ಪ್ರಸ್ತಾರ
ಪ್ರಸ್ತಾರ ಎಂದರೆ ಲಘು ಗುರುಗಳನ್ನು ಗುರುತಿಸುವ ಕ್ರಿಯೆ. ಪ್ರಸ್ತಾರ ಎಂದರೆ ಕಾವ್ಯಗಳಲ್ಲಿ ಲಘು ಗುರುಗಳನ್ನು ಗುರುತಿಸುವ ಕೆಲಸ. ಕನ್ನಡದಲ್ಲಿ ಹಲವು ಬಗೆಯ ವೃತ್ತಗಳು, ಛಂದಸ್ಸು, ರಗಳೆ ಮತ್ತು ಇತರ ಬಗೆಗಳಿವೆ. ಅವೆಲ್ಲವನ್ನೂ ಕಾವ್ಯಗಳಿಗೆ ಪ್ರಸ್ತಾರ ಹಾಕುವ ಮೂಲಕವೇ ಕಂಡುಹಿಡೀಯಬಹುದು.
ಮೂಲ
ಬದಲಾಯಿಸಿಯಾವುದೇ ಪದ್ಯದಲ್ಲಿ ಅಕ್ಷರಗಳನ್ನು ಗುಂಪು ಮಾಡಿ ವಿಂಗಡಿಸಿ, ಅದರ ಛಂದಸ್ಸು ಮತ್ತು ಇತರ ಗುಣಗಳನ್ನು ಗಮನಿಸಬೇಕಾದಾಗ,
ಮಾತ್ರಾಗಣ
ಬದಲಾಯಿಸಿಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು.
ಮಾತ್ರೆ
ಬದಲಾಯಿಸಿಒಂದೇ ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಅಥವಾ ಮಾತ್ರಾ ಎಂದು ಅಳೆಯಲಾಗುವುದು.
ಲಘು
ಬದಲಾಯಿಸಿಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ಎನ್ನುವರು. ಪ್ರಸ್ತಾರ ಮಾಡುವಾಗ, ಎಲ್ಲಾ ಲಘು ಅಕ್ಷರಗಳನ್ನು ( U) ಎಂಬ ಚಿಹ್ನೆ ಬಳಸಿ ಗುರುತಿಸಲಾಗುತ್ತದೆ.
ಗುರು
ಬದಲಾಯಿಸಿಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ಎನ್ನುವರು. ಪ್ರಸ್ತಾರ ಮಾಡುವಾಗ, ಎಲ್ಲಾ ಗುರು ಅಕ್ಷರಗಳನ್ನು ( - )ಎಂಬ ಚಿಹ್ನೆ ಬಳಸಿ ಗುರುತಿಸಲಾಗುತ್ತದೆ.
ಕೆಳಗಿನ ಕಾರಣಗಳಿಂದ ಅಕ್ಷರವು ಗುರು ಎಂದು ಗುರುತಿಸಬಹುದು
ಬದಲಾಯಿಸಿಲಕ್ಷಣ | ಉದಾಹರಣೆ |
---|---|
ದೀರ್ಘಾಕ್ಷರ | _ U ಶಾಲೆ |
ಒತ್ತಕ್ಷರದ ಹಿಂದಿನ ಅಕ್ಷರ | _ U U U ಒ ತ್ತಿ ನ ಣೆ |
ಅನುಸ್ವಾರದಿಂದ ಕೂಡಿರುವ ಅಕ್ಷರ | _ U U ಬಂ ದ ನು |
ವಿಸರ್ಗದಿಂದ ಕೂಡಿರುವ ಅಕ್ಷರ | _ U ದುಃಖ |
ವ್ಯಂಜನಾಕ್ಷರದಿಂದ ಕೂಡಿದ ಅಕ್ಷರ | U U _ ಮನದೊಳ್ |
ಐ ಸ್ವರವಿರುವ ಅಕ್ಷರ | _ U U ಕೈ ಮು ಗಿ |
ಔ ಸ್ವರವಿರುವ ಅಕ್ಷರ | _ U ಮೌ ನ |
ಷಟ್ಪದಿಯ ಮೂರು ಮತ್ತು ಆರನೆಯ ಪಾದದ ಕೊನೆಯ ಅಕ್ಷರ |
ಅಕ್ಷರವು ಲಘು ಎನಿಸುವ ಲಕ್ಷಣಗಳು
ಬದಲಾಯಿಸಿಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.