್' ಗೆ 'ಸಹಾಯಕ ಸಂಪಾದಕ',ನಾಗಿ ಕೆಲಸ ಮಾಡುತ್ತಿದ್ದಾನೆ.

ಕೃಪೆ :ನಾಗು, ೨೦, ಜೂನ್, ೨೦೧೩, ಸುಧಾಪತ್ರಿಕೆ, ಪುಟ.೪೯