ಪ್ರಮೀಳಾ ರಾಣಿ ಬ್ರಹ್ಮಾ

ಪ್ರಮೀಳಾ ರಾಣಿ ಬ್ರಹ್ಮಾ (ಜನನ ೧೯೫೧) ಅಸ್ಸಾಂನ ಒಬ್ಬ ಬೋಡೋ ಪಕ್ಷದ ರಾಜಕಾರಣಿ ಮತ್ತು ಸಮಾಜ ಸೇವಕಿ. ಅವರು ೧೯೯೧ ರಿಂದ ೨೦೨೧ ರವರೆಗೆ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್‌ನ ಸದಸ್ಯರಾಗಿ ಕೊಕ್ರಜಾರ್ ಪೂರ್ವ ಕ್ಷೇತ್ರದಿಂದ ಅಸ್ಸಾಂ ವಿಧಾನಸಭೆಯ ಸದಸ್ಯರಾಗಿದ್ದರು. ೨೦೦೬ ರಿಂದ ೨೦೧೦ ರವರೆಗೆ ಅಸ್ಸಾಂ ಸರ್ಕಾರದತರುಣ್ ಗೊಗೊಯ್ ಸಚಿವಾಲಯದಲ್ಲಿ ಅಸ್ಸಾಂ ಸರ್ಕಾರದ ಕೃಷಿ ಮತ್ತು ಬಯಲು ಬುಡಕಟ್ಟು ಮತ್ತು ಹಿಂದುಳಿದ ಜಾತಿಗಳ ಕಲ್ಯಾಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.[] [] [] [] ೨೦೧೬ ರಿಂದ ೨೦೧೯ ರವರೆಗೆ ಅಸ್ಸಾಂ ಸರ್ಕಾರದ ಸರ್ಬಾನಂದ ಸೋನೊವಾಲ್ ಅವರ ಸಚಿವಾಲಯದಲ್ಲಿ ಅರಣ್ಯ ಮತ್ತು ಪರಿಸರ ಖಾತೆ , ಮಣ್ಣಿನ ಸಂರಕ್ಷಣೆ ಮತ್ತು ಗಣಿ ಮತ್ತು ಖನಿಜ ಇಲಾಖೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಶ್ರೀಮತಿ ಪ್ರಮೀಳಾ ರಾಣಿ ಬ್ರಹ್ಮ
೨೦೧೬ ರ ಅಧಿಕೃತ ಭಾವಚಿತ್ರ

ಅಸ್ಸಾಂ ವಿಧಾನಸಭಾ ಕ್ಷೇತ್ರ ಶಾಸಕಿ
ಅಧಿಕಾರ ಅವಧಿ
೧೯೯೧ – ೨೦೨೧
ಪೂರ್ವಾಧಿಕಾರಿ ಚರಣ್ ನಜಾರಿಯ
ಉತ್ತರಾಧಿಕಾರಿ ಲಾರೆನ್ಸ್ ಇಸ್ಲೇರಿ
ಮತಕ್ಷೇತ್ರ ಕೊಕ್ರಾಜಾರ್ ಪೂರ್ವ (ವಿಧಾನ ಸಭಾ ಕ್ಷೇತ್ರ)

ಅಸ್ಸಾಂ ಸರ್ಕಾರದಲ್ಲಿ ಕೃಷಿ, ಸಾಮಾನ್ಯ ಹಿಂದುಳಿದ, ಪರಿಶಿಷ್ಠ ಪಂಗಡ ಸಮಾಜ ಕಲ್ಯಾಣ ಇಲಾಖೆ ಖಾತೆಗಳನ್ನು ನಿರ್ವಹಿಸಿದ್ದಾರೆ.
ಅಧಿಕಾರ ಅವಧಿ
೨೪ ಮೇ ೨೦೧೬ – ೨ ಮೇ ೨೦೧೯
ಪೂರ್ವಾಧಿಕಾರಿ ಅತುವಾ ಮುಂದಾ
ಉತ್ತರಾಧಿಕಾರಿ ಉರ್ಕಾವೋ ಗೌರ್ ಬ್ರಹ್ಮ

ಅಸ್ಸಾಂ ಸರ್ಕಾರದಲ್ಲಿ ಅರಣ್ಯ ಇಲಾಖೆ , ಪರಿಸರ , ಭೂ ಸಂರಕ್ಷಣೆ, ಗಣಿ ಮತ್ತು ಖನಿಜ ಸಂಪನ್ಮೂಲ ಇಲಾಖೆ.
ಅಧಿಕಾರ ಅವಧಿ
೨೦೦೬ – ೨೦೧೦
ವೈಯಕ್ತಿಕ ಮಾಹಿತಿ
ಜನನ ೧೯೫೧
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಬೋಡೋ ಲ್ಯಾಂಡ್ ಪೀಪಲ್ಸ್ ಫ್ರಾಂಟ್
ಅಭ್ಯಸಿಸಿದ ವಿದ್ಯಾಪೀಠ ಬಿ.ಎ. ಕೊಕ್ರಾಜಾರ್ ಕಾಲೇಜ್
ವೃತ್ತಿ ರಾಜಕಾರಣಿ
ಉದ್ಯೋಗ ಸಮಾಜ ಸೇವಕಿ ಮತ್ತು ರಾಜಕಾರಿಣಿ

ಉಲ್ಲೇಖಗಳು

ಬದಲಾಯಿಸಿ